
ಚಿಕ್ಕಬಳ್ಳಾಪುರ (ಅ.27): ತಾಲೂಕಿನ ಇತಿಹಾಸ ಮತ್ತು ಪುರಾಣ ಪ್ರಸಿದ್ದ ನಂದಿಗಿರಿಧಾಮದಲ್ಲಿರುವ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಧೀನದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ (ಸಮ್ಮರ್ ಪ್ಯಾಲೇಸ್ ) ಮೇಲೆ ಉತ್ತರ ಭಾರತ ಮೂಲದ ಕುಖ್ಯಾತ ಅಂತರಾಷ್ಟ್ರೀಯ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದು ವಿಕೃತಿ ಮೆರೆಯಲಾಗಿದೆ.
ಪ್ಯಾಲೇಸ್ನ ಮೇಲೆ ದೊಡ್ಡದಾಗಿ ಲಾರೆನ್ಸ್ ಬಿಷ್ಣೋಯ್ ಎಂದು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. ಇದರಿಂದ ಟಿಪ್ಪು ಸುಲ್ತಾನ್ ಅಭಿಮಾನಿಗಳು ಹಾಗೂ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಕುಖ್ಯಾತ ಅಂತರಾಷ್ಟ್ರೀಯ ದರೋಡೆಕೊರನಾಗಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ್ನ ಕೆನಡಾ ದೇಶ ಉಗ್ರ ಸಂಘಟನೆ ಅಂತ ಘೋಷಿಸಿದೆ. ಉತ್ತರ ಭಾರತ ಮೂಲದ ಈತ ಕೆನಾಡ ದಿಂದ ಭಾರತ ವರೆಗೆ ತನ್ನ ಜಾಲವನ್ನ ವಿಸ್ತರಿಸಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸೆಲೆಬ್ರೆಟಿಗಳ ಹತ್ಯೆಗಳು ಹತ್ಯಾ ಪ್ರಯತ್ನಗಳು ಮಾಡಿವೆ.
ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿದ್ದುಕೊಂಡೇ ಎಲ್ಲಾ ಚಟುವಟಿಕೆಗಳನ್ನ ನಡೆಸುತ್ತಿದ್ದಾನೆ ಅಂತ ತಿಳಿದುಬಂದಿದೆ. ಈತನ ಫಾಲೋವರ್ ಯಾರೋ ಒಬ್ಬರು ಭಾರತೀಯ ಪುರತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಧೀನದಲ್ಲಿರುವ ಟಿಪ್ಪು ಬೇಸಿಗೆ ಅರಮನೆ ಮೇಲೆ ಆತನ ಹೆಸರು ಕೆತ್ತಿ ಹೋಗಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ನಂದಿಗಿರಿದಾಮಕ್ಕೆ ಆತಂಕದ ವಾತಾವರಣವೂ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಏನಾದರೂ ಭೀಭತ್ಸ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರಾ? ಅನ್ನೋ ಅನುಮಾನವೂ ಕೇಳಿಬಂದಿದೆ.