ಸಿನಿಮಾ ವಿಚಾರ ಬಂದಾಗ ಮಾತ್ರ ಮಂಡ್ಯ ಎನ್ನುವ ಕನ್ನಡ ಚಿತ್ರರಂಗ ಕಾವೇರಿ ಹೋರಾಟ ಎಂದ ಕೂಡಲೇ ಸೈಲೆಂಟ್ ಆಗುತ್ತದೆ. ಹಲವಾರು ದಿನಗಳಿಂದ ಕಾವೇರಿ ಹೋರಾಟ ನಡೆಯುತ್ತಿರುವ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದ ಕನ್ನಡ ಚಿತ್ರರಂಗದ ನಟ-ನಟಿಯರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ (ಸೆ.02): ಸಿನಿಮಾ ವಿಚಾರ ಬಂದಾಗ ಮಾತ್ರ ಮಂಡ್ಯ ಎನ್ನುವ ಕನ್ನಡ ಚಿತ್ರರಂಗ ಕಾವೇರಿ ಹೋರಾಟ ಎಂದ ಕೂಡಲೇ ಸೈಲೆಂಟ್ ಆಗುತ್ತದೆ. ಹಲವಾರು ದಿನಗಳಿಂದ ಕಾವೇರಿ ಹೋರಾಟ ನಡೆಯುತ್ತಿರುವ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದ ಕನ್ನಡ ಚಿತ್ರರಂಗದ ನಟ-ನಟಿಯರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಅನ್ನದಾತರು ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ವಿವಿಧ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಕಾವೇರಿ ಹೋರಾಟದ ಸಂಬಂಧ ಚಿತ್ರರಂಗ ಧ್ವನಿ ಎತ್ತದಿರುವುದಕ್ಕೆ ಕಿಡಿಕಾರಿದ್ದಾರೆ.
ನಮಗೆ ಅನ್ಯ ಪಕ್ಷದ ಶಾಸಕರ ಅವಶ್ಯಕತೆಯಿಲ್ಲ: ಡಿ.ಕೆ.ಶಿವಕುಮಾರ್
ಸಿನಿಮಾ ವಿಚಾರ ಬಂದಾಗ ಮಾತ್ರ ಮಂಡ್ಯ ಎನ್ನುವ ಕನ್ನಡದ ನಟ-ನಟಿಯರು. ಕಾವೇರಿ ಹೋರಾಟ ಎಂದ ಕೂಡಲೇ ಮೌನಕ್ಕೆ ಶರಣಾಗುತ್ತಿದೆ. ಕಾವೇರಿ ನೀರಿಲ್ಲದೆ ರೈತರು ಅನುಭವಿಸುತ್ತಿರುವ ಕಷ್ಟ ಚಿತ್ರರಂಗದವರಿಗೆ ಅರಿವಿಲ್ಲವೇ?, ರೈತರ ಬಗೆಗಿನ ಪ್ರೀತಿ, ಗೌರವ, ಅಭಿಮಾನವೆಲ್ಲವೂ ಕೇವಲ ನಟನೆಗೆ ಮಾತ್ರ ಸೀಮಿತವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಚುನಾವಣೆಯ ವೇಳೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುವ ನಟ-ನಟಿಯರು ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳುವುದೇ ಇಲ್ಲ. ಕಾವೇರಿ ನೀರಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕನ್ನಡ ಚಿತ್ರರಂಗವೂ ತಮಿಳುನಾಡಿಗೆ ನೀರು ಹರಿಸುವುದರ ವಿರುದ್ಧ ಸಿಡಿದೆದ್ದಿದ್ದರೆ ಚಳವಳಿ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.
ಮಂಡ್ಯ ಅನ್ನದಾತನ ಬೆನ್ನಿಗೆ ನಿಲ್ಲಬೇಕಿರೋ ಕನ್ನಡ ಚಿತ್ರರಂಗ. ಈಗಲಾದರೂ ಮೌನ ಮುರಿಯಬೇಕು. ಕನ್ನಡ ನಾಡು-ನುಡಿ ವಿಚಾರ ಬಂದಾಗ ಜನರೊಡಗೂಡಿ ಬೀದಿಗಿಳಿದು ಹೋರಾಟ ನಡೆಸಿದ್ದ ಡಾ.ರಾಜಕುಮಾರ್ ಅವರನ್ನು ಮಾದರಿಯಾಗಿಟ್ಟುಕೊಂಡು ಈಗಲಾದರೂ ಚಿತ್ರರಂಗದವರು ಕಾವೇರಿ ಹೋರಾಟಕ್ಕೆ ಧುಮುಕಬೇಕೆಂದು ಒತ್ತಾಯಿಸಿದ್ದಾರೆ.
ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ನಿಷೇಧಕ್ಕೆ ಚಿಂತನೆ: ಯಾಕೆ ಗೊತ್ತಾ?
ಕಾವೇರಿ ಹೋರಾಟ ಮಂಡ್ಯ-ಮೈಸೂರಿಗೆ ಮಾತ್ರ ಸೀಮಿತವಾಗಿದೆ. ಕನ್ನಡ ಚಿತ್ರರಂಗ ಮತ್ತು ಬೆಂಗಳೂರು ಜನರು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಅವರಿಗೂ ಅರಿವು ಮೂಡಿಸಬೇಕು. ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ರೈತರ ನೆರವಿಗೆ ಕನ್ನಡ ನಟ-ನಟಿಯರೂ ನಿಲ್ಲಬೇಕು. ಹೋರಾಟಕ್ಕೆ ಬೆಂಬಲ ಸೂಚಿಸಬೇಕು.
- ದರ್ಶನ್ ಪುಟ್ಟಣ್ಣಯ್ಯ, ಶಾಸಕರು, ಮೇಲುಕೋಟೆ ಕ್ಷೇತ್ರ