ಶಾಲಾ, ಕಾಲೇಜು, ಗ್ರಾಮಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಾವು ನೋಡಿದ್ದೇವೆ. ಆದ್ರೆ ವಿಜಯಪುರದಲ್ಲಿ ಇದೆ ಮೊದಲ ಬಾರಿಗೆ HIV, ಏಡ್ಸ್ ರೋಗಿಗಳಿಗಾಗಿ ಕಾನೂನು ಜಾಗೃತಿಯ ಕಾರ್ಯಕ್ರಮವೊಂದು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರ (ಆ.21): ಶಾಲಾ, ಕಾಲೇಜು, ಗ್ರಾಮಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಾವು ನೋಡಿದ್ದೇವೆ. ಆದ್ರೆ ವಿಜಯಪುರದಲ್ಲಿ ಇದೆ ಮೊದಲ ಬಾರಿಗೆ HIV, ಏಡ್ಸ್ ರೋಗಿಗಳಿಗಾಗಿ ಕಾನೂನು ಜಾಗೃತಿಯ ಕಾರ್ಯಕ್ರಮವೊಂದು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು. ವಿಜಯಪುರ ಜಿಲ್ಲಾ ಕಾನೂನು ಅರಿವು ಪ್ರಾಧಿಕಾರ ಹಾಗೂ ಸಂಕಲ್ಪ ನೆಟ್‌ವರ್ಕ್ ಸಹಯೋಗದಲ್ಲಿ ಕಾನೂನು ಅರಿವು ಮೂಡಿಸಲಾಯಿತು.
ಹೆಚ್‌ಐವಿ, ಏಡ್ಸ್ ರೋಗಿಗಳಿಗೆ ಕಾನೂನು ಅರಿವು-ನೆರವು: ಒಂದು HIV, AIDS ಗೆ ಮನುಷ್ಯ ತುತ್ತಾದರೆ ಅಲ್ಲಿಗೆ ಜೀವನ ಮುಗಿತು ಎಂದು ಹೇಳಲಾಗುತ್ತೆ. ಆದ್ರೆ ಹಾಗಿಲ್ಲ, ಅದೇಷ್ಟೋ ಹೆಚ್‌ಐವಿ ಸೋಂಕಿತರು ಕಳೆದ 10-20 ವರ್ಷಗಳಿಂದ ಉತ್ತಮವಾಗಿಯೇ ಎಲ್ಲರಂತೆ ಬದುಕು ಸಾಗಿಸುತ್ತಿದ್ದಾರೆ. ಇಂಥ ಅಂಚಿನಲ್ಲಿರುವವರಿಗಾಗಿಯೇ ವಿಜಯಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಕಾನೂನಿನ ಅರಿವು ಮೂಡಿಸಿತು. ಹಾಗೆಯೆ ಇಂಥ ಜೀವನದ ಅಂಚಿನಲ್ಲಿ ಬದುಕು ಸಾಗಿಸುತ್ತಿರುವವರಿಗೆ ಕಾನೂನಿನ ನೆರವು ನೀಡುವ ಸದುದ್ದೇಶದಿಂದ ಸಮಸ್ಯೆಗಳನ್ನ ಆಲಿಸಲಾಯಿತು.
undefined
‘ನಮ್ನೀರು, ನಮ್ಹಕ್ಕು’ ಎಂದವರು ತ.ನಾಡಿಗೆ ಬಿಟ್ಟಿದ್ದೇಕೆ?: ಎಚ್.ಡಿ.ಕುಮಾರಸ್ವಾಮಿ
ತಮ್ಮ ಕಾನೂನು ಸಮಸ್ಯೆಗಳನ್ನ ಮುಂದಿಟ್ಟ ಸೋಂಕಿತರು: ಅರಿವು -ನೆರವು ವಕಾಲತ್ತು ಹೆಸರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳ ಎದುರಿಗೆ ಸೋಂಕಿತರು ತಮಗಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು. ಸೋಂಕಿತರ ಸಮಸ್ಯೆಗಳಿಗೆ ಶೀಘ್ರಸ್ಪಂದನೆಯ ಭರವಸೆಯನ್ನು ಹಿರಿಯ ಶ್ರೇಣಿಯ ನ್ಯಾಯಾಧೀಶರು ನೀಡಿದ್ದು ವಿಶೇಷವಾಗಿತ್ತು. ಕಾನೂನು ಸಂಘರ್ಷಕ್ಕೆ ಒಳಪಟ್ಟ ಸೋಂಕಿರು ಹಲವಾರು ವರ್ಷಗಳ ವರೆಗೆ ಕೋರ್ಟನಲ್ಲಿ ಹೋರಾಡುವ ಶಕ್ತಿಗಳನ್ನ ಹೊಂದಿರುವುದಿಲ್ಲ. ಅಂತವರಿಗೆ ಶೀಘ್ರ ನ್ಯಾಯ ನೀಡುವಂತಹ ವ್ಯವಸ್ಥೆಯಾಗಲಿ ಎಂದು ಸೋಂಕಿತರು ತಮ್ಮ ಆಶಯ ಬಿಚ್ಚಿಟ್ಟರು. ಇದಕ್ಕೆ ಸ್ಪಂದಿಸುವ ಭರವಸೆಯನ್ನು ಸ್ಥಳದಲ್ಲೆ ಹಿರಿಯ ಶ್ರೇಣಿಯ ನ್ಯಾಯಾಧೀಶರು ನೀಡಿದರು.
ಹಿರಿಯ ಶ್ರೇಣಿ ನ್ಯಾಯಾಧೀಶರಿಂದ ಕಾರ್ಯಾಗಾರ ಉದ್ಘಾಟನೆ: ವಿಶೇಷವಾಗಿ ಹೆಚ್‌ಐವಿ, ಏಡ್ಸ್ ಪೀಡಿತರಿಗಾಗಿಯೇ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ನೆರವು ಕಾರ್ಯಾಗಾರವನ್ನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಮಾತನಾಡಿ ಸಮಾಜದಲ್ಲಿ ಅಂಚಿನಲ್ಲಿರುವ ಜನರಿಗೂ ಇತರರಿಗೆ ಇರುವ ಹಕ್ಕುಗಳೆಲ್ಲವು ಪಡೆಯುವ ಹಕ್ಕುಗಳು ಇವೆ ಅವುಗಳನ್ನು ಸದುಪಯೋಗಪಡಿಸುಕೊಳ್ಳುವ ಮೂಲಕ ನ್ಯಾಯ ಪಡೆಯಲು ಮುಂದೆ ಬರಬೇಕು ಮತ್ತು ದೈರ್ಯದಿಂದ ಇರಬೇಕು ಎಂದು ಕರೆಕೊಟ್ಟರು.
ಸೋಂಕಿತರ ವ್ಯಾಜ್ಯಗಳು ಶೀಘ್ರ ವಿಲೇವಾರಿ ಆಗಬೇಕು: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ಅಂಚಿನಲ್ಲಿರುವ ಜನರ ಕೇಸುಗಳು ನ್ಯಾಯಾಲಯಗಳಲ್ಲಿದ್ದರೆ ಅಂತಹ ಕೇಸುಗಳು ಶೀಘ್ರ ವಿಲೇವಾರಿ ಆಗುವ ವ್ಯವಸ್ಥೆಯ ಕಾನೂನು ದೇಶದಲ್ಲಿ ಜಾರಿಯಾಗಬೇಕು ಎಂದರು ಅದಕ್ಕಾಗಿ ಸರಕಾರ ಹಾಗೂ ಹೈಕೋರ್ಟಗಳಲ್ಲಿ ಮನವಿ ಮಾಡಬಹುದು ಎಂದು ತಿಳಿಸಿದರು. ಅದೆಷ್ಟೋ ಜನ ಅಂಚಿನಲ್ಲಿರುವ ಜನರಿಗೆ ಸಮಾಜದಲ್ಲಿ ದೌರ್ಜನ್ಯವಾಗುತ್ತಿದ್ದು ಅದರ ವಿರುದ್ದ ಪ್ರಜ್ಞಾವಂತರು ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಮುಂದೆ ಬರಬೇಕು ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಜಿ .ಎಮ್ .ಹಿರೇಮಠ ಅವರು ಮಾತನಾಡಿ ನೊಂದ ಮತ್ತು ಅಂಚಿನಲ್ಲಿರುವ ಜನರಿಗೆ ವಿಶೇಷವಾಗಿ ಕಾನೂನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕಾನೂನು ಸೇವೆ ನೊಂದವರ ಮನೆ ಬಾಗಿಲಿಗೆ ತಲುಪುವಂತಾಗಬೇಕು ಆಗ ನಿವಾಗಿಯೂ ನೊಂದವರಿಗೆ ನ್ಯಾಯ ಸಿಗುತ್ತದೆ ಎಂದರು. ಸಂಕಲ್ಪ ಸಂಸ್ಥೆಯ ಸಮನ್ವಯ ಅಧಿಕಾರಿ ಅಮರನಾಥ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ವಕೀಲರಾದ ಬಿ.ಕೆ .ಮಠ,ವಕೀಲರ ಸಂಘದ ಗೌರವ ಕಾರ್ಯದರ್ಶಿ ಅಶೋಕ ಜೈನಾಪುರ,ಸಂಜು ಮುದ್ದೇಬಿಹಾಳ,ಮುಂತಾದವರು ಅತಿಥಿಗಳಾಗಿದ್ದರು.
ನಾನು ಬಾಂಬೆ ಬಾಯ್ಸ್ ಟೀಮ್ ಅಲ್ಲ, ಬಿಎಸ್‌ವೈ ಟೀಮ್: ಸಂಸದ ಉಮೇಶ್ ಜಾಧವ್
ಸೋಂಕಿತರ ಜೊತೆಗೆ ನ್ಯಾಯಾಧೀಶರ ಪ್ರಶ್ನೋತ್ತರ: ಮೂರು ತಾಸುಗಳ ವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ನೊಂದ ಸೋಂಕಿತರು ತಮ್ಮ ಸಮಸ್ಯೆಗಳಿಗೆ ಕಾನೂನು ಪರಿಹಾರದ ದಾರಿಗಳ ಬಗ್ಗೆ ಪ್ರಶ್ನೆಗಳ ಮಾಡಿ ಉತ್ತರಗಳನ್ನ ಪಡೆದುಕೊಂಡರು. ವ್ಯಾಜ್ಯಗಳಿಂದಾಗಿ ಹಲವು ಗೊಂದಲಗಳಲ್ಲಿದ್ದ ಸೋಂಕಿತರು ಈ ವೇಳೆ ನೇರವಾಗಿ ನ್ಯಾಯಾಧೀಶರಿಂದಲೇ ಪರಿಹಾರ ಮಾರ್ಗೊಪಾಯಗಳನ್ನ ಪಡೆದಿದ್ದು ಉಪಯುಕ್ತಕಾರಿಯಾಗಿತ್ತು. ಒಟ್ಟಿನಲ್ಲಿ ಪ್ರಶ್ನೆ ಮತ್ತು ಉತ್ತರಗಳ ಮೂಲಕ ಕಾರ್ಯಾಗಾರ ಅರ್ಥಪೂರ್ಣವಾಗಿತ್ತು.