ಕಳೆದ ಮೂರು ಅವಧಿಯ ಸಿಎಂಗಳ ಕೊನೆಯ ಕಾರ್ಯಕ್ರಮ ರದ್ದು: ವಿಶೇಷತೆಗೆ ಸಾಕ್ಷಿಯಾದ ಕೊಪ್ಪಳ..!

By Girish Goudar  |  First Published Mar 29, 2023, 1:11 PM IST

ಕಳೆದ ಮೂರು ಅವಧಿಯ ಸಿಎಂಗಳ ಕೊನೆಯ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ರದ್ದಾಗಿರುವುದು ವಿಶೇಷವಾಗಿದೆ. 


ಕೊಪ್ಪಳ(ಮಾ.29): ಕೊಪ್ಪಳ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಕೊನೆಯ ಕಾರ್ಯಕ್ರಮವೂ ರದ್ದಾಗಿದೆ.  ಕಳೆದ ಮೂವರು ಅವಧಿಯಲ್ಲಿ ಇದು ಪುನರಾವರ್ತನೆಯಾಗಿದೆ. ಜಗದೀಶ ಶೆಟ್ಟರ್, ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಅವರ ಕೊನೆಯ ಕಾರ್ಯಕ್ರಮಗಳು ಕೊಪ್ಪಳ ಜಿಲ್ಲೆಯಲ್ಲಿ ರದ್ದಾಗಿವೆ. 2013, 2018, 2023 ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಿಎಂಗಳ ಕೊನೆಯ ಕಾರ್ಯಕ್ರಮ ರದ್ದಾಗಿದ್ದು ವಿಶೇಷವೇ ಆಗಿದೆ. 

2013 ರಲ್ಲಿ ನೀತಿ ಸಂಹಿತೆ ಜಾರಿಯ ಕೊ‌ನೆಯ ದಿ‌ನ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಜಿಲ್ಲಾ ಆಸ್ಪತ್ರೆಯನ್ನ ಉದ್ಘಾಟಿಸಿದ್ದರು. 2018 ರಲ್ಲಿ ನೀತಿ ಸಂಹಿತೆ ಜಾರಿಯ ಹಿಂದಿನ‌ ದಿನ ಯಲಬುರ್ಗಾದಲ್ಲಿ ಲ್ಯಾಪ್‌ಟಾಪ್ ವಿತರಣೆ, ಅಭಿವೃದ್ಧಿ ಕಾರ್ಯಗಳಿಗೆ ಅಂದಿನ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು.  ಇನ್ನು ಇಂದು 2023 ರಲ್ಲಿ ಯಲಬುರ್ಗಾ ದಲ್ಲಿ ಕೃಷ್ಣ ಬಿ ಸ್ಕೀಂ ಯೋಜನೆಯ ಕೆರೆ ತುಂಬಿಸುವ ಯೋಜನೆಯ ಉದ್ಘಾಟನೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ನೆರವರಿಸಬೇಕಿತ್ತು. ಆದರೆ, ಇಂದೇ ರಾಜ್ಯ ವಿಧಾನಸಭೆ ಚುನಾವಣೆಯ ಡೇಟ್‌ ಫಿಕ್ಸ್‌ ಆಗಿದೆ. ಹೀಗಾಗಿ ಇಂದಿನ ಸಿಎಂ ಬೊಮ್ಮಾಯಿ ಅವರ ಎಲ್ಲ ಕಾರ್ಯಕ್ರಮಗಳು ರದ್ದು ಪಡಿಸಲಾಗಿತ್ತು.   

Latest Videos

undefined

ರಾಜ್ಯ ವಿಧಾನಸಭೆ ಚುನಾವಣೆಗೆ ಡೇಟ್‌ ಫಿಕ್ಸ್‌: ಇಂದಿನ ಸಿಎಂ ಕಾರ್ಯಕ್ರಮ ರದ್ದಾಗುತ್ತಾ?

ಕಳೆದ ಮೂರು ಅವಧಿಯ ಸಿಎಂಗಳ ಕೊನೆಯ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ರದ್ದಾಗಿರುವುದು ವಿಶೇಷವಾಗಿದೆ. 

ನೀತಿ ಸಂಹಿತೆ ಆರಂಭದ ಭೀತಿ ಹಿನ್ನಲೆಯಲ್ಲಿ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಕೃಷ್ಣ ಬಿ ಸ್ಕೀಂ ಯೋಜನೆಯೆ ಕೆರೆ ತುಂಬಿಸುವ ಯೋಜನೆಯ ಉದ್ಘಾಟನೆಯನ್ನ ತರಾತುರಿಯಲ್ಲಿ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ‌ ಬಸವರಾಜ ಬೊಮ್ಮಾಯಿ ಭಾಗಿಯಾಗಬೇಕಿತ್ತು. ಕೇಂದ್ರ ಚುನಾವಣೆ ಆಯೋಗದ ಪತ್ರಿಕಾಗೋಷ್ಠಿ ಹಿನ್ನಲೆಯಲ್ಲಿ ಸಿಎಂ ಪ್ರವಾಸ ರದ್ದು ಪಡಿಸಲಾಗಿತ್ತು. 

ಕೇಂದ್ರ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ 11.30 ಕ್ಕೆ ನಡೆದಿದೆ. ಅದಕ್ಕೂ ಮುನ್ನವೇ ಜಿಲ್ಲಾ ಆಡಳಿತ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್, ಸಂಸದ ಕರಡಿ ಸಂಗಣ್ಣ, ಎಂಎಲ್‌ಸಿ ಹೇಮಲತಾ ನಾಯಕ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. 

click me!