Vijayanagara: ಫ್ಯಾನ್‌ಗೆ ಸಿಕ್ಕಿ ತುಂಡಾದ ಬೆರಳನ್ನು ಜೋಡಿಸಿ ಮರುಜೀವ ನೀಡಿದ ವೈದ್ಯರು

By Gowthami K  |  First Published Oct 22, 2022, 7:56 PM IST

ತಿರುಗುತ್ತಿದ್ದ ಫ್ಯಾನ್ ನಲ್ಲಿ ಆಕಸ್ಮಿಕವಾಗಿ ಕೈಯಿಟ್ಟ ಪರಿಣಾಮ ಬಾಲಕನ ತೋರುಬೆರಳು ತುಂಡಾಗಿರೋ ಘಟನೆ ವಿಜಯನಗರದ ಕೂಡ್ಲಿಗಿ ತಾಲೂಕಿನ‌ ಮಲ್ಲನಾಯಕನ ಹಳ್ಳಿ ಗ್ರಾಮದಲ್ಲಿ ನಡೆದಿದೆ.


ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯನಗರ (ಅ.22): ಏನೋ ಮಾಡಲು ಹೋಗಿ‌ ಇನ್ನೇನೋ ಅಯ್ತು ಅನ್ನೋ ಹಾಗೇ, ಮಕ್ಕಳ‌ ಆಟದೊಡ್ಡವರಿಗೆ ಕೆಲವೊಮ್ಮೆ ಪ್ರಾಣ ಸಂಕಟವಾಗ್ತದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ತಿರುಗುತ್ತಿದ್ದ ಫ್ಯಾನ್ ನಲ್ಲಿ ಆಕಸ್ಮಿಕವಾಗಿ ಕೈಯಿಟ್ಟ ಪರಿಣಾಮ ಬಾಲಕನ ತೋರುಬೆರಳು ತುಂಡಾಗಿರೋ ಘಟನೆ ಕೂಡ್ಲಿಗಿ ತಾಲೂಕಿನ‌ ಮಲ್ಲನಾಯಕನ ಹಳ್ಳಿ ಗ್ರಾಮದಲ್ಲಿ ನಡೆದಿದೆ.  ಆದ್ರೇ,  ಬಾಲಕನ ತುಂಡಾದ ಬೆರಳನ್ನು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಮರುಜೋಡಿಸಿ ಅದಕ್ಕೆ ಮರು ಜೀವ ನೀಡಿದ ಅಪರೂಪದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ವೈದ್ಯರು ಸಾಕ್ಷಿಯಾಗಿದ್ದಾರೆ. ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿಯ ಗ್ರಾಮದ ಪಾಂಡುರಂಗಪ್ಪ (13) ಎನ್ನುವ ಬಾಲಕನ ಬೆರಳಿಗೆ ಶಸ್ತ್ರಚಿಕಿತ್ಸೆ ಮೂಲಕ ಮರು ಜೀವವನ್ನು ಕೂಡ್ಲಿಗಿ ಆಸ್ಪತ್ರೆಯ ಮೂಳೆತಜ್ಞ ಡಾ ಅಚ್ಯುತ್ ನೀಡಿದ್ದಾರೆ. ಪಾಂಡುರಂಗ ಎನ್ನುವ ಬಾಲಕ ಗುರುವಾರ ರಾತ್ರಿ ಮನೆಯಲ್ಲಿದ್ದ ಫ್ಯಾನ್ ನಲ್ಲಿ ಆಕಸ್ಮಿಕ ಕೈ ಇಟ್ಟಿದ್ದರಿಂದ ತೋರುಬೆರಳಿನ ಉಗುರು ಇರುವ ಭಾಗ ಸಂಪೂರ್ಣವಾಗಿ ತುಂಡಾಗಿ ಕೆಳಗೆ ಬಿದ್ದಿದ್ದು ಅದನ್ನು ಕವರ್ ನಲ್ಲಿಟ್ಟುಕೊಂಡು ಕೊಟ್ಟೂರು ಸಾರ್ವಜನಿಕ ಆಸ್ಪತ್ರೆಗೆ  ಪೋಷಕರು ಹೋಗಿದ್ರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದ್ದಾರೆ.

Latest Videos

undefined

ಬಾಲಕನ ಅದೃಷ್ಟವೆನ್ನುವಂತೆ ಕೂಡ್ಲಿಗಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಕರ್ತವ್ಯ ನಿರತರಾಗಿದ್ದ  ಮೂಳೆ ತಜ್ಞ ವೈದ್ಯರಾದ ಡಾ. ಅಚ್ಯುತ್ ನಾಯಕ ಎನ್ನುವವರು ಬಾಲಕನ ತುಂಡಾದ ಬೆರಳನ್ನು ತೆಗೆದುಕೊಂಡು ಆ ಬೆರಳನ್ನು ಫ್ರಿಡ್ಜಲ್ಲಿಟ್ಟು ಹೆಚ್ಚುವರಿ ಸಿಬ್ಬಂದಿ ಇಲ್ಲದೇ ಇದ್ರೂ ಕರ್ತವ್ಯದಲ್ಲಿದ್ದ ಸ್ಟಾಫ್ ನರ್ಸ್ ಮೈಲಾರಪ್ಪರನ್ನು ಕರೆದುಕೊಂಡು ಬೆರಳನ್ನು ಜೋಡಿಸುವ ಶಸ್ತ್ರಕ್ರಿಯೆಯಲ್ಲಿ ತೊಡಗಿದ್ರು. ಸತತ ಮೂರು ಗಂಟೆಗಳ ಕಾಲ ಬೆರಳನ್ನು ಜೋಡಿಸಿ ಹೊಲಿಗೆ ಹಾಕುವ ಮೂಲಕ ಮರುಜೀವ ತುಂಬಿದ್ದಾರೆ. ಇದೊಂದು ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ. ಸಾಮಾನ್ಯವಾಗಿ ಈ ರೀತಿಯ ಘಟನೆ ನಡೆದಾಗ ಬೆಂಗಳೂರು, ಮಂಗಳೂರು ಸೇರಿದಂತೆ ಮಹಾನಗರದ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ಹೆಚ್ಚು ಹಣ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗ್ತದೆ ಆದ್ರೇ ಸರ್ಕಾರಿ ಆಸ್ಪತ್ರೆ ಕನಿಷ್ಠ ಖರ್ಚಿನೊಂದಿಗೆ ಬಾಲಕನ ಬೆರಳು ಜೋಡಿಸಿರೋ ವಿಶೇಷವಾಗಿದೆ.

ಬೆಳಗಾವಿ: ಕೆಎಲ್‌ಇ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಲೀವರ್‌ ಕಸಿ ಯಶಸ್ವಿ

ಕೆಲ ದಿನಗಳಲ್ಲಿ ಬೆರಳಿಗೆ ಜೀವ ಬರಲಿದೆ: ಇನ್ನೂ ವೈದ್ಯರು ಹೇಳೋ ಪ್ರಕಾರ ತುಂಡಾದ ಬೆರಳನ್ನು 3-4 ತಾಸಿನಲ್ಲಿ ಮರುಜೋಡಣೆ ಮಾಡಬಹುದಾಗಿದೆ. ಅದಕ್ಕೂ ಮೊದಲು ತುಂಡಾದ ಬೆರಳನ್ನು ಫ್ರಿಡ್ಜ್ ನಲ್ಲಿಟ್ಟು ಜೀವಕೋಶ ತುಂಬಿಸಿ ಅದನ್ನು ಮರು ಜೋಡಿಸಬಹುದು. ಕಳೆದ ರಾತ್ರಿ ಬಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಡಾದ ಬೆರಳನ್ನು ತಂದಿದ್ದರಿಂದ ಅದನ್ನು ಫ್ರಿಡ್ಜ್ ನಲ್ಲಿರಿಸಿ ಪ್ರಥಮ ಚಿಕಿತ್ಸೆ ನಡೆಸಿ ನಂತರ ಬೆರಳನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೋಡಣೆ ಮಾಡಿ ಹೊಲಿಗೆ ಹಾಕಲಾಗಿದೆ ಬಾಲಕನ ಬೆರಳಿಗೆ ಕೆಲ ದಿನಗಳ ನಂತರ  ಮತ್ತೆ ಮರುಜೀವ ಬರಲಿದೆ ಎನ್ನುತ್ತಾರೆ ಮೂಳೆ ತಜ್ಞ ವೈದ್ಯರಾದ ಡಾ ಅಚ್ಯುತ್ ನಾಯಕ.

Mysuru : ವೈದ್ಯಕೀಯ ಕ್ಷೇತ್ರ ವಿಸ್ತಾರವಾಗುತ್ತಿರುವುದರಿಂದ ಆಯಷ್ಯ ಹೆಚ್ಚಳ

ಸರ್ಕಾರಿ ಆಸ್ಪತ್ರೆ ಅಂದ್ರೇ ಮೂಗು ಮುರೆಯುವವರು ಈ ಆಸ್ಪತ್ರೆಗೊಮ್ಮೆ ಬರಬೇಕು. ಯಾಕಂದ್ರೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೇಕಾದ ವಸ್ತುಗಳು ಇಲ್ಲ ಸೌಲಭ್ಯವಿಲ್ಲವೆಂದು ಸಾಗಿ ಹಾಕೋ ವೈದ್ಯರೇ ಹೆಚ್ಚಾಗಿರೋವಾಗ ಇಲ್ಲಿಯ ವೈದ್ಯರು ತಡರಾತ್ರಿಯಾದ್ರೂ ಬಾಲಕನಿಗೆ ಸೂಕ್ತ ಚಿಕಿತ್ಸೆ ನೀಡೋ ಮೂಲಕ ಮಾದರಿಯಾಗಿದ್ದಾರೆ.

click me!