Chikkamagaluru News: ಹೊಸಕೆರೆ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್‌ ಸ್ಫೋಟ, ಗೋಡೆ ಕುಸಿತ

By Kannadaprabha News  |  First Published Dec 30, 2022, 7:11 AM IST

: ತಾಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟಕ್ಕೆ ಸಂಬಂಧಪಟ್ಟಸಿಲಿಂಡ​ರಿನ ಗ್ಯಾಸ್‌ ಸೋರಿಕೆಯಾಗಿ ಪಕ್ಕದ ಸ್ಟೋರ್‌ ರೂಂನಲ್ಲಿ ಸ್ಫೋಟ ಸಂಭವಿಸಿ, ಗೋಡೆ ಕುಸಿದುಬಿದ್ದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.


ನರಸಿಂಹರಾಜಪುರ ಡಿ.30 : ತಾಲೂಕಿನ ಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟಕ್ಕೆ ಸಂಬಂಧಪಟ್ಟಸಿಲಿಂಡ​ರಿನ ಗ್ಯಾಸ್‌ ಸೋರಿಕೆಯಾಗಿ ಪಕ್ಕದ ಸ್ಟೋರ್‌ ರೂಂನಲ್ಲಿ ಸ್ಫೋಟ ಸಂಭವಿಸಿ, ಗೋಡೆ ಕುಸಿದುಬಿದ್ದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಗುರುವಾರ ಎಂದಿನಂತೆ ಬಿಸಿಯೂಟ ಅಡುಗೆಯವರು ಹಾಗೂ ಸಹಾಯಕಿಯರು ಶಾಲೆಗೆ ಬಂದು ಅಡುಗೆ ಮನೆ ಬಾಗಿಲು, ಕಿಟಕಿ ತೆರೆದಿದ್ದಾರೆ. ಅನಂತರ ಗ್ಯಾಸ್‌ ಹಚ್ಚಿದ್ದಾರೆ. ಕೆಲವೇ ಸೆಕೆಂಡ್‌ನಲ್ಲಿ ಗ್ಯಾಸ್‌(Gas)ಗೆ ಹಚ್ಚಿದ ಬೆಂಕಿ ಅಡುಗೆ ಮನೆಗೆ ಹೊಂದಿಕೊಂಡೇ ಇರುವ ಸ್ಟೋರ್‌ ರೂಂ(Store room)ಗೆ ನುಗ್ಗಿ ಸ್ಫೋಟ ಸಂಭವಿಸಿದೆ. ಸ್ಫೋಟದ(Cylinder explosion) ರಭಸಕ್ಕೆ ಗೋಡೆ(Wall)ಯ ಒಂದು ಭಾಗ ಕುಸಿದು ಹೊರಗೆ ಉರುಳಿಬಿದ್ದಿದೆ. ಸ್ಟೋರ್‌ ರೂಂನಲ್ಲಿದ್ದ ಆಹಾರ ಸಾಮಗ್ರಿ ತುಂಬಿದ್ದ ಪ್ಲಾಸ್ಟಿಕ್‌ ಚೀಲಗಳ ಮೇಲ್ಭಾಗ ಸುಟ್ಟುಹೋಗಿವೆ. ಉಳಿದ ಸಾಮಗ್ರಿಗಳಿಗೆ ಹಾನಿಯಾಗಿಲ್ಲ.

Tap to resize

Latest Videos

ಶಾಲೆಗೆ ಬಾರದ ಶಿಕ್ಷಕರು; ಕಾದು ಕಾದು ಮನೆಗೆ ಹೋದ ವಿದ್ಯಾರ್ಥಿಗಳು!

ಸ್ಫೋಟಕ್ಕೆ ಕಾರಣವೇನು?:

ಬಿಸಿ​ಯೂಟ(Bisiyoota) ತಯಾ​ರಿ​ಸುವ ಅಡುಗೆಯ ಸಿಬ್ಬಂದಿ ಬುಧವಾರ ಸಿಲಿಂಡರ್‌ ಗ್ಯಾಸ್‌ ಅನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಿರ​ಲಿಲ್ಲ. ಇರುವುದರಿಂದ ಗ್ಯಾಸ್‌ ಸೋರಿಕೆಯಾಗಿದೆ. ಈ ಸೋರಿ​ಕೆ​ಯಾದ ಗ್ಯಾಸ್‌ ಅಡುಗೆ ಮನೆಯ ಪಕ್ಕದ ಸ್ಟೋರ್‌ ರೂಂನಲ್ಲಿ ತುಂಬಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಡುಗೆ ಮನೆಯ ಬಾಗಿಲು, ಕಿಟಕಿ ಸಂಪೂರ್ಣವಾಗಿ ತೆರೆದಿದ್ದರಿಂದ ಅಲ್ಲಿ ಗ್ಯಾಸ್‌ ಹೊರಗೆಹೋಗಿದೆ. ಆದರೆ, ಸ್ಟೋರ್‌ ರೂಂ ಕಿಟಕಿ, ಬಾಗಿಲು ಹಾಕಿದ್ದರಿಂದ ಅಲ್ಲಿ ಸಂಗ್ರ​ಹ​ಗೊಂಡಿದ್ದ ಗ್ಯಾಸ್‌ಗೆ ಬೆಂಕಿ ಹತ್ತಿಕೊಂಡಿರಬಹುದು ಎಂದು ಊಹೆ ಮಾಡಲಾಗಿದೆ. ಘಟ​ನೆ​ಯಲ್ಲಿ ಯಾರಿಗೂ ಅಪಾಯವಾಗಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ವೈ.ಬಿ.ಸುಂದರೇಶ್‌, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ ಮೇಧೂರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌. ಪುಷ್ಪ, ತಾಲೂಕು ಪಂಚಾಯಿತಿ ಇಒ ನಯನ, ಬಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ, ಪಿಡಿಒ ವಿಂದ್ಯಾ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಪೋಷಕರು ಸ್ಥಳ​ಕ್ಕೆ ಭೇಟಿ ಪರಿಶೀಲನೆ ನಡೆಸಿದರು ಮೂಲಸೌಕರ್ಯ ವಂಚಿತ ಹೆಣ್ಣು ಮಕ್ಕಳ ಶಾಲೆ

click me!