ಭಿಕ್ಷಾಟನೆ, ಸೆಕ್ಸ್ ವರ್ಕ್ ಬಿಟ್ಟು ಹೋಟೆಲ್‌ ಆರಂಭ: ಸ್ವಾವಲಂಬಿ ಬದುಕು ಕಟ್ಟಿಕೊಂಡ ಮಂಗಳಮುಖಿಯರು !

By Sathish Kumar KH  |  First Published Feb 1, 2023, 7:39 PM IST

ಭಿಕ್ಷಾಟನೆ ಮತ್ತು ಸೆಕ್ಸ್ ವರ್ಕ್ ಮಾಡುವುದಕ್ಕೆ ಗುಡ್ ಬೈ
ಇನ್ನು ಮುಂದೆ ಸ್ವಾವಲಂಬಿ ಜೀವನ ಮಾಡುವುದಾಗಿ ಶಪಥ
ಕ್ಯಾಂಟೀನ್ ತೆರೆದ ಸಮಾಜಿಕ ಕಾರ್ಯವನ್ನು ಆರಂಭಿಸಿದ ಮಂಗಳಮುಖಿಯರು
 


ಉಡುಪಿ (ಫೆ.01): ಇವರೆಲ್ಲ ಹೊರ ಜಿಲ್ಲೆಗಳಿಂದ ಇಲ್ಲಿಗೆ ವಲಸೆ ಬಂದಿರುವ ಮಂಗಳಮುಖಿಯರು. ಕುಟುಂಬ ಮತ್ತು ಸಮಾಜದಿಂದ ದೂರವಾಗಿದ್ದುಕೊಂಡೇ ,ಈ ಸಮಾಜದಲ್ಲಿ ಬದುಕಬೇಕಾದ ಸಂದಿಗ್ಧತೆ ಇವರದ್ದು. ಅದರ ನಡುವೆಯೂ ಭಿಕ್ಷಾಟನೆ ಮತ್ತು ಲೈಂಗಿಕ ಕಾರ್ಯಕರ್ತೆಯರ ಕೆಲಸವನ್ನು ನಿಲ್ಲಿಸಿ ಹೊಸ ಜೀವನ ಪಯಣ ಆರಂಭಿಸಿದ್ದಾರೆ.

ಪೂರ್ವಿ ,ವೈಷ್ಣವಿ ಮತ್ತು ಚಂದನ.ಉಡುಪಿ ಮತ್ತು ಮಣಿಪಾಲ ನಗರದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದ ಮಂಗಳಮುಖಿಯರು.ಕಳೆದ ಹಲವು ವರ್ಷಗಳಿಂದ ಈ ವೃತ್ತಿ ಮಾಡುತ್ತಿದ್ದ ಈ ಮೂವರು ಈಗ ಹೊಸ ನಿರ್ಧಾರಕ್ಕೆ ಬಂದಿದ್ದಾರೆ.ಎಲ್ಲರಂತೆ ಸ್ವಾಭಿಮಾನಿ , ಸ್ವಾವಲಂಬಿ ಬದುಕು ನಡೆಸಬೇಕು ಎಂಬ ಶಪಥ ಮಾಡಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ‌ ಕ್ಯಾಂಟೀನ್ ತೆರೆದಿದ್ದಾರೆ. ನಗರದ ಬಹುತೇಕ ಜನ ಮಲಗಿರುವಾಗ ರಾತ್ರಿ ಒಂದರಿಂದ ಮುಂಜಾನೆ ಏಳರ ತನಕ ಕ್ಯಾಂಟೀನ್ ನಡೆಸುತ್ತಾರೆ.ರೈಸ್ ಬಾತ್ ,ಇಡ್ಲಿ ,ಚಹ, ಕಾಫಿ ಹೀಗೆ ರಾತ್ರಿ ಪ್ರಯಾಣಿಸುವ ಮತ್ತು ರಾತ್ರಿ ಉದ್ಯೋಗದಲ್ಲಿರುವವರ ಹೊಟ್ಟೆ ತಣಿಸುವ ಕೆಲಸ ಇವರದ್ದು.ಈ ಮೂವರು ಸೇರಿ ರುಚಿಯಾದ ತಿಂಡಿ ಮತ್ತು ಚಹಾ ತಯಾರಿಸಿ ಗ್ರಾಹಕರಿಗೆ ಕೊಡುತ್ತಾರೆ.

Tap to resize

Latest Videos

undefined

ಕರಾವಳಿಯಲ್ಲಿ ಹಬ್ಬದ ವಾತಾವರಣ: ರಾಜಕೀಯ ಪಕ್ಷಗಳಿಂದ ಸಾಂಸ್ಕೃತಿಕ ರಸದೌತಣ

ಉಡುಪಿಯಲ್ಲಿ ರಾತ್ರಿ ವೇಳೆಯೂ ಊಟ ಲಭ್ಯ: ರಾತ್ರಿ ವೇಳೆ ನಗರದ ಬಹುತೇಕ ಹೊಟೇಲುಗಳು ಬಂದ್ ಆಗಿರುತ್ತವೆ. ಹಾಗಾಗಿ ಈ ಮಂಗಳಮುಖಿಯರ ಪುಟ್ಟ ಕ್ಯಾಂಟೀನ್ ನಲ್ಲೇ ಜನ ತಿಂಡಿ‌  ಮಾಡಬೇಕು. ಸದ್ಯಕ್ಕೆ ಜನರಿಂದ ಉತ್ತಮ‌ ರೆಸ್ಪಾನ್ಸ್ ಸಿಗುತ್ತಿದೆ. ರೆಸ್ಪಾನ್ಸ್ ಮಾತ್ರವಲ್ಲ, ನಮಗೆ ಎಲ್ಲರಂತೆ ರೆಸ್ಪೆಕ್ಟ್ ಕೂಡ ಕೊಟ್ಟರೆ ಅಷ್ಟೇ ಸಾಕು. ನಮಗೆ ಜನರ ಬೆಂಬಲ‌ ಬೇಕು. ನಾವು ,ಎಲ್ಲರಂತೆ ಬದುಕಿ ತೋರಿಸುತ್ತೇವೆ ಅಂತಾರೆ ಈ ಮಂಗಳಮುಖಿಯರು. ಇತ್ತೀಚೆಗೆ ನಗರದಲ್ಲಿ‌ ನಡೆಯುತ್ತಿದ್ದ ಕೆಲವು ಮಂಗಳಮುಖಿಯರ ದಂಧೆಗೆ ಕಡಿವಾಣ ಹಾಕಲು ಖುದ್ದು ಎಸ್ಪಿಯೇ ಕಾರ್ಯಾಚರಣೆಗೆ ಇಳಿದಿದ್ದರು.ಈ ವೇಳೆ ಎಸ್ಪಿ‌ ಮತ್ತು ಮಂಗಳಮುಖಿಯರ ಮಧ್ಯೆ ಸಣ್ಣ ಜಗಳವೇ ನಡೆದಿತ್ತು..ಇದಲ್ಲದೆ ಮಂಗಳ ಮುಖಿಯರು ಕದಿಯುತ್ತಾರೆ ,ವೇಶ್ಯಾವಾಟಿಕೆ ಮಾಡುತ್ತಾರೆ ಎಂದು ಜನ ಚುಚ್ಚುಮಾತು ಆಡುತ್ತಾರೆ. 

ಇದರಿಂದ ನೊಂದಿರುವ ಈ ಮೂವರು ಹೊಸ ಜೀವನಕ್ಕೆ ಅಡಿ ಇಟ್ಟಿದ್ದಾರೆ. ಜಿಲ್ಲೆಯ ಮೊದಲ ಎಂಬಿಎ ಪದವೀಧರೆ ಮಂಗಳಮುಖಿ ಸಮೀಕ್ಷಾ ಈ ಕ್ಯಾಂಟೀನ್ ಗೆ ಬಂಡವಾಳ ಹಾಕಿ, ಸ್ನೇಹಿತೆಯರ ನೆರವಿಗೆ ನಿಂತಿದ್ದಾರೆ. ಇವರ ಈ ಜೀವನ ಪಯಣಕ್ಕೆ ಒಳಿಯಾಗಲಿ ಎಂದು ಹಾರೈಸೋಣ.

ನೇರ ಪಾವತಿ ವ್ಯವಸ್ಥೆಗಾಗಿ ಹೊರಗುತ್ತಿಗೆ ಕಾರ್ಮಿಕರ ಧರಣಿ
ಉಡುಪಿ (ಫೆ.01): ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ  ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಿ ಹಂತಹಂತವಾಗಿ ಖಾಯಂಗೊಳಿಸುವಂತೆ  ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು. ಫೆ.1ರಿಂದ ಕಸ ಸಾಗಿಸುವ ವಾಹನ ಚಾಲಕರು ನೀರು ಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್ ಒಳಚರಂಡಿ ಕಾರ್ಮಿಕರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಅನಿರ್ದಿಷ್ಟವಧಿ ಮುಷ್ಕರ ಹಮ್ಮಿಕೊಂಡಿದ್ದು, ಹೋರಾಟ ತೀವ್ರ ಗೊಳಿಸಿದ್ದಾರೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು.ನೀರುಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್ ಗಳು ಡಾಟ ಆಪರೇಟರುಗಳು ಸ್ಯಾನಿಟರಿ ಸೂಪರ್ ವೈಸರುಗಳು ಸೇರಿದಂತೆ 15 ಸಾವಿರಕ್ಕು ಹೆಚ್ಚು ನೌಕರರನ್ನು ಗುತ್ತಿಗೆಯಲ್ಲಿ ಉಳಿಸಿ ತಾರತಮ್ಯ ಎಸಗಿದೆ. ಹೊರಗುತ್ತಿಗೆ ನೌಕರರ ನೇರಪಾವತಿ ಹಾಗೂ ಖಾಯಂಗಾಗಿ ಇಂದಿನಿಂದ ರಾಜ್ಯಾದ್ಯಂತ ಕುಡಿಯುವ ನೀರು ಹಾಗೂ ಸ್ವಚ್ಚತೆ ಸ್ಥಗಿತಗೊಳಿಸಿ ಅನಿರ್ದಿಷ್ಟವಧಿ ಧರಣಿ ಆರಂಭಿಸಲಾಯ್ತು.ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ.2017ರಲ್ಲಿ ಪೌರಕಾರ್ಮಿಕರ ನೇಮಕಾತಿಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲೆ ಉಳಿಸಲಾಯಿತು.

ಹಿಂದೂ ಧರ್ಮ ಜಾತ್ಯತೀತತೆಯ ವಿರುದ್ಧವೆಂದು ಬಿಂಬಿಸುವುದು ವ್ಯರ್ಥ ಪ್ರಯತ್ನ: ಕಲ್ಲಡ್ಕ ಪ್ರಭಾಕರ್ ಭಟ್

 

ಒಂದುಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ: ಈಗಲೂ ಸಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲೆ ಮುಂದುವರಿಸುವ ಸರಕಾರದ ನೀತಿ ಒಂದುಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಪೌರಕಾರ್ಮಿಕರ ನೇರನೇಮಕಾತಿಯನ್ನು ಸ್ವಾಗತಿಸುತ್ತೇವೆ ಆದರೆ ಹೊರಗುತ್ತಿಗೆ ನೌಕರರ ನ್ಯಾಯಬದ್ದ ಹಕ್ಕಿಗಾಗಿ ಆಗ್ರಹಿಸುವುದು ನಮ್ಮ ಹಕ್ಕಾಗಿದೆ. ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಧ್ಯೆ ಒಡೆದಾಳುವ ನೀತಿ ಅನುಸರಿಸುವುದು ಯಾವುದೇ ಸರಕಾರಕ್ಕೆ ಶೋಭೆಯಲ್ಲ. ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಹಾಗೂ  ಪೌರಕಾರ್ಮಿಕರನ್ನು ವಿಭಜಿಸಿದೆ.

ವಾಸ್ತವವಾಗಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರು ಸಹ ನಗರಗಳ ಸ್ವಚ್ಚತೆಗೆ ಕುಡಿಯುವ ನೀರು ಪೂರೈಕೆಗೆ ಪರಸ್ಪರ ಪೂರಕವಾಗಿ ದುಡಿಯುವವರೆ ಆಗಿದ್ದಾರೆ. ಆದರೆ ಅಧಿಕಾರಿಗಳು ಈ ನೌಕರರನ್ನು ವಿಭಜಿಸಿ ತಾರತಮ್ಯ ಎಸಗಿದ್ದಾರೆ. ಸರಕಾರ ಆಗಿರುವ ಲೋಪವನ್ನು ಸರಿಪಡಿಸಿ ಹೊರಗುತ್ತಿಗೆ ನೌಕರರನ್ನು ಪೌರಕಾರ್ಮಿಕರ ಮಾದರಿಯಲ್ಲಿ  ನೇರಪಾವತಿಗೊಳಪಡಿಸಿ ಹಂತಹಂತವಾಗಿ   ಖಾಯಂಗೊಳಿಸುವಂತೆ  ಕೋರಿದ್ದಾರೆ. ರಾಜ್ಯದ 330ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ಕುಡಿಯುವ ನೀರು ಹಾಗೂ ಕಸ ವಿಲೇವಾರಿಯಲ್ಲಿ  ನಾಗರೀಕರಿಗೆ ಆಗುವ ಅನಾನೂಕೂಲಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ.ನಾಗರೀಕರು ಸಹ ನಮ್ಮ ಹೋರಾಟದಲ್ಲಿ ಕೈ ಜೋಡಿಸುವಂತೆ ಬಡ ನೌಕರರು ಮನವಿ ಮಾಡಿದ್ದಾರೆ.

click me!