ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಯಾರಿಗೆ..?

By Kannadaprabha NewsFirst Published Jan 7, 2023, 6:31 AM IST
Highlights

ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಘಟನೆಗೆ ಶ್ರಮಿಸುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ನಾನು ಸಹ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ ಕೆಪಿಸಿಸಿ ಸದಸ್ಯ ಎಚ್‌.ತ್ಯಾಗರಾಜು ಹೇಳಿದರು.

 ಪಾಂಡವಪುರ :  ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಘಟನೆಗೆ ಶ್ರಮಿಸುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ನಾನು ಸಹ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ ಕೆಪಿಸಿಸಿ ಸದಸ್ಯ ಎಚ್‌.ತ್ಯಾಗರಾಜು ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಮಾಜಿ ಶಾಸಕ ಡಿ.ಹಲಗೇಗೌಡರು ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ನಾಲ್ಕುಬಾರಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರಕ್ಕೆ ತನ್ನದೆಯಾದ ಕೊಡುಗೆ ನೀಡಿದ್ದಾರೆ. ಕ್ಷೇತ್ರದಲ್ಲಿ ತಮ್ಮದೆಯಾದ ಕಾರ್ಯಕರ್ತರ ಪಡೆಹೊಂದಿದ್ದಾರೆ ಎಂದರು.

ಮುಂದಿನ ಚುನಾವಣೆಗೆ ಆಕಾಂಕ್ಷಿತ ಅಭ್ಯರ್ಥಿಗಳು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸುವಂತೆ ನೀಡಿದ ಸೂಚನೆಯ ಮೇರೆಗೆ ನಾನು ಸಹ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದ್ದೇನೆ. ನಾನು 1994ರಿಂದಲೇ ಸಕ್ರೀಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಂದ ಇಲ್ಲಿಯ ತನಕ ಕ್ಷೇತ್ರದಲ್ಲಿ ಯಾವುದೇ ಪ್ರಚಾರ ಪಡೆದುಕೊಳ್ಳದೆ, ಎಲೆಮರೆಕಾಯಿಯಂತೆ ಕೈಲಾದ ಸೇವೆ ಮಾಡಿಕೊಂಡು ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ: ಡಿ.ಕೆ.ಶಿವಕುಮಾರ್‌

ತಾಲೂಕಿನ ಜಕ್ಕನಹಳ್ಳಿ ಜಿಪಂ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದೇನೆ. ಜತೆಗೆ ಗ್ಯಾಸ್‌ ಉದ್ಯಮಿಯಾಗಿದ್ದು ನಿರಂತರವಾಗಿ ಜನಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ. ಪ್ರಸ್ತುತ ಕೆಪಿಸಿಸಿ ಸದಸ್ಯನಾಗಿದ್ದೇನೆ. ನನ್ನ ಅಣ್ಣ ಎಚ್‌.ಮಂಜುನಾಥ್‌ ಅವರು ಬ್ಲಾಕ್‌ ಕಾಂಗ್ರೆಸ… ಅಧ್ಯಕ್ಷರಾಗಿ, ಜಿಪಂ ಮಾಜಿ ಸದಸ್ಯರಾಗಿ ಸೇವೆಸಲ್ಲಿಸಿದ್ದು ಕ್ಷೇತ್ರದಲ್ಲಿ ನನ್ನದೆಯಾದ ಕಾರ್ಯಕರ್ತರ ಪಡೆಯೊಂದಿಗೆ ಜನಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಪಕ್ಷದ ಹೈಕಮೆಂಡ್‌ ಸೂಚನೆಯಂತೆ ನಾವೆಲ್ಲರು ಅರ್ಜಿ ಹಾಕಿದ್ದೇವೆ. ಯಾವುದೇ ಕ್ಷೇತ್ರದಲ್ಲೂ ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಒಮ್ಮತದಿಂದ ಪಕ್ಷದ ನಾಯಕರಿಗೆ ಮನವಿ ಮಾಡಿದ್ದೇವೆ ಎಂದರು.

ಕಾಂಗ್ರೆಸ್‌ ಹೈಕಮೆಂಡ್‌ ಸಹ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಭರವಸೆ ನೀಡಿದೆ. ಪಕ್ಷದ ಕಾಂಗ್ರೆಸ್‌ ಪಕ್ಷದ ಯಾವುದೇ ಅಭ್ಯರ್ಥಿಗೆ ಟಿಕೆಚ್‌ ನೀಡಿದರೂ ಸಹ ಅವರ ಪರವಾಗಿ ಪಕ್ಷದ ಕಾರ್ಯಕರ್ತನಾಗಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ ಎಂದು ಎಚ್‌.ತ್ಯಾಗರಾಜು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲವ್‌ ಜಿಹಾದ್‌: ನಳಿನ್‌ ಕಟೀಲ್‌ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ಕಾಂಗ್ರೆಸ್‌ ಪಕ್ಷವನ್ನು ಯಾರು ಅಡಮಾನವಿಟ್ಟಿಲ್ಲ. ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿಕೆ ಸರಿಯಲ್ಲ. ರಾಜ್ಯದ ರೈತ ಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯ ಅವರು ಸಾವಿನಿಂದಾಗಿ ಅನುಕಂಪದಿಂದ ಕಳೆದ ಬಾರಿ ಕಾಂಗ್ರೆಸ್‌ ಪಕ್ಷ ರೈತ ಸಂಘಕ್ಕೆ ಬೆಂಬಲ ನೀಡಿತ್ತು. ಅದಕ್ಕೆ ಪಕ್ಷ ಅಡಮಾನವಿಡಬೇಡಿ ಎಂಬ ಹೇಳಿಕೆ ಸರಿಯಲ್ಲ. ಎಚ್‌.ಡಿ.ದೇವೇಗೌಡರು ಪ್ರಧಾನಿಯಾಗಿದ್ದು, ಕಳೆದ ಬಾರಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್‌ ಪಕ್ಷದಿಂದ ಎನ್ನುವುದನ್ನು ಮರೆಯಬಾರದು ಆಕ್ರೋಶವ್ಯಕ್ತಪಡಿಸಿದರು.

ಸುದ್ಧಿಗೋಷ್ಠಿಯಲ್ಲಿ ಕೆಪಿಸಿಸಿ ಕಿಸಾನ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಕುಬೇರ್‌, ಟಿಎಪಿಸಿಎಂಎಸ್‌ ನಿರ್ದೇಶಕ ಶ್ರೀಕಾಂತ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಭರತ್‌ ಪಟೇಲ…, ಕೆ.ಎಸ್‌.ತಮ್ಮಣ್ಣಗೌಡ, ಸಿದ್ದಲಿಂಗಯ್ಯ, ಪಾಪು, ಸೇವಾದಳದ ಅಧ್ಯಕ್ಷ ದಿನೇಶ್‌, ರಾಘವೇಂದ್ರ ಸೇರಿದಂತೆ ಹಲವರು ಇದ್ದರು.

ಸಿದ್ದರಾಮಯ್ಯ ಬಂದರೆ ಸ್ವಾಗತ

ಕೋಲಾರ (ಜ.05): ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಆಹ್ವಾನಿಸಿದ್ದೇವೆ, ಅವರು ನಮ್ಮ ನಾಯಕರು. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಸ್ವಾಗತಿಸುತ್ತೇವೆ. ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸ್ಪರ್ಧಿಸುವ ಅರ್ಹತೆ ಅವರಿಗೆ ಇದೆ. ಅವರು ಕಾಂಗ್ರೆಸ್‌ ಪಕ್ಷದ ಪ್ರೋಟೋಕಾಲ್‌ನಲ್ಲಿ ಇರುವವರು ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸುವ ಕೆಲಸ ಮಾಡುತ್ತೇನೆ, ಎಲ್ಲಿ ಅರ್ಜಿ ಹಾಕಬೇಕೆಂದರೆ ಅಲ್ಲಿ ಹಾಕುತ್ತೇನೆ. ರಾಜ್ಯದ ರಾಜಕಾರಣಕ್ಕೆ ಬರಲು ನಿರ್ಧರಿಸಿಲ್ಲ. ಹೈಕಮಾಂಡ್‌ ಸೂಚಿಸಿದರೆ ಮಾತ್ರ ಅರ್ಜಿ ಹಾಕುತ್ತೇನೆ, ದೊಡ್ಡಬಳ್ಳಾಪುರದಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಭಿನ್ನಮತ ಬಿಟ್ಟು ಒಂದಾಗುತ್ತೇವೆ: ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಜಿಲ್ಲೆಯಲ್ಲಿ ಭಿನ್ನಮತ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋಗಲು ನಿರ್ಧರಿಸಿದ್ದೇವೆ, ಈ ಪತ್ರಿಕಾಗೋಷ್ಠಿಗೆ ನಾನು ಯಾವ ಶಾಸಕರನ್ನು ಆಹ್ವಾನಿಸಿಲ್ಲ. ಹಾಗಾಗಿ ಯಾರೂ ಬಂದಿಲ್ಲ, ಸಿದ್ದರಾಮಯ್ಯ ಜ.9ರಂದು ಕೋಲಾರಕ್ಕೆ ಬಂದಾಗ ನಿಮ್ಮ ಪ್ರಶ್ನೆಗಳಿಗೆ ಅವರೇ ಸ್ಪಷ್ಟಪಡಿಸಲಿದ್ದಾರೆ ಎಂದರು. ಅಂಬೇಡ್ಕರ್‌ರನ್ನು ಕಾಂಗ್ರೆಸ್‌ ಪಕ್ಷವು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುವುದು ವಿರೋಧ ಪಕ್ಷವು ಮಾಡುತ್ತಿರುವ ಅರ್ಥವಿಲ್ಲದ ಅರೋಪ, ಭಾರತದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮ-ಜಾತಿಗಳ ಶ್ರಮವಿದೆ. ಇದನ್ನು ಬೇರ್ಪಡಿಸಿ ರಾಜಕೀಯ ಮಾಡಲು ಸಂಚು ರೂಪಿಸುತ್ತಿರುವುದು ದುರಂತದ ವಿಷಯ ಎಂದು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.

click me!