ಕರ್ನಾಟಕದಲ್ಲಿ ಸಿನಿಮಾ ಸ್ಕೂಲ್ ಆಗಬೇಕು ಎಂದು ಚಲನಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಆಶಯ ವ್ಯಕ್ತಪಡಿಸಿದರು. ಕನ್ನಡದ ಸಿನಿಮಾಗಳು ಡಿಜಿಟಲ್ ವೇದಿಕೆಯಲ್ಲಿ ರಾರಾಜಿಸುವಲ್ಲಿ ವಿಫಲ ಆಗುತ್ತಿವೆ. ಅಲ್ಲಿ ಅವಕಾಶವನ್ನೇ ಪಡೆಯಲು ಆಗುತ್ತಿಲ್ಲ ಎಂದರು.
ಶಿವಮೊಗ್ಗ (ಫೆ.14): ಕರ್ನಾಟಕದಲ್ಲಿ ಸಿನಿಮಾ ಸ್ಕೂಲ್ ಆಗಬೇಕು ಎಂದು ಚಲನಚಿತ್ರ ನಿರ್ದೇಶಕ ಸತ್ಯಪ್ರಕಾಶ್ ಆಶಯ ವ್ಯಕ್ತಪಡಿಸಿದರು. ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಬೆಳ್ಳಿ ಮಂಡಲ, ಯುಗಧರ್ಮ ಜಾನಪದ ಸಮಿತಿ ಹಾಗೂ ಸಿನಿಮೊಗೆ ಚಿತ್ರಸಮಾಜಗಳ ಆಶ್ರಯದಲ್ಲಿ ಅಂಬೆಗಾಲು-5 ಕಿರುಚಿತ್ರ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೂನಾದಲ್ಲಿ ಸಿನಿಮಾ ಸ್ಕೂಲ್ ಇದೆ. ಸಿನಿಮಾದ ಪ್ರತಿಯೊಂದು ವಿಭಾಗವನ್ನೂ ಪ್ರತ್ಯೇಕವಾಗಿ ಕಲಿಸುತ್ತಾರೆ. ಅಲ್ಲಿಂದ ಬಂದ ಹುಡುಗರು ಮಾಡುವ ಸಿನಿಮಾಗಳು ಅಮೆಜಾನ್, ನೆಟ್ ಫ್ಲಿಕ್ಸ್ ಹೀಗೆ ಒಟಿಟಿ ವೇದಿಕೆಯಲ್ಲಿ ಸುಲಭವಾಗಿ ಸ್ಥಾನ ಗಿಟ್ಟಿಸುತ್ತವೆ ಎಂದರು.
ಕನ್ನಡದ ಸಿನಿಮಾಗಳು ಡಿಜಿಟಲ್ ವೇದಿಕೆಯಲ್ಲಿ ರಾರಾಜಿಸುವಲ್ಲಿ ವಿಫಲ ಆಗುತ್ತಿವೆ. ಅಲ್ಲಿ ಅವಕಾಶವನ್ನೇ ಪಡೆಯಲು ಆಗುತ್ತಿಲ್ಲ. ಇಲ್ಲಿ ಗುಣಮಟ್ಟದ ಕೊರತೆ ಇದೆ. ಅದರಲ್ಲಿ ಸುಧಾರಣೆ ತಂದುಕೊಳ್ಳಬೇಕು. ಡಿಜಿಟಲ್ ವೇದಿಕೆಯಲ್ಲಿ ಕನ್ನಡ ಸಿನಿಮಾ ವೀಕ್ಷಣೆ ಮಾಡುವವರ ಸಂಖ್ಯೆ ಕೂಡ ಕಡಿಮೆ ಇದೆ. ಚಿತ್ರದಲ್ಲಿ ಗುಣಮಟ್ಟ ಇದ್ದರೆ ವೀಕ್ಷಕರು ಸಿಗುತ್ತಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿಯಾದರೂ ಒಂದು ಸಿನಿಮಾ ಸ್ಕೂಲ್ ಮಾಡಬೇಕು. ವಾರದಲ್ಲಿ ಎರಡು ದಿನ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಬಹುದು ಎಂದರು.
ಸಿದ್ದರಾಮಯ್ಯ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ: ನಿಖಿಲ್ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಗಿಡ ಇದೆ, ನೀರು ಹಾಕುವವರೂ ಇದ್ದಾರೆ. ಹಾಗಾಗಿ ಒಳ್ಳೆಯ ಹೂವು, ಹಣ್ಣು ನಿರೀಕ್ಷೆ ಮಾಡಬಹುದು. ಅದಕ್ಕೆ ಸಿನಿಮಾ ಸ್ಕೂಲ್ ನೆರವಾಗುತ್ತದೆ. ರಾಜ್ಯದಲ್ಲಿ ಎಲ್ಲೂ ಸಿಗದ ಅವಕಾಶಗಳು ಶಿವಮೊಗ್ಗೆಯಲ್ಲಿ ಲಭ್ಯವಿದೆ. ‘ಅಂಬೆಗಾಲು’ ನಿಜಕ್ಕೂ ಒಂದು ಪರಿಣಾಮಕಾರಿಯಾದ ವೇದಿಕೆ. ಇದನ್ನು ಸಮರ್ಥವಾಗಿ ಬಳಸಿಕೊಂಡು, ಗಂಭೀರವಾದ ಚಲನಚಿತ್ರಗಳ ನಿರ್ಮಾಣಗಳ ಮೂಲಕ ಸಾರ್ಥಕ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ವಿಧಾನ ಪರಿಷತ್ತು ಸದಸ್ಯ ಹಾಗೂ ‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆ ಸಂಚಾಲಕ ಡಿ.ಎಸ್. ಅರುಣ್ ಪ್ರಾಸ್ತಾವಿಕ ಮಾತನಾಡಿ, ಸಿನೆಮಾಗಾಗಿ ಕಷ್ಟ ಪಡುತ್ತಿರುವ ಸಾವಿರಾರು ಯುವಕರಿದ್ದಾರೆ.
ಜಾತಿ ಹೆಸರಲ್ಲಿ ಪ್ರಲ್ಹಾದ್ ಜೋಶಿ ಟೀಕೆ ಸರಿಯಲ್ಲ: ಲಕ್ಷ್ಮಣ ಸವದಿ
ಆದರೆ ವರ್ಷದಲ್ಲಿ ಗೆಲ್ಲುವುದು ನಾಲ್ಕು - ಐದು ಚಿತ್ರ ಮಾತ್ರ. ಯುವಕರಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡಲು ಈ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಹೇಳಿದರು. ಶಿವಮೊಗ್ಗ ಬೆಳ್ಳಿ ಮಂಡಲದ ವೈದ್ಯ, ನಿರ್ಮಾಪಕ ಡಿ.ಮಂಜುನಾಥ್, ಡಾ.ರಜನಿ ಪೈ, ಡಾ.ಶುಭ್ರತಾ, ‘ಒಗ್ಗರಣೆ ಡಬ್ಬಿ’ ಕೃಷ್ಣಪ್ಪ, ಡಾ.ಧನಂಜಯ ಸರ್ಜಿ, ಜಿ. ವಿಜಯಕುಮಾರ್, ಜಿ.ಅನಂತ, ಡಾ. ನಾಗರಾಜ ಪರಿಸರ, ಕಿರಣ್ ಇನ್ನಿತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್, ಬೆಳ್ಳಿ ಮಂಡಲದ ಹಿರಿಯ ಸದಸ್ಯ ಸಿ.ಎನ್. ಶ್ರೀನಿವಾಸ್ ಅವರಿಗೆ ಪುಷ್ಪಾ ನಮನ ಸಲ್ಲಿಸಲಾಯಿತು.