ಸಂಚಾರಿ ಜಾಗೃತ ದಳ ವಾಹನ ತಪಾಸಣೆ ವೇಳೆ ಲಕ್ಷಾಂತರ ಮೌಲ್ಯದ ಇಂನ್ವೆಂಟರ್ ಲ್ಯಾಂಪ್ ಹಾಗೂ ಎಲ್‌ಇಡಿ ಬಲ್ಬ್‌ಗಳು ಪತ್ತೆಯಾಗಿವೆ. ಕೆ.ಎ 25. ಬಿ 2160 ಸರಕು ವಾಹನವನ್ನ ವಶಕ್ಕೆ ಪಡೆಯಲಾಗಿದೆ.
ತುಮಕೂರು(ಏ.01): ಚುನಾವಣಾ ಸಂಚಾರಿ ಜಾಗೃತ ದಳ ಭರ್ಜರಿ ಬೇಟೆಯಾಡಿದೆ. ಹೌದು, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ರೂ. ಮೌಲ್ಯದ ಇಂನ್ವೆಂಟರ್ ಲ್ಯಾಂಪ್ ಹಾಗೂ ಎಲ್‌ಇಡಿ ಬಲ್ಬ್‌ಗಳನ್ನ ವಶಕ್ಕೆ ಪಡೆದ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಬಂಡಿಹಳ್ಳಿ ಗೇಟ್ ಬಳಿ ನಡೆದಿದೆ.
ಸಂಚಾರಿ ಜಾಗೃತ ದಳ ವಾಹನ ತಪಾಸಣೆ ವೇಳೆ ಲಕ್ಷಾಂತರ ಮೌಲ್ಯದ ಇಂನ್ವೆಂಟರ್ ಲ್ಯಾಂಪ್ ಹಾಗೂ ಎಲ್‌ಇಡಿ ಬಲ್ಬ್‌ಗಳು ಪತ್ತೆಯಾಗಿವೆ. ಕೆ.ಎ 25. ಬಿ 2160 ಸರಕು ವಾಹನವನ್ನ ವಶಕ್ಕೆ ಪಡೆಯಲಾಗಿದೆ. ವಾಹನದಲ್ಲಿ 6.84,001 ಲಕ್ಷ ಮೌಲ್ಯದ ಎಲ್‌ಇಡಿ ಬಲ್ಬ್‌ಗಳನ್ನ ಸಾಗಿಸಲಾಗುತ್ತಿತ್ತು. ಸಮರ್ಪಕ ವಿಳಾಸ ಇಲ್ಲದ ಕಾರಣ ವಾಹನವನ್ನ ವಶಕ್ಕೆ ಪಡೆಯಲಾಗಿದೆ.
undefined
ಬೆಂಗಳೂರು: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 18.16 ಕೇಜಿ ಬೆಳ್ಳಿ ವಸ್ತು ಜಪ್ತಿ
ಬೆಂಗಳೂರಿನಿಂದ ತಿಪಟೂರಿಗೆ ವಾಹನ ಬರುತ್ತಿತ್ತು. ತಿಪಟೂರಿನಲ್ಲಿ ಅಸ್ಪಷ್ಟ ವಿಳಾಸ #532/337, 4ನೇ ಮುಖ್ಯರಸ್ತೆ, ಕೆ.ಆರ್ ಬಡಾವಣೆಗೆ ಸಾಗಿಸಲಾಗುತ್ತಿತ್ತು. ವಾಹನದಲ್ಲಿ 10 ಡಬ್ಲೂ ಇಂನ್ವೆಂಟರ್ ಲ್ಯಾಂಪ್, 60 ಬಾಕ್ಸ್ 720 ಸಂಖ್ಯೆಯ ಬಲ್ಬ್‌ಗಳು ಇದ್ದವು.
ಸಂಚಾರಿ ಜಾಗೃತ ದಳದ ಚುನಾವಣಾ ಅಧಿಕಾರಿ ಎಚ್.ಆರ್ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಈ ಸಂಬಂಧ ಲಾರಿ ಚಾಲಕ ರೇಣುಕಯ್ಯನನ್ನ ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.