ಇಲ್ಲಿಗೆ ಸಮೀಪದ ಅರಸಾಳು ವಲಯ ವ್ಯಾಪ್ತಿಯ ಮಸರೂರು ಮನ್ನಾ ಜಂಗಲಿಯಲ್ಲಿ ಕಳೆದೊಂದು ವಾರದಿಂದ ಚಿರತೆ ಕಾಣಿಸಿಕೊಂಡಿದ್ದು, ಇಲಾಖೆಯವರು ಅಲುವಳ್ಳಿ ಗ್ರಾಮದ ಗಾಳಿಬೈಲು ಬಳಿಯಲ್ಲಿ ಬೋನ್ ಇಡುವುದರೊಂದಿಗೆ ಚಿರತೆ ಹಿಡಿಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ರಿಪ್ಪನ್‌ಪೇಟೆ (ಡಿ.30) : ಇಲ್ಲಿಗೆ ಸಮೀಪದ ಅರಸಾಳು ವಲಯ ವ್ಯಾಪ್ತಿಯ ಮಸರೂರು ಮನ್ನಾ ಜಂಗಲಿಯಲ್ಲಿ ಕಳೆದೊಂದು ವಾರದಿಂದ ಚಿರತೆ ಕಾಣಿಸಿಕೊಂಡಿದ್ದು, ಇಲಾಖೆಯವರು ಅಲುವಳ್ಳಿ ಗ್ರಾಮದ ಗಾಳಿಬೈಲು ಬಳಿಯಲ್ಲಿ ಬೋನ್ ಇಡುವುದರೊಂದಿಗೆ ಚಿರತೆ ಹಿಡಿಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇದಾದ ಬಳಿಕವೂ ಮಸರೂರು ತೋಟವೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂಬ ಮಾಹಿತಿ ಬಂದಿದೆ. ರೈತರೊಬ್ಬರು ಚಿರತೆಯನ್ನು ನೋಡಿ ಗಾಬರಿಯಿಂದ ಓಡಿ ಬಂದಿದ್ದಾರೆ ಎಂಬ ಸುದ್ದಿ ಸ್ಥಳೀಯರನ್ನು ತೀವ್ರ ಆತಂಕಕ್ಕೆ ತಳ್ಳಿದೆ.
ಇತ್ತೀಚೆಗೆ ಮುಗೂಡ್ತಿ ವಲಯ ವ್ಯಾಪ್ತಿಯಲ್ಲಿನ ಮಳವಳ್ಳಿ(malavalli) ಗ್ರಾಮದಲ್ಲಿ ಚಿರತೆ ದಾಳಿ(Leopard attack)ಯಿಂದ ತುಂಬು ಗಬ್ಬದ ಹಸುವೊಂದು ಬಲಿಯಾಗಿ ಹಸುವಿನ ಹೊಟ್ಟೆಯಲ್ಲಿನ ಕರುವನ್ನು ಸುಮಾರು ಒಂದು ಕಿ.ಮೀ. ದೂರಕ್ಕೆ ಎಳೆದುಕೊಂಡು ಹೋಗಿದ್ದ ವಿಷಯ ಮಾಸುವ ಮುನ್ನವೇ ಅರಸಾಳು ವಲಯ ವ್ಯಾಪ್ತಿಯಲ್ಲಿನ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲುವಳ್ಳಿ ಗ್ರಾಮದ ಗಾಳಿಬೈಲು ಮಜರೆಯಲ್ಲಿ ಕಾಣಿಸಿಕೊಂಡಿದೆ. ಗುರುವಾರ ಪುನಃ ಅಲುವಳ್ಳಿಯ ರೈತರ ಅಡಕೆ ತೋಟದಲ್ಲಿ ಪ್ರತ್ಯಕ್ಷವಾಗಿದೆ. ಇದನ್ನು ಕಂಡ ರೈತ ಪುಟ್ಟರಾಜು ಗಾಬರಿಯಿಂದ ಮನೆಗೆ ಓಡಿ ಬಂದಿದ್ದಾರೆ.
ಚಿತ್ರದುರ್ಗ ನಗರಕ್ಕೆ ಚಿರತೆ ಭೀತಿ: ಚಂದ್ರವಳ್ಳಿ ರಸ್ತೆಯ ಬಂಡೆ ಮೇಲೆ ಮೂರು ಚಿರತೆ ಪ್ರತ್ಯಕ್ಷ
ಅಲ್ಲಗೆಳೆದ ಇಲಾಖೆ:
ಅಲುವಳ್ಳಿ ಬಳಿಯಲ್ಲಿನ ಅಡಕೆ ತೋಟದಲ್ಲಿ ಕಾಣಿಸಿಕೊಂಡ ಚಿರತೆ ಹೆಜ್ಜೆ ಗುರುತಿನ ಬಗ್ಗೆ ರೈತರು(Farmers) ಪೋಟೋ ತೆಗೆದು ಇಲಾಖೆಯವರಿಗೆ ಕಳುಹಿಸಿದರೆ ಇದು ಚಿರತೆ ಹೆಜ್ಜೆಯಲ್ಲ, ನಾಯಿಯ ಹೆಜ್ಕೆ ಗುರುತು ಎಂದು ಅಲ್ಲಗೆಳೆದಿದ್ದಾರೆ ಎಂಬುದು ರೈತರ ಆರೋಪ.
ಒಟ್ಟಾರೆ ಚಿರತೆ ಕುರಿತು ಗ್ರಾಮಸ್ಥರಲ್ಲಿ ಅತಂಕ ಮನೆ ಮಾಡಿದೆ. ಮಾದಾಪುರ- ಕಮದೂರು, ಅಲವಳ್ಳಿ- ತೊಳೆಮದ್ದಲು, ಕೊರಗಿ- ಮಸರೂರು, ಮಾಣಿಕೆರೆ- ಹೊನ್ನಕೊಪ್ಪ- ಖೈರದವರ ಮನೆ ಇನ್ನಿತರ ಗ್ರಾಮಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಸೈಕಲ್ ಬೈಕ್ ಹಾಗೂ ಕಾಲ್ನಡಿಗೆಯಲ್ಲಿ ಬಂದು ಹೋಗುತ್ತಿದೆ. ಚಿರತೆ ಕಾಟದಿಂದಾಗಿ ಮಕ್ಕಳು, ಪೋಷಕರು ಚಿಂತಿಸುವಂತಾಗಿದೆ.
ಚಿರತೆ ದಾಳಿ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಿಚಿರತೆ ದಾಳಿ ಹಿನ್ನೆಲೆ ಮುನ್ನೆಚ್ಚರಿಕೆ ವಹಿಸಿ