
ಬೆಳಗಾವಿ(ಜ.09): ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಖಾಸಗಿ ಕಾರಿಗೆ ಅವರ ಚಾಲಕ ಬಸ್ ಡಿಪೋದಲ್ಲಿನ ಬಂಕ್‌ನಿಂದ 44 ಲೀಟರ್ ಡೀಸೆಲ್ ಹಾಕಿಸಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಳಗಾವಿಯ ಸಾರಿಗೆ ಸಂಸ್ಥೆಯ ಮೂರನೇ ಬಸ್ ಡಿಪೋದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿರುವ ವಿಶ್ರಾಂತಿ ಗೃಹದ ಉದ್ಘಾಟನೆಗೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಆಗಮಿಸಿದ್ದರು.
ಈ ವರ್ಷ 24 ಲಕ್ಷ ಮನೆಗಳಿಗೆ ನಲ್ಲಿ ನೀರು
ಸವದಿ ವಿಶ್ರಾಂತಿ ಗೃಹ ಉದ್ಘಾಟಿಸುತ್ತಿದ್ದರೆ, ಅವರ ಚಾಲಕ ಬಸ್ ಡಿಪೋದಲ್ಲಿನ ಬಂಕ್‌ನಿಂದ ಕಾರಿಗೆ ಪುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡಿದ್ದಾರೆ. ಒಟ್ಟು .3432 ಮೌಲ್ಯದ ಡೀಸೆಲ್ ತುಂಬಿಸಿಕೊಂಡಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳಿಗೆ ಡೀಸೆಲ್ ಹಾಕಲು ಮಾತ್ರ ಡಿಪೋದಲ್ಲಿ ಬಂಕ್ ತೆರೆಯಲಾಗಿದೆ. ಆದರೆ, ಸವದಿ ಅವರ ಖಾಸಗಿ ವಾಹನಕ್ಕೆ ಡೀಸೆಲ್ ತುಂಬಿಸಿರುವುದು ತೀವ್ರ ಚರ್ಚೆಗೆ ಎಡೆಮಾಡಿದೆ.
ನನ್ನ ಖಾಸಗಿ ಕಾರಿಗೆ ಡೀಸೆಲ್ ಹಾಕಿಸಲು ಚಾಲಕನಿಗೆ ಹಣವನ್ನೂ ನೀಡಿದ್ದೆ. ನನ್ನ ಗಮನಕ್ಕೆ ಬಾರದೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮಾಡಿದ ಅಚಾತುರ್ಯದಿಂದ ಕೆಲವರು ಬೇಕಂತಲೇ ಊಹಾಪೋಹ ಸೃಷ್ಟಿಸುವುದು ಸರಿಯಲ್ಲ. ಡೀಸೆಲ್ ಹಣವನ್ನು ಸಾರಿಗೆ ಇಲಾಖೆಗೆ ಸಂದಾಯ ಮಾಡುವಂತೆ ಚಾಲಕನಿಗೆ ಸೂಚಿಸಿದ್ದೇನೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.