ಬೊಮ್ಮನಹಳ್ಳಿ ಗ್ರಾಮದ ಹೊಲಗಳಲ್ಲಿ ಹಂದಿಗಳ ಕಾಟ ಹೆಚ್ಚಿದ್ದು, ಅವುಗಳನ್ನು ಸೆರೆ ಹಿಡಿಯುವ ಸಲುವಾಗಿ ರೈತರು ಹಾಕಿದ್ದ ಬೇಲಿ ಬಲೆಯಲ್ಲಿ ಚಿರತೆ ಬಂಧಿ| ನಾಯಿಯನ್ನು ತಿನ್ನಲು ಬಂದ ಚಿರತೆಯ ಮುಂಗಾಲು ಉರುಳಿಗೆ ಸಿಲುಕಿಕೊಂಡಿದ್ದು, ಬಿಡಿಸಿಕೊಳ್ಳಲಾಗದೆ ಸ್ಥಳದಲ್ಲೇ ಬಿದ್ದು ಒದ್ದಾಡಿದೆ|
ದೊಡ್ಡಬಳ್ಳಾಪುರ(ಆ.06): ರೈತರ ಜಮೀನಿನಲ್ಲಿ ಹಂದಿ ಕಾಟ ತಪ್ಪಿಸುವ ಸಲುವಾಗಿ ಹಾಕಲಾಗಿದ್ದ ಉರುಳು(ಬಲೆ)ಗೆ ಚಿರತೆಯೊಂದು ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹುಲುಕುಡಿ ಬೆಟ್ಟದ ಸಮೀಪ ಇರುವ ಬೊಮ್ಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಅನಿರೀಕ್ಷಿತವಾಗಿ ಚಿರತೆ ಸೆರೆಯಾಗಿರುವ ಘಟನೆ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬೊಮ್ಮನಹಳ್ಳಿ ಗ್ರಾಮದ ಹೊಲಗಳಲ್ಲಿ ಹಂದಿಗಳ ಕಾಟ ಹೆಚ್ಚಿದ್ದು, ಅವುಗಳನ್ನು ಸೆರೆ ಹಿಡಿಯುವ ಸಲುವಾಗಿ ರೈತರು ಹಾಕಿದ್ದ ಬೇಲಿ ಬಲೆಯಲ್ಲಿ ಚಿರತೆ ಸೆರೆಯಾಗಿದೆ. ಮಂಗಳವಾರ ತಡರಾತ್ರಿ ಅಥವಾ ಬುಧವಾರ ಬೆಳಗಿನ ಜಾವ ಚಿರತೆ ಸೆರೆಯಾಗಿರಬಹುದು ಎನ್ನಲಾಗಿದೆ. ನಾಯಿಯನ್ನು ತಿನ್ನಲು ಬಂದ ಚಿರತೆಯ ಮುಂಗಾಲು ಉರುಳಿಗೆ ಸಿಲುಕಿಕೊಂಡಿದ್ದು, ಬಿಡಿಸಿಕೊಳ್ಳಲಾಗದೆ ಸ್ಥಳದಲ್ಲೇ ಬಿದ್ದು ಒದ್ದಾಡಿದೆ.
undefined
ದಾಬಸ್‌ಪೇಟೆ: ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಬೆಳಗ್ಗೆ ಚಿರತೆಯನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬನ್ನೇರುಘಟ್ಟದಿಂದ ಆಗಮಿಸಿದ ಅರಣ್ಯ ಸಿಬ್ಬಂದಿ ಅರವಳಿಕೆ ಮದ್ದು ನೀಡಿ, ಚಿರತೆ ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯಕ್ಕೆ ಸಾಗಿಸಿದಾರೆ.