
ಚಿಕ್ಕೋಡಿ (ಬೆಳಗಾವಿ): ಅಕ್ರಮ ಪ್ರೇಮ ಸಂಬಂಧದ ನಂಟು ಒಂದು ಕುಟುಂಬದ ಬದುಕನ್ನು ಹಾಳು ಮಾಡುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ಪ್ರೇಯಸಿಯೊಂದಿಗೆ ಲಾಡ್ಜ್‌ನಲ್ಲಿ ಆರಾಮವಾಗಿ ಕಾಲ ಕಳೆಯುತ್ತಾ ಮಜಾ ಮಾಡುತ್ತಿದ್ದ ಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ ಆತನನ್ನು ದರದರನೆ ಎಳೆದು ರೋಡಿಗೆ ತಂದು ಚಪ್ಪಲಿಯಿಂದ ಸಾರ್ವಜನಿಕವಾಗಿ ಸ್ಥಳದಲ್ಲೇ ಥಳಿಸಿದ್ದಾಳೆ. ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗಂಡ ಮಾಡಿದ ತಪ್ಪಿಗೆ ಉಗ್ರರೂಪ ತಾಳಿ ಚಪ್ಪಲಿಯಲ್ಲಿ ಧರ್ಮದೇಟು ಹೊಡೆಯುತ್ತಿದ್ದು, ಸಾರ್ವಜನಿಕರು ನಿಂತುಕೊಂಡು ನೋಡುತ್ತಿರುವುದು ವಿಡಿಯೋದಲ್ಲಿ ವೈರಲ್ ಆಗಿದೆ.
ಮೂಲಗಳ ಪ್ರಕಾರ, ಚಿಕ್ಕೋಡಿ ನಿವಾಸಿ ಅವಿನಾಶ್ ಭೋಸಲೆ ಎಂಬ ವ್ಯಕ್ತಿ ತನ್ನ ಪ್ರೇಯಸಿಯೊಂದಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿಕೊಂಡು ಇದ್ದನು. ಈ ಮಾಹಿತಿಯು ಹೇಗೋ ಪತ್ನಿಯ ಕಿವಿಗೆ ತಲುಪಿದ್ದು, ಆಕೆ ತಕ್ಷಣ ತನ್ನ ತಂದೆ ಜೊತೆಗೆ ಸ್ಥಳಕ್ಕೆ ಧಾವಿಸಿದ್ದಾಳೆ.
ಲಾಡ್ಜ್ ಸಿಬ್ಬಂದಿಯ ಸಹಕಾರದಿಂದ ರೂಮ್ ತೆರೆಯುತ್ತಿದ್ದಂತೆಯೇ ಪತ್ನಿ ಪತಿಯನ್ನು ಅಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದಿದ್ದಾಳೆ. ಕೋಪೋದ್ರಿಕ್ತಳಾದ ಪತ್ನಿ, ಸಾರ್ವಜನಿಕರ ಮುಂದೆ ಪತಿಯನ್ನು ಚಪ್ಪಲಿಯಿಂದ ಅಟ್ಟಾಡಿಸಿ ಹೊಡೆದಿದ್ದಾಳೆ. ಈ ಘಟನೆ ಅಲ್ಲಿದ್ದ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿಕ್ಕೋಡಿ ಪಟ್ಟಣದ ಜನರ ಮಧ್ಯೆ ಈ ಬಗ್ಗೆ ಚರ್ಚೆ ನಡುಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.