ಕಾನೂನುಗಳು ಸರಳವಾಗಿರಬೇಕು. ಕಾಯ್ದೆ ರೂಪಿಸುವಾಗ ಹೆಚ್ಚಿನ ಗೊಂದಲಗಳಿಗೆ ಅವಕಾಶ ನೀಡಬಾರದು. ಕಾಯ್ದೆ ರೂಪಿಸುವ ಜನಪ್ರತಿನಿಧಿಗಳು ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಅ.22): ಕಾನೂನುಗಳು ಸರಳವಾಗಿರಬೇಕು. ಕಾಯ್ದೆ ರೂಪಿಸುವಾಗ ಹೆಚ್ಚಿನ ಗೊಂದಲಗಳಿಗೆ ಅವಕಾಶ ನೀಡಬಾರದು. ಕಾಯ್ದೆ ರೂಪಿಸುವ ಜನಪ್ರತಿನಿಧಿಗಳು ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹೊಸದುರ್ಗ ತರಿಕೇರೆ ರಸ್ತೆಯ ಕೋರ್ಟ್ ಮುಂಭಾಗದ ದಿ.ಶ್ರೀ ಎಂ.ಪಿ.ಕಂಬೇಶ್ರವರ ವೇದಿಕೆಯಲ್ಲಿ, ಶನಿವಾರ ಜಿಲ್ಲಾ ನ್ಯಾಯಾಂಗ ಇಲಾಖೆ, ವಕೀಲರ ಸಂಘದಿಂದ ಆಯೋಜಿಸಲಾದ ಹೊಸದುರ್ಗ ನ್ಯಾಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಹೊಸದುರ್ಗ ನ್ಯಾಯಲಯವು ಈ ಭಾಗದ ಜನರಿಗೆ ಸುಧೀರ್ಘ ಸಮಯದಿಂದ ನ್ಯಾಯದಾನ ಮಾಡುವ ಕಾರ್ಯಮಾಡಿದೆ. ಜೊತೆಗೆ ನಾಡಿಗೆ ಉತ್ತಮ ವಕೀಲರು ಹಾಗೂ ನ್ಯಾಯಧೀಶರನ್ನು ನೀಡಿದೆ. ತಾಲೂಕು ಮಟ್ಟದ ನ್ಯಾಯಾಲಯದ ಕಾರ್ಯಕ್ರಮದಲ್ಲಿ ಸರ್ವವೋಚ್ಛ ನ್ಯಾಯಲಯದ ನ್ಯಾಯಮೂರ್ತಿಗಳು ಭಾಗವಹಿಸುವುದು ಅಪರೂಪ. ಹೊಸದುರ್ಗ ತಾಲೂಕಿನ ಜನರಿಗೆ ಸ್ಪೂರ್ತಿ ನೀಡಲು ಹಾಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಹೊಂದಿರುವ ಆಸಕ್ತಿ ಪ್ರತೀಕವಾಗಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನ್ಯಾಯಮೂರ್ತಿಗಳು ಹೇಳುವ ಮಾತುಗಳನ್ನು ಆಡಳಿತದಲ್ಲಿ ಸರ್ಕಾರ ಅಳವಡಿಸಕೊಳ್ಳುವುದು. ಜನರು ನ್ಯಾಯವನ್ನು ಕಷ್ಟದಿಂದ ಪಡೆಯುವಂತೆ ಅಗಬಾರದು. ಸಹಜವಾಗಿ ಎಲ್ಲರಿಗೂ ನ್ಯಾಯ ದೊರೆಯಬೇಕು.
undefined
ನ್ಯಾಯ ಪಡೆಯುವುದು ತುಟ್ಟಿಯಾದರೆ, ನ್ಯಾಯ ಸಹಜವಾಗಿ ದೊರಕುವುದು ಕಷ್ಟವಾದರೆ ಜನರು ವ್ಯವಸ್ಥೆ ಬಗ್ಗೆ ಭ್ರಮ ನಿರಸವಾಗುತ್ತಾರೆ. ಸಮಾಜದಲ್ಲಿನ ಅನ್ಯಾಯದ ವಿರುದ್ದ ಹೋರಾಡುವುದನ್ನು ಕೈಬಿಡುತ್ತಾರೆ. ಬಡಜನರು ನ್ಯಾಯಾಲಯಕ್ಕೆ ಬರುವುದು ಕಷ್ಟವಗುತ್ತದೆ. ನ್ಯಾಯಾಲಯದಲ್ಲಿ ಗೆದ್ದವನು ಸೊತ ಹಾಗೆ ಎನ್ನುವ ನಾಣ್ಣುಡಿಯಿದೆ. ಇದಕ್ಕೆ ವ್ಯತಿರಿಕ್ತವಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸಬೇಕು. ದೇಶದ ಜನರಿಗೆ ನ್ಯಾಯಾಲಯದ ಬಗ್ಗೆ ಇನ್ನೂ ನಂಬಿಕೆ ಇದೆ. ತಂತ್ರಜ್ಞಾನ ಬಳಕೆ ಮಾಡಿ ತ್ವರಿತಗತಿಯಲ್ಲಿ ನ್ಯಾಯದಾನ ನೀಡುವ ಕೆಲಸವಾಗಬೇಕು. ತಳ ಹಂತದಲ್ಲಿ ಕಕ್ಷಿದಾರರಿಗೆ ಸಹಾಯ ನೀಡಬೇಕು. ಸಮಾಜದಲ್ಲಿ ಅನ್ಯಾಯ ಮಾಡಿದವರಿಗೆ ಪುರಸ್ಕಾರ, ಗೌರವ ಸಿಗಬಾರದು. ಅಕ್ಷರಸ್ಥ ಸಮಾಜದಲ್ಲಿ ಬದಕು ಸಂಕೀರ್ಣವಾಗುತ್ತಿದೆ. ಬುಡಕಟ್ಟು ಸಮಾಜದಲ್ಲಿ ನ್ಯಾಯ ಸಹಜವಾಗಿತ್ತು ಎಂದರು.
ಭಾರತದಲ್ಲಿ ಸಾಮಾಜಿಕ ವ್ಯವಸ್ಥೆ ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮ್ಮತವಾದ ನ್ಯಾಯ ನೀಡುವುದು ಕಷ್ಟ. ನ್ಯಾಯಾಧೀಶರ ಮುಂದೆ ಹತ್ತು ಹಲವಾರು ಸವಾಲುಗಳು ಬರುತ್ತವೆ. ದೇಶದಲ್ಲಿ ಜನರ ನಂಬಿಕೆ ಹಾಗೂ ಮೂಡ ನಂಬಿಕೆಗಳ ಕುರಿತು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತವೆ. ಆದರೂ ನ್ಯಾಯಲಯವು ಉತ್ತಮವಾಗಿ ಕೆಲಸ ನಿರ್ವಹಿಸಿ, ಇವುಗಳ ಕುರಿತು ಎಲ್ಲರಿಗೂ ಒಪ್ಪಿತವಾಗುವ ತೀರ್ಪು ನೀಡುತ್ತವೆ.
ಬದಲಾವಣೆ ನಿರಂತರ ಪ್ರಕ್ರಿಯೆ. ಕಾನೂನುಗಳಲ್ಲಿ ಬಹಳಷ್ಟು ಬದಲಾವಣೆ ಅವಶ್ಯಯಿದೆ. ತೀರ್ಪುಗಳು ಕಾಲ ಕಾಲಕ್ಕೆ ಬದಲಾಗುತ್ತವೆ. ಹಾಗಾಗಿ ಹಿಂದಿನ ದಶಕಗಳಲ್ಲಿ ನೀಡಿದ ತೀರ್ಪುಗಳು ಇಂದಿನ ಪರಿಸ್ಥಿತಿ ಅನ್ವಯವಾಗುವುದಿಲ್ಲ. ಅಂತರ್ ರಾಜ್ಯ ನದಿ ವಿವಾದಗಳು ಟ್ರಿಬ್ಯುನಲ್(ನ್ಯಾಯಾಧಿಕರಣ) ಗಳಲ್ಲಿ ಬಗೆ ಹರಿಯುದಿಕ್ಕಿಂದ ಇನ್ನಷ್ಟೂ ಕ್ಲಿಷ್ಟವಾಗುತ್ತವೆ. ಟ್ರಿಬ್ಯುನಲ್ಗಳು ನೀಡುವ ತೀರ್ಪು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸಮವಾಗಿರುತ್ತವೆ. ಆದರೂ ರಾಜ್ಯಗಳು ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವ ಅವಕಾಶವಿದೆ. ಇದರಿಂದ ದಶಕಗಳ ಕಾಲ ನದಿ ವಿವಾದಗಳು ಬಗೆಹರಿಯುವುದಿಲ್ಲ. ಈ ಭಾಗದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಪ್ರಾಮುಖ್ಯ ಯೋಜನೆಯಾಗಿ ಪಿಐಬಿ(ಸಾರ್ವಜನಿಕ ಬಂಡವಾಳ ಹೂಡಿಕೆ ಮಂಡಳಿ)ಯಲ್ಲಿ ಅನುಮೋದನೆ ನೀಡಲಾಗಿದೆ. ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಬಾಕಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಲಿದೆ. ಇದರಿಂದಾಗಿ ಯೋಜನೆಗೆ ಕೇಂದ್ರ ಸರ್ಕಾರದಿಂದ ರೂ.13 ರಿಂದ 15 ಸಾವಿರ ಕೋಟಿ ಅನುದಾನ ಬರಲಿದೆ ಎಂದರು.
ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮಾತನಾಡಿ, ಹೊಸದುರ್ಗದಲ್ಲಿ ಸಂಭ್ರಮ ಮನೆ ಮಾಡಿದೆ. ಜನರು ಸಂತೋಷದಿಂದ ನ್ಯಾಯಾಲಯದ 50ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 1964 ರಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಗಿದೆ. ಹಾಗೆಯೇ 1972 ರಲ್ಲಿ ಹೊಸದುರ್ಗ ಮುನಿಸಿಪ್ ನ್ಯಾಯಾಲಯ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಶಿಷ್ಟಾಚಾರ ಅಂಗವಾಗಿ ತಾಲೂಕು ನ್ಯಾಯಲಾಯದ ಕಾರ್ಯಕ್ರಮದಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಬರುವುದಿಲ್ಲ. ಆದರೆ ರಾಜ್ಯದ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಹೆಚ್. ಬಿಳಪ್ಪನವರ ಆಹ್ವಾನದೆ ಮೇರೆಗೆ ಆಗಮಿಸಿದ್ದೇನೆ. ರಾಜ್ಯದ ಮುಖ್ಯ ನ್ಯಾಯಮೂರ್ತಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಇಂದು ಹೊಸದುರ್ಗ ತಾಲೂಕು ನ್ಯಾಯಾಲಯ ನಡೆದು ಬಂದ ಹಾದಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು.
ನ್ಯಾಯಾಲಯದಲ್ಲಿ 4689 ಪ್ರಕರಣಗಳು ಬಾಕಿಯಿವೆ. ಹೊಸ ಪ್ರಕರಣಗಳಿಗೆ ಸರಿಸಮನಾಗಿ ಹಳೆಯ ಪ್ರಕರಣಗಳು ವಿಲೇವಾರಿಯಾಗಿಬೇಕು. ನ್ಯಾಯಾಲಯದಲ್ಲಿ ಪ್ರಕರಣಗಳು ಬಹಳ ದಿನಗಳು ಉಳಿಯಬಾರದು. ನ್ಯಾಯದಾನ ಪ್ರಕ್ರಿಯಲ್ಲಿ ವಿಳಂಬ ಮಾಡಿದರೆ, ಜನರಲ್ಲಿ ನ್ಯಾಯಾಲಯಗಳ ಬಗ್ಗೆ ಉತ್ತಮ ಭಾವನೆ ಬರುವುದಿಲ್ಲ. ನ್ಯಾಯವಾದಿಗಳು ಸರಳವಾಗಿ ವ್ಯಾಜ್ಯಗಳನ್ನು ಬಗೆಹರಿಸಬಹುದು. ಜನರಿಗೆ ಉಚಿತವಾಗಿ ಕಾನೂನು ನೆರವು ಲಭಿಸುತ್ತಿದೆ. ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪನವರು ಉಚಿತ ಕಾನೂನು ನೆರವು ನೀಡಲು ಸಂಘ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದಾರೆ. ಯಾರಿಗೂ ನ್ಯಾಯವನ್ನು ನಿರಾಕರಿಸಬಾರದು, ಯಾರಿಗೂ ನ್ಯಾಯದಾನ ತಡ ಮಾಡಬಾರದು. ಯಾರಿಗೂ ನ್ಯಾಯವನ್ನು ಮಾರಿಕೊಳ್ಳಬಾರದು ಎಂಬ ನೈತಿಕತೆ ಎಲ್ಲರಲ್ಲೂ ಇರಬೇಕು ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, 50 ವರ್ಷ ಪೂರೈಸಿದ ಹೊಸದುರ್ಗ ತಾಲೂಕು ನ್ಯಾಯಾಲಯದ ಕಾರ್ಯವೈಖರಿ ಉತ್ತಮವಾಗಿದೆ. ರಾಜ್ಯದ ಇತರೆ ನ್ಯಾಯಾಲಯಗಳಿಗೆ ಹೋಲಿಸಿದರೆ ಹೊಸದುರ್ಗ ತಾಲೂಕು ನ್ಯಾಯಾಲಯದಲ್ಲಿ ಕಡಿಮೆ ಪ್ರಕರಣಗಳು ಇವೆ. ಸರ್ಕಾರಿ ವ್ಯಾಜ್ಯಗಳನ್ನು ಶೀಘ್ರವಾಗಿ ನ್ಯಾಯಾಲಯದಿಂದ ಬಗೆಹರಿಸಲಾಗಿದೆ. ನ್ಯಾಯಾಲಯದ ಹೊರಗಡೆ ಸುಲಭವಾಗಿ ವ್ಯಾಜ್ಯಗಳು ಮುಕ್ತಾಯವಾಗುವ ಅವಕಾಶ ಕಲ್ಪಿಸಬೇಕು. ಲೋಕ ಅದಾಲತ್ಗಳು, ಮಧ್ಯಸ್ಥಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಸಾರ್ವಜನಿಕರಿಗೆ ದುಬಾರಿಯಾಗದ ರೀತಿಯಲ್ಲಿ ನ್ಯಾಯ ದೊರಕಬೇಕು. 3 ಕೋಟಿ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿಯಿವೆ.
ನ್ಯಾಯಾಧೀಶರ ಮೇಲೆ ಹೆಚ್ಚಿನ ಒತ್ತಡವಿದೆ. ಪ್ರತಿನಿತ್ಯ ಹಲವಾರು ಪ್ರಕರಣಗಳನ್ನು ಆಲಿಸುವ ಕೆಲಸ ಮಾಡಿ ನ್ಯಾಯಾಧೀಶರು ತ್ವರಿತ ನ್ಯಾಯಾದಾನಕ್ಕಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ದೇಶಕ್ಕೆ ಮಾದರಿಯಾಗಿದೆ. ನ್ಯಾಯಾಲಯದ ವ್ಯವಹಾರಗಳನ್ನು ಸರಳಗೊಳಿಸುವ, ಅಂಗೈಯಲ್ಲಿ ನ್ಯಾಯಾಲಯದ ತೀರ್ಪುಗಳು ಲಭಿಸುವಂತೆ ಮಾಡಲು ತಂತ್ರಾಂಶವನ್ನು ರೂಪಿಸಲಾಗುವುದು. ನ್ಯಾಯವಾದಿಗಳೂ, ಕಕ್ಷಿದಾರರಿಗೂ ಸಹ ಮೂಲಭೂತ ಸೌಕರ್ಯಗಳು ನೀಡಬೇಕಿದೆ. ನ್ಯಾಯಲಯಗಳಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಲಾಗುವುದು. ಕಡಿಮೆ ಪ್ರಕರಣಗಳು ಇರುವ ನ್ಯಾಯಾಲಯಗಳು ನಿಜವಾಗಿ ಉತ್ತಮ ನ್ಯಾಯಾಲಯಗಳಾಗಿವೆ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯ ಪಟ್ಟರು.
ಕರ್ನಾಟಕ ಉಚ್ಛ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ಮಾತನಾಡಿ, ರಾಜ್ಯದಲ್ಲಿ ಬರುವ ನವೆಂಬರ್ ಮಾಹೆಯಲ್ಲಿ ಬೃಹತ್ ಲೋಕ ಅದಲಾತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗರಿಷ್ಠ ಸಂಖ್ಯೆಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.
ಎಕ್ಸಾಂನಲ್ಲಿ ಹೀಗೂ ನಕಲು ಮಾಡ್ಬಹುದು ... ಕಾನೂನು ವಿದ್ಯಾರ್ಥಿ ಏನ್ ಮಾಡ್ದ ನೋಡಿ
ಕರ್ನಾಟಕ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಮಾತನಾಡಿ, ಹೊಸದುರ್ಗದ ತಾಲ್ಲೂಕು ಕಚೇರಿ ಬಳಿ 1974ರಲ್ಲಿ ಹೊಸದುರ್ಗ ತಾಲ್ಲೂಕು ನ್ಯಾಯಾಲಯ ಸ್ಥಾಪನೆ ಮಾಡಲಾಯಿತು. 1977ರಲ್ಲಿ ಕಾನೂನು ಪದವಿ ಮುಗಿಸಿ, 1978ರಲ್ಲಿ ಇದೇ ನ್ಯಾಯಾಲಯದಲ್ಲಿ ನನ್ನ ವಕೀಲ ವೃತ್ತಿ ಪ್ರಾರಂಭಿಸಿದೆ ಎಂದು 50 ವರ್ಷಗಳ ಹಿಂದಿನ ಹಲವು ನೆನೆಪುಗಳನ್ನು ಸ್ಮರಿಸಿಕೊಂಡರು. ಹಿರಿಯ ವಕೀಲರಾದ ಎಂ.ಶಿವಲಿಂಗಪ್ಪ ಅವರ ಬಳಿ ವಕೀಲ ವೃತ್ತಿ ಮಾಡುವಾಗ ಅವರು ನನಗೆ ಮುಕ್ತ ಅವಕಾಶ ಮಾಡಿಕೊಟ್ಟರು.
Numerology: ಈ ಜನ್ಮಸಂಖ್ಯೆಯ ಕಾನೂನುಬಾಹಿರ ಕಾರ್ಯಗಳಿಗೆ ಕಾದಿದೆ ಆಪತ್ತು..
ಈ ವ್ಯಕ್ತಿ ಸ್ಬಾತಂತ್ರ್ಯದ ಅವಕಾಶ ಸದುಪಯೋಗ ಪಡಿಸಕೊಂಡು 13 ವರ್ಷಗಳ ಕಾಲ ಉಚ್ಛ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆಯಿತು ಎಂದು ಹೇಳಿದರು. ನ್ಯಾಯಾಲದಲ್ಲಿ ಅನೇಕ ವಿಷಯಗಳಿವೆ. ಸರಳವಾದ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ತಜ್ಞರೇ ಬೇಕಾಗಿಲ್ಲ. ಸಣ್ಣ ಸಣ್ಣ ಪ್ರಕರಣಗಳನ್ನು ತಮ್ಮ ಹಂತದಲ್ಲಿಯೇ ಬಗೆಹರಿಸಿಕೊಳ್ಳುವುದು ಅತ್ಯುತ್ತಮ. ನಮ್ಮ ಆಲೋಚನೆ, ನಡಾವಳಿಕೆಯಿಂದ ಇನ್ನೊಬ್ಬರ ಚಿಂತನೆ ಪರಿವರ್ತಿಸಬಹುದಾದರೆ ಇದರಿಂದ ಸಮಾಜವನ್ನು ಪರಿವರ್ತಿಸಬಹುದು. ನಾವುಗಳ ಸಮಾಜಮುಖಿಯಾಗಿ, ರಾಷ್ಟ್ರಪ್ರಜ್ಞೆಯೊಂದಿಗೆ, ರಾಷ್ಟ್ರ ಸೇವೆ ಮಾಡೋಣ ಎಂದು ಸಲಹೆ ನೀಡಿದರು.