ಕೊನೆ ಉಸಿರು ಇರೋವರೆಗೂ ನಾನು ಜೆಡಿಎಸ್‌ನಲ್ಲೇ: ಸಾರಾ

Suvarna News   | Asianet News
Published : Jan 08, 2021, 03:49 PM ISTUpdated : Jan 08, 2021, 03:50 PM IST
ಕೊನೆ ಉಸಿರು ಇರೋವರೆಗೂ ನಾನು ಜೆಡಿಎಸ್‌ನಲ್ಲೇ: ಸಾರಾ

ಸಾರಾಂಶ

ಯಾವುದೇ ಕಾರಣಕ್ಕು ಪಕ್ಷ ಬಿಟ್ಟು ಹೋಗೋದಿಲ್ಲ ಎಂದ ಸಾರಾ | ಕೆ.ಆರ್.ನಗರ ಬಿಟ್ಟು ಬೇರೆಲ್ಲಿಯೂ ನಾನು ಸ್ಪರ್ಧೆ ಮಾಡೋದಿಲ್ಲ ಎಂದ ಶಾಸಕ

ಮೈಸೂರು(ಜ.08): ನನ್ನ ಕೊನೆ ಉಸಿರು ಇರೋವರೆಗು ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕು ಪಕ್ಷ ಬಿಟ್ಟು ಹೋಗೋದಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.

ಕೆ.ಆರ್.ನಗರ ಬಿಟ್ಟು ಬೇರೆಲ್ಲಿಯೂ ನಾನು ಸ್ಪರ್ಧೆ ಮಾಡೋದಿಲ್ಲ. ನಾನು ಎಲ್ಲಿ ರಾಜಕೀಯ ಆರಂಭಿಸಿದ್ದೇನೋ‌ ಅಲ್ಲೇ ರಾಜಕೀಯ ನಿವೃತ್ತಿ. ಅದು ಬಿಟ್ಟು ಬೇರೆ ಯಾವ ಕ್ಷೇತ್ರಕ್ಕು ಹೋಗೋದಿಲ್ಲ ಎಂದು ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ಸ್ಪಷ್ಟಪಡಿಸಿದ್ದಾರೆ.

'ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬಿದ್ದಿರ್ತೀಯ ಗೊತ್ತಾ?' ಅಧಿಕಾರಿ ವಿರುದ್ಧ ಸಚಿವ ಗರಂ

ಜಿಟಿಡಿ ಮತ್ತು ಅವರ ಮಗ ಎಲ್ಲೆಲ್ಲಿ ನಿಲ್ಲಬೇಕು ಅಂತ ನಿರ್ಧಾರ ಆಗಿದೆ. ಅವರಿಗೆ ಹುಣಸೂರು ಕ್ಷೇತ್ರ ಇಷ್ಟ ಆಗಿದೆ ಅಲ್ಲೆ ನಿಲ್ತಾರೆ. ಅವರಿಗೆ ಬೇಕು ಅಂದ್ರೆ ಚಾಮರಾಜದಲ್ಲು ನಿಲ್ಲಬಹುದು ಎಂದು ಹೇಳಿದ್ದಾರೆ.

ನಮಗೆ ಎರಡು ಕ್ಷೇತ್ರ ಬಿಟ್ಟು ಉಳಿದ ಎಲ್ಲ ಕಡೆಯಲ್ಲಿಯೂ ಅಭ್ಯರ್ಥಿ ರೆಡಿ ಇದ್ದಾರೆ. ಎಲ್ಲರು ಅವರ ಕೆಲಸ ಆರಂಭಿಸಿದ್ದಾರೆ ಎಂದು ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!