ಪ್ರಧಾನಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಟಿ.ಬಿ.ಜಯಚಂದ್ರ

By Kannadaprabha News  |  First Published Mar 27, 2023, 5:02 AM IST

ಪ್ರಧಾನ ಮಂತ್ರಿಗಳು ಪಾರ್ಲಿಮೆಂಟರಿ ಸೆಕ್ರೆಟರಿಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ರಾಹುಲ್‌ಗಾಂಧಿಯವರ ಸಂಸತ್‌ ಸದಸ್ಯತ್ವವನ್ನು ಅರ್ಹಗೊಳಿಸುವ ಕೆಲಸ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಟಿ.ಬಿ.ಜಯಚಂದ್ರ ಆರೋಪಿಸಿದರು.


  ಶಿರಾ :  ಪ್ರಧಾನ ಮಂತ್ರಿಗಳು ಪಾರ್ಲಿಮೆಂಟರಿ ಸೆಕ್ರೆಟರಿಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ರಾಹುಲ್‌ಗಾಂಧಿಯವರ ಸಂಸತ್‌ ಸದಸ್ಯತ್ವವನ್ನು ಅರ್ಹಗೊಳಿಸುವ ಕೆಲಸ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಟಿ.ಬಿ.ಜಯಚಂದ್ರ ಆರೋಪಿಸಿದರು.

ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ರಾಹುಲ್‌ ಗಾಂಧಿಯವರ ಸದಸ್ಯತ್ವವನ್ನು ಯಾವುದೇ ಶೋಕಾಸ್‌ ನೋಟಿಸ್‌ ನೀಡದೆ ಏಕಾಏಕಿ ರದ್ದುಪಡಿಸಿದ್ದಾರೆ ಎಂದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ? ಪ್ರಜಾಪ್ರಭುತ್ವ ಇವರ ಕೈಯಲ್ಲಿ ಉಳಿಯಲು ಸಾಧ್ಯವೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

Tap to resize

Latest Videos

ಬೋಗಸ್‌ ಹಕ್ಕು ಪತ್ರ ವಿತರಣೆ: ರಾಜ್ಯ ಸರ್ಕಾರ ಕಂದಾಯ ಗ್ರಾಮ ರಚನೆ ಮಾಡುವಲ್ಲಿ ವಿಫಲವಾಗಿದ್ದು, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ಕಾನೂನನ್ನು ಉಲ್ಲಂಘಿಸಿ ಚುನಾವಣೆಯ ಗಿಮಿಕ್‌ಗೋಸ್ಕರ ಬೋಗಸ್‌ ಹಕ್ಕುಪತ್ರಗಳನ್ನು ನೀಡುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅಧಿಕಾರದ ಅವಧಿಯಲ್ಲಿ 2016ರಲ್ಲಿ ದಾಖಲೆರಹಿತ ಜನರು ವಾಸಿಸುವ ಪ್ರದೇಶಗಳನ್ನು ಅಂದರೆ ತಾಂಡಗಳು, ಗೊಲ್ಲರಹಟ್ಟಿಗಳು, ನಾಯಕರಹಟ್ಟಿ, ಕುರುಬರಹಟ್ಟಿ, ಕಾಲೋನಿಗಳನ್ನು ಗುರ್ತಿಸಿ ಕಂದಾಯ ಗ್ರಾಮವನ್ನಾಗಿಸುವ ಗುರಿ ಹೊಂದಿ ಕಾರ್ಯಕ್ರಮ ರೂಪಿಸಿದ್ದು, ಇದಕ್ಕಾಗಿ ಭೂಕಂದಾಯ ಅಧಿನಿಯಮದ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಹು ಉದ್ದೇಶಿತ ಕಾರ್ಯಕ್ರಮವನ್ನು ಹಳ್ಳ ಹಿಡಿಸಿ ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು, ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದರು.

ಬಣ್ಣಬಣ್ಣದ ಹಕ್ಕುಪತ್ರ: ರಾಜ್ಯ ಸರ್ಕಾರ ಹಕ್ಕುಪತ್ರಗಳಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ವಸತಿ ಸಚಿವರು ಹಾಗೂ ಕ್ಷೇತ್ರದ ಶಾಸಕರ ಫೋಟೋಗಳನ್ನು ಹಾಕಿ ಬಣ್ಣಬಣ್ಣದ ಹಕ್ಕು ಪತ್ರಗಳನ್ನು ವಿತರಿಸಲು ಹೊರಟಿದೆ. ಹಕ್ಕು ಪತ್ರ ವಿತರಣೆಯು ಪ್ರಧಾನಮಂತ್ರಿಗಳ ವ್ಯಾಪ್ತಿಗೆ ಬರುತ್ತದೆಯೇ? ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಹಗಲು ರಾತ್ರಿ ಎನ್ನದೆ ತಹಸೀಲ್ದಾರ್‌ ಅವರು ರಾತ್ರಿ 9 ಗಂಟೆಯವರೆಗೂ ಹಕ್ಕುಪತ್ರಗಳಿಗೆ ಸಹಿ ಹಾಕುತ್ತಾ ಕೆಲಸ ಮಾಡುತ್ತಿದ್ದಾರೆ. ಹಕ್ಕು ಪತ್ರಗಳನ್ನು ಆಯಾ ಗ್ರಾಮಗಳಲ್ಲಿ ಗ್ರಾಮ ಸಭೆ ಮಾಡಿ ಗ್ರಾಮ ಪಂಚಾಯಿತಿಗಳು ವಿತರಣೆ ಮಾಡಬೇಕು. ಆದರೆ ಬಿಜೆಪಿ ಸರ್ಕಾರ ಬೇಕಾಬಿಟ್ಟಿಹಕ್ಕುಪತ್ರಗಳನ್ನು ನೀಡುತ್ತಿದೆ ಎಂದರು.

ಮೂಲಸೌಕರ್ಯವಿಲ್ಲದೆ ನರಳುತ್ತಿರುವ ಗೋವುಗಳು: ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮಹಾರಾಷ್ಟ್ರದಿಂದ ಬಂದಿದ್ದ ರೈತರ ಹಸುಗಳನ್ನು ವಶಕ್ಕೆ ಪಡೆದು ತಾಲೂಕಿನ ಸರ್ಕಾರಿ ಗೋಶಾಲೆಗೆ ಬಿಟ್ಟಿದ್ದು, ವಶಕ್ಕೆ ಪಡೆದಿರುವ ಹಸುಗಳು ಎಲ್ಲವೂ ಗರ್ಭ ಧರಿಸಿರುವ ಹಸುಗಳಾಗಿವೆ. ಎಲ್ಲಾ ಹಸುಗಳು ಸುಮಾರು 75 ರಿಂದ 1 ಲಕ್ಷ ಬೆಲೆ ಬಾಳುವ ಹಸುಗಳಾಗಿದ್ದು, ಹಸುಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದೆ ಸುಮಾರು 8 ರಿಂದ 9 ಹಸುಗಳು ಸತ್ತು ಹೋಗಿವೆ. ಈ ದೃಶ್ಯವನ್ನು ನೋಡುತ್ತಿದ್ದರೆ ಕರುಳು ಹಿಂಡುತ್ತದೆ. ರಾಜ್ಯ ಸರ್ಕಾರ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌ ಬರಗೂರು, ಕೆಪಿಸಿಸಿ ಸದಸ್ಯ ಟಿ.ಲೋಕೇಶ್‌, ಮುಖಂಡರಾದ ವಿನಯ್‌, ಡಿ.ಸಿ.ಅಶೋಕ್‌, ನೂರುದ್ದೀನ್‌, ವಾಜರಹಳ್ಳಿ ರಮೇಶ್‌, ಎಸ್‌.ಆರ್‌.ಹರೀಶ್‌ ಸೇರಿದಂತೆ ಹಲವರು ಹಾಜರಿದ್ದರು.

click me!