ಅಡಕೆ ಬೆಳೆಗಾರ ಸದಸ್ಯರ ಪರವಾಗಿ ತಾವು ಎಂದೆಂದಿಗೂ ಕಾರ್ಯನಿರ್ವಹಿಸುವುದಾಗಿ ಮತ್ತು ಮಾಮ್ಕೋಸ್ ಸಂಸ್ಥೆಯು ಯಶಸ್ಸಿನ ಹಾದಿ ಸದಾ ಮುಂದುವರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ (ಸೆ.02): ಅಡಕೆ ಬೆಳೆಗಾರ ಸದಸ್ಯರ ಪರವಾಗಿ ತಾವು ಎಂದೆಂದಿಗೂ ಕಾರ್ಯನಿರ್ವಹಿಸುವುದಾಗಿ ಮತ್ತು ಮಾಮ್ಕೋಸ್ ಸಂಸ್ಥೆಯು ಯಶಸ್ಸಿನ ಹಾದಿ ಸದಾ ಮುಂದುವರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದ ಎಪಿಎಂಸಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಮಾಮ್ಕೋಸ್ ಆಡಳಿತ ಕಚೇರಿಯ ಕಟ್ಟಡದ ಉದ್ಘಾಟನೆಯನ್ನು ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಮೂಲಕ ಉದ್ಘಾಟಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮತ್ರಿ ಬಿ. ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ತು ಸದಸ್ಯರು ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ, ಅವರಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ ಅವರು ಮಾಮ್ಕೋಸ್ ಸಂಸ್ಥೆ ನಡೆದು ಬಂದ ಹಾದಿ ಮತ್ತು ಸದಸ್ಯರಿಗೆ ನೀಡತ್ತಿರುವ ಸೌಲಭ್ಯಗಳ ಕುರಿತು ವಿವರ ನೀಡಿದರು. ಬಿ.ಎಸ್. ಯಡಿಯೂರಪ್ಪ ಅವರು ಮಾಮ್ಕೋಸ್ ಷೇರುದಾರ ಸದಸ್ಯರೂ ಆಗಿದ್ದು, ಸಂಸ್ಥೆಯೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಒಂದು ರೀತಿಯಲ್ಲಿ ‘ಮಾಮ್ಕೋಸ್ ಪೋಷಕರಾಗಿ’ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
undefined
ಕನಕಪುರದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಚಿಂತನೆ: ಸಚಿವ ಶರಣ ಪ್ರಕಾಶ್ ಪಾಟೀಲ್
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅಡಕೆ ಬೆಳೆಗಾರರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲ ಆಗದ ರೀತಿಯಲ್ಲಿ ಹಾಗೂ ಅವರ ಸಮಸ್ಯೆಗೆ ತಾವು ಲೋಕಸಭೆಯಲ್ಲಿ ಧ್ವನಿಯಾಗಿ ಇರುವುದಾಗಿ ಭರವಸೆ ನೀಡಿದರು. ಮಾಜಿ ಗೃಹ ಸಚಿವರು ಹಾಗೂ ಅಡಕೆ ಕಾರ್ಯಪಡೆ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ಮಾತನಾಡಿ, ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸಾಬೀತುಪಡಿಸಲು ಬೆಂಗಳೂರಿನ ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಸೈನ್ಸ್ ಅವರಿಗೆ ಸಂಶೋಧನೆಗೆ ವಹಿಸಿಕೊಟ್ಟಿದೆ. ಇವರಿಂದ ಅಂತಿಮ ವರದಿ ಬರಲು ಬಾಕಿ ಇದೆ.
ನಮಗೆ ಅನ್ಯ ಪಕ್ಷದ ಶಾಸಕರ ಅವಶ್ಯಕತೆಯಿಲ್ಲ: ಡಿ.ಕೆ.ಶಿವಕುಮಾರ್
ಯಡಿಯೂರಪ್ಪನವರು ಮುಖ್ಯ ಮಂತ್ರಿ ಆಗಿದ್ದಾಗ ಎಪಿಎಂಸಿ ಸೆಸ್ ಅನ್ನು ₹1.50 ಗಳಿಂದ ₹0.60 ಪೈಸೆಗೆ ಇಳಿಸಿದ್ದರು. ಇದರಿಂದ ವರ್ತಕರಿಗೆ ಮತ್ತು ಅಡಕೆ ಬೆಳೆಗಾರರಿಗೆ ಅನುಕೂಲವಾಗಿತ್ತು ಎಂದರು. ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ, ಸಂಸದ ರಾಘವೇಂದ್ರ, ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಅವರನ್ನು ಅಭಿನಂದಿಸಲಾಯಿತು. ನಿರ್ದೇಶಕರಾದ ವಿರೂಪಾಕ್ಷಪ್ಪ ಸ್ವಾಗತಿಸಿದರು. ಕೆ.ವಿ.ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಸುರೇಶಚಂದ್ರ ವಂದಿಸಿದರು.