ಕಳೆದ ಒಂದು ವರ್ಷದಿಂದ ತಣ್ಣಗಾಗಿದ್ದ ಧರ್ಮ ದಂಗಲ್ ಕೊಡಗಿನಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹರಿಹರ ಗ್ರಾಮದಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅನ್ಯಧರ್ಮದ ವ್ಯಾಪಾರಿಗಳು ಅಂಗಡಿ ಹಾಕದಂತೆ ನಿಷೇಧ ಹೇರುವಂತೆ ಸ್ಥಳೀಯ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡರು ಒತಾಯಿಸಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ನ.25): ಕಳೆದ ಒಂದು ವರ್ಷದಿಂದ ತಣ್ಣಗಾಗಿದ್ದ ಧರ್ಮ ದಂಗಲ್ ಕೊಡಗಿನಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹರಿಹರ ಗ್ರಾಮದಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅನ್ಯಧರ್ಮದ ವ್ಯಾಪಾರಿಗಳು ಅಂಗಡಿ ಹಾಕದಂತೆ ನಿಷೇಧ ಹೇರುವಂತೆ ಸ್ಥಳೀಯ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡರು ಒತಾಯಿಸಿದ್ದಾರೆ. ಅವರ ಒತ್ತಾಯಕ್ಕೆ ಜಿಲ್ಲೆಯ ಇಬ್ಬರು ಶಾಸಕರಾದ ಮಡಿಕೇರಿಯ ಶಾಸಕ ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಬೆಂಬಲ ಸೂಚಿಸಿದ್ದಾರೆ.
undefined
ಜೊತೆಗೆ ಇಲ್ಲಿ ಅಷ್ಟೇ ಅಲ್ಲ ಎಲ್ಲೆಡೆಯೂ ಇದೇ ರೀತಿ ಹಿಂದೂ ದೇವಾಲಯಗಳ ಬಳಿ, ಜಾತ್ರೆಗಳಲ್ಲಿ ಅನ್ಯಧರ್ಮಿಯರ ವ್ಯಾಪಾರವನ್ನು ನಿಷೇಧ ಮಾಡಬೇಕು ಎಂದಿದ್ದಾರೆ. ಈ ಕುರಿತು ಮಾತನಾಡಿರುವ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಇತ್ತೀಚಿನ ದಿನಗಳಲ್ಲಿ ದೇಶ ವಿದ್ರೋಹಿ ಕೆಲಸಗಳಲ್ಲಿ ಒಂದು ವರ್ಗದ ಜನ, ಅಂದರೆ ಅನ್ಯಕೋಮಿನ ಜನರು ಆ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಎಲ್ಲಾ ಕಡೆ ಪ್ರಾಣ ಹಾನಿ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ. ಊರಿನಲ್ಲಿ ಜಾತ್ರೆ ವಾರ್ಷಿಕೋತ್ಸವಗಳು ನಡೆಯುತ್ತಿವೆ,
Kodagu: ವಿರಾಜಪೇಟೆಯ ಮೊಗರಗಲ್ಲಿಯಲ್ಲಿ 'ನಮ್ಮ ಕ್ಲಿನಿಕ್' ಪ್ರಾರಂಭ
ಮತ್ತೊಂದೆಡೆ ಕುಕ್ಕರ್‌ಗಳಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಜನರೇ ಜಾಗೃತರಾಗಿ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ. ವ್ಯಾಪಾರ ನಿಷೇಧಿಸಲಾಗಿದೆ ಎಂದು ಬ್ಯಾನರ್ ಅಳವಡಿಸಿದರೆ ಸಾಲದು ಇದಕ್ಕೆ ಒಂದು ಒಂದು ಹೆಜ್ಜೆ ಮುಂದೆ ಹೋಗಿ ರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ. ಅನ್ಯಕೋಮಿನವರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅನ್ಯಕೋಮಿನ ಯುವಕರು ಉಗ್ರತರಬೇತಿಗಳಿಗೆ ಹೋಗಿ ಬರುವವರನ್ನು ಜಿಲ್ಲೆಗೆ ಬರಲು ಬಿಡದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಜಿಲ್ಲೆಯಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ.
ಉಗ್ರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಕೂಡ ಇದೆ. ಕೊಡಗಿನಲ್ಲಿ ಅದರದ್ದೇ ಪ್ರತ್ಯೇಕ ಪ್ರದೇಶಗಳಿವೆ. ಮಡಿಕೇರಿ ತಾಲೂಕು, ಸುತ್ತಮುತ್ತ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲೂ ಇವೆ. ಈ ಕುರಿತು ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ ಎಂದಿದ್ದಾರೆ. ಮತ್ತೊಂದೆಡೆ ಮಾತನಾಡಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಹಿಂದೂಪರ ಸಂಘಟನೆಗಳು ಅನ್ಯಕೋಮಿನವರ ವ್ಯಾಪಾರಕ್ಕೆ ತಡೆಯೊಡ್ಡಿರುವುದು ಸರಿ ಇದೆ. ನಾವು ಯಾರನ್ನ ಅಂತ ನಂಬುವುದು. ಕುಕ್ಕರ್ ನಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುತ್ತಿದ್ದಾರೆ. ಮಂಗಳೂರು, ಶಿವಮೊಗ್ಗ ಕೊಯಮತ್ತೂರಿನಲ್ಲಿ ಸ್ಫೋಟಿಸಿದ್ದು ಅವರೇ ಎಂದು ಹೇಳಲಾಗುತ್ತಿದೆ.
ಆದರೆ ಅವರನ್ನ ಬಂಧಿಸುವ ಕೆಲಸ ಆಗಿಲ್ಲ. ಪ್ರಕರಣವನ್ನು ಎನ್‍ಐಎಗೆ ಕೊಟ್ಟ ಬಳಿಕ ಎಲ್ಲಾ ಹೊರಗೆ ಬರುತ್ತಿದೆ. ಅದರ ಮೂಲ ಬೇರಿಗೆ ಹೋಗಿ ತನಿಖೆ ಮಾಡಲಾಗುತ್ತಿದೆ. ರಾಖಿ ಕಟ್ಟಿಕೊಂಡು, ಹಿಂದೂಗಳ ಹೆಸರಿಟ್ಟುಕೊಂಡು ಮತ್ತು ಶಲ್ಯ ಹಾಕಿಕೊಂಡು ಉಗ್ರರ ಕೆಲಸ ಮಾಡುತ್ತಿದ್ದಾರೆ. ಅದು ಹಿಂದೂಗಳೇ ಈ ಕೆಲಸ ಮಾಡುತ್ತಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು. ಅವರನ್ನು ಗುರುತ್ತು ಹಚ್ಚಿ ಅವರಿಗೆ ಶೂಟ್ ಅಂಡ್ ಸೈಟ್ ಆರ್ಡರ್ ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊಡಗಿನಲ್ಲೂ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ.
Chikkamagaluru: ಇಂದಿನಿಂದ ನೂರು ಬೆಡ್ ಆಸ್ಪತ್ರೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಆದ್ದರಿಂದ ಮುಸ್ಲಿಂ ಬಂಧುಗಳು ಕೂಡ ಭಯೋತ್ಪಾದನೆ ಮಟ್ಟ ಹಾಕಲು ಸಹಕಾರ ನೀಡಬೇಕು. ಕೊಡಗು ತೋಟಗಳಿಂದ ಕೂಡಿರುವ ಪ್ರದೇಶವಾಗಿದ್ದು, ಕಳೆದ ಎಂಟು ವರ್ಷಗಳ ಹಿಂದೆ ಅಬ್ದುಲ್ ಮದನಿ ಬಂದು ಜಿಲ್ಲೆಯಲ್ಲಿ ನೆಲೆಸಿದ್ದ. ನನ್ನ ಮನೆಯ ಸಮೀಪವೇ ಬಾಂಬ್ ತಯಾರಿಸುವ ಕೆಲಸ ಮಾಡಿದ್ದ. ಹೂವಿನ ಬುಟ್ಟಿಗಳಲ್ಲಿ ಬಾಂಬ್ ಕೊಂಡೊಯ್ದು ಬೆಂಗಳೂರಿನಲ್ಲಿ ಬ್ಲಾಸ್ಟ್ ಮಾಡಿದ್ದ. ಆದ್ದರಿಂದ ಪೊಲೀಸ್ ಮತ್ತು ಸ್ಪೆಷಲ್ ಬ್ರಾಂಚ್ ಅವರು ಅಲರ್ಟ್ ಆಗಿರಬೇಕು ಎಂದು ಹೇಳಿದರು. ಇನ್ನೂ ಕುರಿತು ಮಾತನಾಡಿರುವ ಭಜರಂಗ ದಳದ ಮುಖಂಡ ಸಂತೋಷ್ ಅನ್ಯಕೋಮಿನ ಜನರು ಇಲ್ಲಿಗೆ ವ್ಯಾಪಾರಕ್ಕೆ ಬರಬಾರದು. ಒಂದು ಬೇಳೆ ಬಂದು ಏನಾದರೂ ಸಮಸ್ಯೆಯಾದರೆ ಅದರ ಪರಿಣಾಮವನ್ನು ಅವರೇ ಎದುರಿಸಬೇಕಾಗುತ್ತದೆ ಎಂದಿದ್ದಾರೆ.