ಮೈಸೂರಿನ ಹೈಕಮಾಂಡ್ ಎಂದ ಜಿಟಿಡಿಗೆ ಸಾರಾ ತಿರುಗೇಟು

Published : Jan 08, 2021, 03:18 PM IST
ಮೈಸೂರಿನ ಹೈಕಮಾಂಡ್ ಎಂದ ಜಿಟಿಡಿಗೆ ಸಾರಾ ತಿರುಗೇಟು

ಸಾರಾಂಶ

ಮೈಸೂರಿನ ಹೈಕಮಾಂಡ್ ಎಂದ ಜಿಟಿಡಿಗೆ ನಯವಾಗಿಯೇ ತಿರುಗೇಟು ಕೊಟ್ಟ ಶಾಸಕ ಸಾ.ರಾ.ಮಹೇಶ್..! ಏನಂದ್ರು..? ಇಲ್ಲಿ ಓದಿ

ಬೆಂಗಳೂರು(ಜ.08): ನನ್ನನ್ನ ಮೈಸೂರು ಹೈಕಮಾಂಡ್ ಅಂತಾ ಯಾರು ಹೇಳಿದ್ದು?. ಓಹ್ ಜಿಟಿಡಿ ಹೇಳಿದ್ರಾ? ಹಾಗಾದ್ರೆ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ ಬಿಡಿ ಎಂದಿದ್ದಾರೆ ಶಾಸಕ ಸಾರಾ ಮಹೇಶ್.

ಮೈಸೂರಿನ ಹೈಕಮಾಂಡ್ ಎಂದ ಜಿಟಿಡಿಗೆ ನಯವಾಗಿಯೇ ತಿರುಗೇಟು ಕೊಟ್ಟ ಶಾಸಕ ಸಾ.ರಾ.ಮಹೇಶ್, ಜಿಟಿಡಿ ಅವರು ಒಂದಿಷ್ಟು ಆರೋಪ ಮಾಡಿದ್ದಾರೆ. ಆದ್ರೆ ನಮ್ಮ ಎಲ್ಲ ನಾಯಕರ ಜೊತೆ ಅವರು ಚೆನ್ನಾಗಿದ್ದಾರೆ. ಮೊನ್ನೆ ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದಾಗ ಜಿಟಿಡಿಯವರೇ ಮೊದಲು ಪೋನ್ ಮಾಡಿದ್ರು ಎಂದಿದ್ದಾರೆ.

'ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬಿದ್ದಿರ್ತೀಯ ಗೊತ್ತಾ?' ಅಧಿಕಾರಿ ವಿರುದ್ಧ ಸಚಿವ ಗರಂ

ಜಿಟಿಡಿ ಹುಟ್ಟುಹಬ್ಬದ ದಿನ ಅನಿತಕ್ಕರೇ ಜಿಟಿಡಿಗೆ ಪೋನ್ ಮಾಡಿದ್ರು. ನಮ್ಮ ಯುವ ನಾಯಕ‌ ನಿಖಿಲ್ ಅವರ ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ. ಹಾಗಾಗಿ ಸ್ವಲ್ಪ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಈ ಬಗ್ಗೆ ನಾನು ಅವರ ಜೊತೆ ಜಲದರ್ಶಿನಿಯಲ್ಲಿ ಮಾತನಾಡಿದ್ದೆ. ಎಲ್ಲವನ್ನ ಸರಿಪಡಿಸಿಕೋಳ್ಳುತ್ತೇವೆ ಎಂದಿದ್ದಾರೆ.

PREV
click me!

Recommended Stories

ಕೋರಮಂಗಲ್ಲಿ ಜನಸಾಗರದಿಂದ ಸಾರ್ವಜನಿಕ ಪ್ರವೇಶ ಬಂದ್, ಕಿರಿಕ್ ಮಾಡಿದಾತ ಪೊಲೀಸ್ ವಶಕ್ಕೆ
ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಪತ್ನಿ ನಾಪತ್ತೆ; ಆಘಾತ ತಾಳಲಾರದೆ ಪತಿಗೆ ಪಿಟ್ಸ್!