Mandya : ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಸೇರ್ಪಡೆ

By Kannadaprabha NewsFirst Published Jan 7, 2023, 6:26 AM IST
Highlights

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ ಗಣಿಗ ರವಿಕುಮಾರ್‌ ಮನವಿ ಮಾಡಿದರು.

  ಮಂಡ್ಯ (j. 07):  ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ. ಹಾಗಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ ಗಣಿಗ ರವಿಕುಮಾರ್‌ ಮನವಿ ಮಾಡಿದರು.

ತಾಲೂಕಿನ ಮುದ್ದಂಗೆರೆ ಗ್ರಾಮದ ಶ್ರೀ ಮುತ್ತುರಾಯಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಜೆಡಿಎಸ್‌ ತೊರೆದು ಬಂದ ಅವಿನಾಶ್‌ ಹಾಗೂ ಅವರ ಅಭಿಮಾನಿ ಬಳಗವನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡು ಮಾತನಾಡಿದರು.

Latest Videos

ಜಿಲ್ಲೆಯೊಳಗೆ ಬಲಿಷ್ಠವಾಗಿದೆ. ಎರಡು ವಿಧಾನಸಭಾ ಚುನಾವಣೆಗಳಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಹೈಕಮಾಂಡ್‌ ಟಿಕೆಟ್‌ ನೀಡುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದಕ್ಕೆ ಶ್ರಮಿಸಲಿದ್ದೇವೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳನ್ನು ಏಳೂ ಸ್ಥಾನಗಳಲ್ಲಿ ಗೆಲ್ಲಿಸಿದ್ದೀರಿ. ಅದರಿಂದ ಜಿಲ್ಲೆ ಎಷ್ಟುಅಭಿವೃದ್ಧಿ ಕಂಡಿದೆ ಎನ್ನುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ ಅಭಿವೃದ್ಧಿಯ ಪರವಾಗಿದೆ. ಜಿಲ್ಲೆಯೊಳಗೆ ಅಭಿವೃದ್ಧಿಯಲ್ಲಿ ಹೊಸ ಬದಲಾವಣೆಯನ್ನು ತರಲು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕೋರಿದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅನೇಕ ರೈತರ ಪರವಾದ, ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಅವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಜನರನ್ನು ಕಾಂಗ್ರೆಸ್‌ನತ್ತ ಮನವೊಲಿಸಲು ಕಾರ್ಯಕರ್ತರು ಶ್ರಮಿಸುವಂತೆ ತಿಳಿಸಿದರು.

ಲವ್‌ ಜಿಹಾದ್‌: ನಳಿನ್‌ ಕಟೀಲ್‌ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ಕಾರ್ಯಕ್ರಮಕ್ಕೂ ಮುನ್ನ ರವಿಕುಮಾರ್‌ ಗಣಿಗ ಅವರನ್ನು ಊರಿನ ಮುಖ್ಯ ರಸ್ತೆಯಿಂದ ಗ್ರಾಮದವರೆಗೆ ಬೈಕ್‌ ರಾರ‍ಯಲಿಯಲ್ಲಿ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಡಾ.ಹೆಚ್‌.ಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ಪಾಜಿಗೌಡ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಜಯಕುಮಾರ್‌, ಹಾಲ್ಕೆರೆ ಗ್ರಾಮದ ರವಿ, ಕೃಷ್ಣೇಗೌಡ ಜಗದೀಶ್‌. ತೇಜ, ಹರ್ಷ. ಸತ್ಯಪ್ಪ. ದೇವರಾಜು, ಆನಂದ್‌, ಮುದ್ದಂಗೆರೆಯ ಹಿರಿಯ ಮುಖಂಡರಾದ ನಾರಾಯಣಪ್ಪ. ಕೃಷ್ಣಪ್ಪ ಮಾದೇವ. ನಾರಾಯಣಸ್ವಾಮಿ. ಡಣಾಯಕನಪುರದ ಹನುಮೇಗೌಡ. ಲೋಕೇಶ್‌. ಶಂಕರ್‌, ಆದರ್ಶ, ವೆಂಕಟೇಶ್‌, ಪರಶಿವಮೂರ್ತಿ, ಪ್ರಸನ್ನ ಇತರರಿದ್ದರು.

ಸಿದ್ದರಾಮಯ್ಯ ಬಂದರೆ ಸ್ವಾಗತ

ಕೋಲಾರ  : ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಆಹ್ವಾನಿಸಿದ್ದೇವೆ, ಅವರು ನಮ್ಮ ನಾಯಕರು. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಸ್ವಾಗತಿಸುತ್ತೇವೆ. ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸ್ಪರ್ಧಿಸುವ ಅರ್ಹತೆ ಅವರಿಗೆ ಇದೆ. ಅವರು ಕಾಂಗ್ರೆಸ್‌ ಪಕ್ಷದ ಪ್ರೋಟೋಕಾಲ್‌ನಲ್ಲಿ ಇರುವವರು ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಹೈಕಮಾಂಡ್‌ ಸೂಚಿಸುವ ಕೆಲಸ ಮಾಡುತ್ತೇನೆ, ಎಲ್ಲಿ ಅರ್ಜಿ ಹಾಕಬೇಕೆಂದರೆ ಅಲ್ಲಿ ಹಾಕುತ್ತೇನೆ. ರಾಜ್ಯದ ರಾಜಕಾರಣಕ್ಕೆ ಬರಲು ನಿರ್ಧರಿಸಿಲ್ಲ. ಹೈಕಮಾಂಡ್‌ ಸೂಚಿಸಿದರೆ ಮಾತ್ರ ಅರ್ಜಿ ಹಾಕುತ್ತೇನೆ, ದೊಡ್ಡಬಳ್ಳಾಪುರದಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಭಿನ್ನಮತ ಬಿಟ್ಟು ಒಂದಾಗುತ್ತೇವೆ: ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಭರ್ತಿ ಮಾಡಲಾಗುವುದು. ಜಿಲ್ಲೆಯಲ್ಲಿ ಭಿನ್ನಮತ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋಗಲು ನಿರ್ಧರಿಸಿದ್ದೇವೆ, ಈ ಪತ್ರಿಕಾಗೋಷ್ಠಿಗೆ ನಾನು ಯಾವ ಶಾಸಕರನ್ನು ಆಹ್ವಾನಿಸಿಲ್ಲ. ಹಾಗಾಗಿ ಯಾರೂ ಬಂದಿಲ್ಲ, ಸಿದ್ದರಾಮಯ್ಯ ಜ.9ರಂದು ಕೋಲಾರಕ್ಕೆ ಬಂದಾಗ ನಿಮ್ಮ ಪ್ರಶ್ನೆಗಳಿಗೆ ಅವರೇ ಸ್ಪಷ್ಟಪಡಿಸಲಿದ್ದಾರೆ ಎಂದರು. ಅಂಬೇಡ್ಕರ್‌ರನ್ನು ಕಾಂಗ್ರೆಸ್‌ ಪಕ್ಷವು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುವುದು ವಿರೋಧ ಪಕ್ಷವು ಮಾಡುತ್ತಿರುವ ಅರ್ಥವಿಲ್ಲದ ಅರೋಪ, ಭಾರತದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಧರ್ಮ-ಜಾತಿಗಳ ಶ್ರಮವಿದೆ. ಇದನ್ನು ಬೇರ್ಪಡಿಸಿ ರಾಜಕೀಯ ಮಾಡಲು ಸಂಚು ರೂಪಿಸುತ್ತಿರುವುದು ದುರಂತದ ವಿಷಯ ಎಂದು ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್‌ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ: ಡಿ.ಕೆ.ಶಿವಕುಮಾರ್‌

ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್‌: ಸಿದ್ದರಾಮಯ್ಯ ರಾಜ್ಯದಲ್ಲಿ ನಮ್ಮ ಪಕ್ಷದ ಹೈಕಮಾಂಡ್‌. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಅಥವಾ ಬೇರೆಯವರಿಗೆ ಟಿಕೆಟ್‌ ಕೊಡಬಹುದು, ನಾವುಗಳು ಏನಿದ್ದರೂ ಪಕ್ಷದ ಶಿಸ್ತಿನ ಸಿಪಾಯಿಗಳಾಷ್ಟೆ. ಪಕ್ಷವನ್ನು ಬಿಟ್ಟು ಹೋಗಿರುವವರ ಬಗ್ಗೆ ಬೆಸುಗೆ ಹಾಕಲು ಮಾಲೂರಿನಲ್ಲಿ ಪ್ರಯತ್ನಿಸಿದೆ. ಎಲ್ಲರೂ ಒಗ್ಗಟ್ಟಿನಿಂದ ಹೋದಾಗ ಯಶಸ್ಸು ಸುಲಭವಾಗಲಿದೆ, ಮಾಲೂರು ಶಾಸಕ ನಂಜೇಗೌಡ ಮತ್ತು ಮಾಜಿ ಶಾಸಕ ಎ.ನಾಗರಾಜ್‌ ಅವರದ್ದು ಗುರು-ಶಿಷ್ಯರ ಸಂಬಂಧ ಎಂದು ಹೇಳಿದರು.

click me!