ಫ್ರೆಂಡ್‌ಶಿಪ್ ಬೇರೆ, ಪಾಲಿಟಿಕ್ಸ್ ಬೇರೆ , ಡಿಕೆಶಿ ಭೇಟಿ ಬಗ್ಗೆ ಮಾಧುಸ್ವಾಮಿ ಸ್ಪಷ್ಟನೆ

By Web Desk  |  First Published Sep 7, 2019, 2:56 PM IST

ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡೋ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಜೊತೆ ಮಾತನಾಡಿರುವುದಕ್ಕೆ ಮಾಧುಸ್ವಾಮಿ ಫ್ರೆಂಡ್‌ಶಿಪ್, ಪಾಲಿಟಿಕ್ಸ್‌ ಬಗ್ಗೆ ಹೇಳಿರೋ ಮಾತುಗಳೇನು ಎಂದು ತಿಳಿಯಲು ಈ ಸುದ್ದಿ ಓದಿ.


ತುಮಕೂರು(ಸೆ.07): ಕಾನೂನು ಸಚಿವ ಮಾಧುಸ್ವಾಮಿ ಅವರು ತುಮಕೂರಿನಲ್ಲಿ ಫ್ರೆಂಡ್‌ಶಿಪ್ ಹಾಗೂ ಪಾಲಿಟಿಕ್ಸ್‌ ಬಗ್ಗೆ ಮಾತನಾಡಿದ್ದಾರೆ. ಹೊಸ ಟ್ರಾಫಿಕ್ ರೂಲ್ಸ್‌ ಬಗ್ಗೆ ಮಾತನಾಡಿದ ಅವರು  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ಅರೆಸ್ಟ್ ಆಗೋ ದಿನ ಅರ್ಧ ಗಂಟೆ ಮಾತಾಡಿದ್ವಿ:

Tap to resize

Latest Videos

undefined

ರಮೇಶ್ ಜಾರಕಿಹೊಳಿ ಡಿಕೆಶಿಯನ್ನ ಭೇಟಿ ಮಾಡೋ ವಿಚಾರವಾಗಿ ಪ್ರತಿಕ್ರಿಯಿಸಿ, ಗೆಳೆತನ ಬೇರೆ ಪಾಲಿಟಿಕ್ಸ್ ಬೇರೆ, ಅವರು ಅರೆಸ್ಟ್ ಆಗೋದಿನ ನನ್ನ ಬಳಿ ಅರ್ಧಗಂಟೆ ಮಾತಾಡಿದ್ರು. ಕರ್ನಾಟಕ ಭವನದಲ್ಲಿ ಸುಮಾರು ಅರ್ಧಗಂಟೆಗಳ ಕಾಲ ನಾವಿಬ್ಬರೂ ಮಾತನಾಡಿದ್ದೆವು ಎಂದು ಅವರು ಹೇಳಿದ್ದಾರೆ.

50, 100 ದಂಡ ಕಟ್ಟಿ ಮತ್ತೆ ತಪ್ಪು ಮಾಡೋರಿಗಾಗಿ ಹೊಸ ಟ್ರಾಫಿಕ್ ರೂಲ್ಸ್‌: ಮಾಧುಸ್ವಾಮಿ

ಕಷ್ಟದಲ್ಲಿರೋರನ್ನ ಮಾತಾಡ್ಸೋದ್ರಲ್ಲಿ ಯಾವುದೇ ತಪ್ಪಿಲ್ಲ. ರಮೇಶ್ ಜಾರಕಿಹೊಳಿಯವರಿಗೂ ಡಿಕೆಶಿಗೂ ಯಾವುದೋ ವಿಚಾರವಾಗಿ ಭಿನ್ನಾಭಿಪ್ರಾಯ ಇದ್ದಿರಬಹುದು.ಹಾಗೆಂದು ಮಾತನಾಡಿಸೋದು ಬೇಡ್ವಾ ಎಂದವರು ಪ್ರಶ್ನಿಸಿದ್ದಾರೆ.

click me!