National Youth Festival 2023: ಯವಜನೋತ್ಸವ ವೆಬ್‌ ಪೋರ್ಟಲ್‌ಗೆ ಚಾಲನೆ

By Kannadaprabha NewsFirst Published Jan 7, 2023, 7:07 AM IST
Highlights

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ರಾಷ್ಟ್ರೀಯ ಯುವಜನೋತ್ಸವಕ್ಕೆ ಜ. 12ರಂದು ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi), ಫೆಬ್ರವರಿ ಕೊನೆ ಅಥವಾ ಮಾಚ್‌ರ್‍ ಮೊದಲ ವಾರದಲ್ಲಿ ಧಾರವಾಡದ ಐಐಟಿ ನೂತನ ಕಟ್ಟಡ ಉದ್ಘಾಟಿಸುವರು ಎಂದು ಹೇಳಿದ್ದಾರೆ

ಧಾರವಾಡ (ಜ.7) : ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುವಜನೋತ್ಸವಕ್ಕೆ ಜ. 12ರಂದು ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಫೆಬ್ರವರಿ ಕೊನೆ ಅಥವಾ ಮಾಚ್‌ರ್‍ ಮೊದಲ ವಾರದಲ್ಲಿ ಧಾರವಾಡದ ಐಐಟಿ ನೂತನ ಕಟ್ಟಡ ಉದ್ಘಾಟಿಸುವರು ಎಂದು ಹೇಳಿದ್ದಾರೆ.

ನಗರದ ಕರ್ನಾಟಕ ಕಾಲೇಜಿ(karnataka collage)ನಲ್ಲಿ ಯುವಜನೋತ್ಸವದ ವೆಬ್‌ ಪೋರ್ಟಲ್‌ (web portal)ಗೆ ಚಾಲನೆ ಹಾಗೂ ವಿವಿಧ ಕಾಲೇಜುಗಳ ಮುಖ್ಯಸ್ಥರ, ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

National Youth Festival 2023: ಯುವಜನೋತ್ಸವ: 4 ವರ್ಷಗಳ ಬಳಿಕ ಮತ್ತೆ ಶೃಂಗಾರಗೊಳ್ಳುತ್ತಿದೆ ಧಾರವಾಡ!

ಉಚಿತ ಸಾರಿಗೆ:

ಯುವ ಸೇವಾ ಪಾಸ್‌ ಹೊಂದಿರುವ ಯುವಕರನ್ನು ಯುವಜನೋತ್ಸವಕ್ಕೆ ಕರೆ ತರಲು ಜಿಲ್ಲೆಯ ಪ್ರತಿ ಹಳ್ಳಿಯಿಂದ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದ ಸಚಿವರು, ನಮ್ಮ ಜಿಲ್ಲೆಯ ಆತಿಥ್ಯವನ್ನು ಇತರ ರಾಜ್ಯದ ಯುವಕರಿಗೆ ನೀಡುವುದರಿಂದ ಇಲ್ಲಿನ ಸಂಸ್ಕೃತಿ ಪರಿಚಯವಾಗುತ್ತದೆ.for the youth, by the youth, attend the youth 26ನೇ ರಾಷ್ಟ್ರೀಯ ಯುವಜನೋತ್ಸವದ ಘೋಷಣೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ಯುವಕರಿಗೆ ಆಹಾರ ಪೊಟ್ಟಣ, ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಯುವಜನೋತ್ಸವದಲ್ಲಿ ಅನೇಕ ರಾಜ್ಯಗಳ ಆಹಾರ ಪದ್ಧತಿ, ಕಲಾ ಪ್ರತಿಭೆ, ಸಾಹಸ ಕ್ರೀಡೆ, ಖೋಖೋ, ಗಿಲಿದಾಂಡು, ಮಲ್ಲಕಂಬದಂತಹ ಕ್ರೀಡೆಗಳ ಪ್ರದರ್ಶನಗೊಳ್ಳುತ್ತವೆ ಎಂದು ತಿಳಿಸಿದರು. www.nythubballidharwad2023.in ವೆಬ್‌ ಪೋರ್ಟಲ್‌ ಉಪಯೋಗಿಸಿಕೊಂಡು, ಪಾಸ್‌ ಪಡೆಯಬೇಕು. ಪಾಸ್‌ಗಳನ್ನು ತಮ್ಮ ಮೊಬೈಲ್‌ನಲ್ಲಿಯೇ ಪಡೆದುಕೊಂಡು ಜ. 12ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಜೋಶಿ ಹೇಳಿದರು.

ಶಾಸಕ ಅರವಿಂದ ಬೆಲ್ಲದ(MLA arvind bellad) ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagdish shettar), ಶಾಸಕ ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಲೋಕೇಶ ಜಗಲಾಸರ, ಮಹಾನಗರ ಪಾಲಿಕೆ ಆಯುಕ್ತ ಡಾ. ಗೊಪಾಲಕೃಷ್ಣ ಬಿ., ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಂಗಲ್‌ ರೆಸಾರ್ಚ್‌ ಅಧ್ಯಕ್ಷ ರಾಜೇಶ ಕೋಟೆನ್ನವರ, ಮಾಜಿ ಶಾಸಕಿ ಸೀಮಾ ಮಸೂತಿ, ತಹಸೀಲ್ದಾರ್‌ ಸಂತೋಷ ಹಿರೇಮಠ, ಉಪವಿಭಾಗಾಧಿಕಾರಿ ಅಶೋಕ ತೆಲಿ, ಜಿಲ್ಲೆಯ ವಿವಿಧ ಕಾಲೇಜುಗಳ ಮುಖ್ಯಸ್ಥರು, ಪ್ರಾಚಾರ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 

 ಅತಿಥಿಗಳಿಗೆ ಕೃಷಿ ವಿವಿ ಸಾಧನೆ ತಿಳಿಸಲು ಕ್ರಮ

ಯುವಜನೋತ್ಸವ(Yuvajanotsav)ಕ್ಕೆ ಆಗಮಿಸುವ ಸುಮಾರು 3000ಕ್ಕೂ ಅಧಿಕ ಯುವ ಕಲಾವಿದರು ಹಾಗೂ ಅಧಿಕಾರಿಗಳು ಕೃಷಿ ವಿವಿಯ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ವಿವಿ ಸಾಧನೆ, ಜಿಲ್ಲೆಯ ವಿಶೇಷತೆ ಹಾಗೂ ಉತ್ತರ ಕರ್ನಾಟಕದ ವಿಶೇಷಣ ಪರಿಚಯಿಸಲು ಕ್ರಮವಹಿಸುವುದಾಗಿ ಶಾಸಕ ಅಮೃತ ದೇಸಾಯಿ ಹೇಳಿದರು. ಶುಕ್ರವಾರ ಕೃಷಿ ವಿಶ್ವವಿದ್ಯಾಲಯದ(agriculture university) ಅಧಿಕಾರಿಗಳು ಮತ್ತು ವಿವಿಧ ಸಮಿತಿ ಸದಸ್ಯರೊಂದಿಗೆ ಸಿದ್ಧತೆಗಳ ಕುರಿತು ಸಭೆ ನಡೆಸಿ ಮಾತನಾಡಿದರು.

ವಿವಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜ. 12ರಿಂದ 16ರ ವೆರೆಗೆ ಯುವಜನೋತ್ಸವಕ್ಕೆ ತಮ್ಮ ಸಮಯ ಮೀಸಲಿಟ್ಟು ಕೆಲಸ ಮಾಡಬೇಕು. ಹೀಗಾಗಲೇ ಜ. 7ರಿಂದ 17ರ ವರೆಗೆ ವಿವಿ ಆವರಣದ ಎಲ್ಲ ವಿಭಾಗಗಳಿಗೆ ರಜೆ ಘೋಷಿಸಲಾಗಿದೆ. ವಸತಿ ನಿಲಯಗಳ ದುರಸ್ತಿ ಮತ್ತು ವಿವಿ ಆವರಣದಲ್ಲಿ . 160 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಸರ್ಕಾರ ಕೈಗೊಂಡಿದೆ ಎಂದರು.

10 ಸಾವಿರಕ್ಕೂ ಹೆಚ್ಚು ಅತಿಥಿಗಳು ವಿವಿ ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಮುಖ ಸಂಶೋಧನೆಗಳ ಮೂಲಕ ಗುರುತಿಸಿಕೊಂಡಿರುವ ಕೃಷಿ ವಿವಿ ಮತ್ತು ಜಿಲ್ಲೆಯ ಕೃಷಿ ಪದ್ಧತಿಯನ್ನು ಅತಿಥಿಗಳಿಗೆ ಪರಿಚಯಿಸಬೇಕು. ಸಿರಿಧಾನ್ಯಗಳ ಮಹತ್ವ ಪ್ರಚುರಪಡಿಸಲು ವಿವಿ ಮುಖ್ಯ ದ್ವಾರದ ಹತ್ತಿರ 20ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಿ, ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ ಎಂದು ಶಾಸಕರು ತಿಳಿಸಿದರು.

ಕುಲಪತಿ ಡಾ. ಪಿ.ಎಲ್‌. ಪಾಟೀಲ ಮಾತನಾಡಿ, ಟೆಕ್ನಾಲಜಿಕಲ್‌, ಶೆಡ್‌ನಲ್ಲಿ 7 ಸಾವಿರ ಶಿಬಿರಾರ್ಥಿ, 2 ಸಾವಿರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೆಳಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಜ. 15ರಂದು 7 ಸಾವಿರ ಜನರಿಗೆ ಯೋಗಾಥಾನ್‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಜ. 13ರಿಂದ 16ರ ವರೆಗೆ ಯುವ ಸಂವಾದ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಪ್ರೇಕ್ಷಾ ಗೃಹದಲ್ಲಿ ಜನಪದ ಗೀತೆಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅತಿಥಿಗಳಿಗೆ 500 ಸಿರಿಧಾನ್ಯಗಳ ಕಿಟ್‌ ನೀಡಲಾಗುವುದು ಎಂದರು.

 

ಮೀಸಲಾತಿ ಒದಗಿಸಲು ಸಿಎಂ ದೃಢ ಹೆಜ್ಜೆ: ಕೇಂದ್ರ ಸಚಿವ ಜೋಶಿ

ಸಭೆಯಲ್ಲಿ ಕುಲಸಚಿವ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಅಶೋಕ ತೆಲಿ, ಹುಡಾ ಆಯುಕ್ತ ಸಂತೋಷ ಬಿರಾದಾರ, ಮಹಾನಗರ ಪಾಲಿಕೆ ಅಪರ ಆಯುಕ್ತ ಶಂಕರಾನಂದ ಬನಶಂಕರಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ತಹಸೀಲ್ದಾರ್‌ ಸಂತೋಷ ಹಿರೇಮಠ ಹಾಗೂ ಅಧಿಕಾರಿಗಳು ಇದ್ದರು.

click me!