
ತುಮಕೂರು(ಸೆ.07): ಕೇವಲ ಚುನಾವಣಾ ದೃಷ್ಟಿಯಿಂದಲೇ ಲಕ್ಷ್ಮಣ್ ಸವದಿ ಅವರಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತುಮಕೂರಿನಲ್ಲಿ ಹೇಳಿದ್ದಾರೆ. ಡಿಕೆಶಿ ಭೇಟಿ, ಟ್ರಾಫಿಕ್ ರೂಲ್ಸ್ ಬಗ್ಗೆ ತುಮಕೂರಿನಲ್ಲಿ ಮಾತನಾಡಿದ ಅವರು ಸವದಿ ಅವರಿಗೆ ಮಂತ್ರಿ ಸ್ಥಾನ ನೀಡಿರೋ ಬಗ್ಗೆಯೂ ಮಾತನಾಡಿದ್ದಾರೆ.
ಪಕ್ಷದ ಹಿತದೃಷ್ಟಿಯಿಂದ ಸವದಿಗೆ ಮಂತ್ರಿ ಸ್ಥಾನ:
ಕೇವಲ ಪಕ್ಷದ ಹಿತದೃಷ್ಟಿಯಿಂದ ಲಕ್ಷ್ಮಣಸವದಿ ಅವರನ್ನು ಮಂತ್ರಿ ಮಾಡಲಾಗಿದೆ. ಈಗ ಮಹಾರಾಷ್ಟ್ರ ಚುನಾವಣೆ ಹತ್ತಿರ ಇರೋದ್ರಿಂದ ಪಕ್ಷಕ್ಕೆ ಸವದಿ ಅವರ ಅಗತ್ಯ ಇದೆ. ಪಕ್ಷಕ್ಕೆ ಬಹಳ ಬೇಕಾಗಿರೋದ್ರಿಂದ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ಚುನಾವಣಾ ದೃಷ್ಟಿಯಿಂದಷ್ಟೇ ಸವದಿ ಅವರನ್ನ ಆಯ್ಕೆ ಮಾಡಿರೋದು. ಬೇರೆ ಯಾವ ಕಾರಣಕ್ಕೂ ಅಲ್ಲ ಎಂದು ಸಚಿವ ಮಾಧುಸ್ವಾಮಿ ಒತ್ತಿ ಹೇಳಿದ್ದಾರೆ.
ಫ್ರೆಂಡ್‌ಶಿಪ್ ಬೇರೆ, ಪಾಲಿಟಿಕ್ಸ್ ಬೇರೆ , ಡಿಕೆಶಿ ಭೇಟಿ ಬಗ್ಗೆ ಮಾಧುಸ್ವಾಮಿ ಸ್ಪಷ್ಟನೆ
ಆ ಭಾಗದಲ್ಲಿ ಹತ್ತೋ ಇಪ್ಪತ್ತೋ ಸೀಟುಗಳು ಬಿಜೆಪಿಗೆ ಬರಬುದೆನ್ನುವ ಉದ್ದೇಶದಿಂದ ಮಂತ್ರಿ ಸ್ಥಾನ ಕೊಡಲಾಗಿದೆ. ಪಕ್ಷಕ್ಕಾಗಿ ದುಡಿಯೋರಿಗೆ ಮಂತ್ರಿ ಸ್ಥಾನ ಕೊಡೋದ್ರಲ್ಲಿ ತಪ್ಪಿಲ್ಲ. ಮಹರಾಷ್ಟ್ರದ ಚುನಾವಣಾ ದೃಷ್ಟಿಯಿಂದಲೇ ಸವದಿ ಅವರನ್ನ ಆಯ್ಕೆ ಮಾಡಿದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
50, 100 ದಂಡ ಕಟ್ಟಿ ಮತ್ತೆ ತಪ್ಪು ಮಾಡೋರಿಗಾಗಿ ಹೊಸ ಟ್ರಾಫಿಕ್ ರೂಲ್ಸ್: ಮಾಧುಸ್ವಾಮಿ