ಗ್ರಾಮದ ಯಶೋಧಮ್ಮ ಎಂಬ ಮಹಿಳೆಯನ್ನು ಕೊಂದು ಹಾಕಿದ್ದ ನರಹಂತಕ ಚಿರತೆ, ಬೀರನಕೆರೆ, ಬನ್ನೀಕೆರೆ, ಸುತ್ತಲ ಹಳ್ಳಿಗಳಿಗೂ ನುಗ್ಗಿ ಜನರಲ್ಲಿ ಆತಂಕ ಸೃಷ್ಠಿಸಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.
ಶಿವಮೊಗ್ಗ (ಆ.20): ನಗರದ ಹೊರವಲಯದ ಬಿಕ್ಕೋನಹಳ್ಳಿಯಲ್ಲಿ ಮಹಿಳೆಯನ್ನು ಬಲಿ ಪಡೆದಿದ್ದ ನರಹಂತಕ ಚಿರತೆಯನ್ನು ಬೋನಿಗೆ ಕೆಡವುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಗ್ರಾಮದ ಯಶೋಧಮ್ಮ ಎಂಬ ಮಹಿಳೆಯನ್ನು ಕೊಂದು ಹಾಕಿದ್ದ ನರಹಂತಕ ಚಿರತೆ, ಬೀರನಕೆರೆ, ಬನ್ನೀಕೆರೆ, ಸುತ್ತಲ ಹಳ್ಳಿಗಳಿಗೂ ನುಗ್ಗಿ ಜನರಲ್ಲಿ ಆತಂಕ ಸೃಷ್ಠಿಸಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದರು.
ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ವಿಡಿಯೋ: ದೂರು ದಾಖಲು
ಬನ್ನೀಕೆರೆಯಲ್ಲಿ ಹೊಲಕ್ಕೆ ಹೋಗಿದ್ದ ಯುವಕನೊಬ್ಬನಿಗೆ ಚಿರತೆ ಕಂಡಿತ್ತು. ತಕ್ಷಣ ಕಾರ್ಯೋನ್ಮುಖರಾದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಓಡಾಡುವ ಜಾಗಗಳಲ್ಲಿ 15 ಕಡೆ ಕ್ಯಾಮೆರಾಗಳನ್ನು ಅಳವಡಿಸಿ, 7 ಕಡೆ ಬೋನ್‌ಗಳನ್ನಿರಿಸಲಾಗಿತ್ತು. ಕೊನೆಗೂ ಶನಿವಾರ ಬಿಕ್ಕೋನಹಳ್ಳಿಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಸೆರೆಸಿಕ್ಕ ಚಿರತೆಯನ್ನು ತ್ಯಾವರೆಕೊಪ್ಪದ ಲಯನ್ಸ್ ಸಫಾರಿಗೆ ಬಿಡಲಾಗಿದೆ.