Chikkaballapura : 50 ದಿನ ಪೂರ್ಣಗೊಳಿಸಿದ ಜೆಡಿಎಸ್‌ ನಡೆ ಹಳ್ಳಿ ಕಡೆ

By Kannadaprabha NewsFirst Published Mar 29, 2023, 8:30 AM IST
Highlights

ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಮುಗಿಯುತಿದ್ದಂತೆ ಮಾಜಿ ಶಾಸಕರಾದ ಚಿಕ್ಕಬಳ್ಳಾಪುರದ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಆರಂಭಿಸಿರುವ ಜೆಡಿಎಸ್‌ ನಡೆ ಹಳ್ಳಿ ಕಡೆ ಕಾರ್ಯಕ್ರಮ 50 ದಿನ ಪೂರೈಸಿ 51 ನೇ ದಿನಕ್ಕೆ ಕಾಲಿಟ್ಟಿದ್ದು ತಾಲೂಕಿನ ಪಟ್ರೇನಹಳ್ಳಿ ಪಂಚಾಯ್ತಿ ಮುತ್ತುಕದಹಳ್ಳಿಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದರು.

  ಚಿಕ್ಕಬಳ್ಳಾಪುರ :  ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಮುಗಿಯುತಿದ್ದಂತೆ ಮಾಜಿ ಶಾಸಕರಾದ ಚಿಕ್ಕಬಳ್ಳಾಪುರದ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಆರಂಭಿಸಿರುವ ಜೆಡಿಎಸ್‌ ನಡೆ ಹಳ್ಳಿ ಕಡೆ ಕಾರ್ಯಕ್ರಮ 50 ದಿನ ಪೂರೈಸಿ 51 ನೇ ದಿನಕ್ಕೆ ಕಾಲಿಟ್ಟಿದ್ದು ತಾಲೂಕಿನ ಪಟ್ರೇನಹಳ್ಳಿ ಪಂಚಾಯ್ತಿ ಮುತ್ತುಕದಹಳ್ಳಿಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದರು.

ಈ ವೇಳೆ ಕೆ.ಪಿ.ಬಚ್ಚೇಗೌಡ ಮಾತನಾಡಿ, ಸಚಿವ ಸುಧಾಕರ್‌ ಕೇಂದ್ರ, ರಾಜ್ಯ ಸರ್ಕಾರಗಳ ಫಲಾನುಭವಿಗಳನ್ನು ಸಿಎಂ ಕಾರ್ಯಕ್ರಮಕ್ಕೆ ಕರೆ ತರಲು ನಿವೇಶನದ ಹಕ್ಕು ಪತ್ರ ಕೊಡುವ ಸುಳ್ಳು ಬರವಸೆ ನೀಡಿದ್ದಾರೆ ಕಾರ್ಯಕ್ರಮಕ್ಕೆ ಹೋಗಿ ಬಂದವರೆಲ್ಲಾ ಬರಿಗೈಲಿ ಮನೆಗೆ ಹೋಗಿದ್ದಾರೆ. ಮೆಡಿಕಲ್‌ ಕಾಲೇಜು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುತ್ತೆ ಅಂತ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದಾರೆ ಎಂದು ಟೀಕಿಸಿದರು.

Latest Videos

ಗ್ರಾಮಗಳಲ್ಲಿ ಜೆಡಿಎಸ್‌ಗೆ ಬೆಂಬಲ

ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ ಮುನೇಗೌಡ ಮಾತನಾಡಿ, ಹಳ್ಳಿಗಳಲ್ಲಿ ಜೆಡಿಎಸ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರಮಾಣಿಕ ಸರಳ ಸಜ್ಜನ ವ್ಯಕ್ತಿ ಎನಿಸಿಕೊಂಡಿರುವ ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡರಿಗೆ 69 ವರ್ಷ ವಯಸ್ಸಾಗಿದ್ದರೂ ಯುವಕರಿಗಿಂತಲೂ ಗಟ್ಟಿಮುಟ್ಟಾಗಿ ಒಡಾಡಿ ಪ್ರತಿಯೋಬ್ಬ ಮನೆಯ ಯಜಮಾನರ ಹೇಸರೇಳಿ ಮಾತನಾಡಿದ್ದಾರೆ. ಪಂಚರತ್ನ ಯೋಜನೆಗಳನ್ನ ಬಿಡಿಸಿ ತಿಳಿಸಿದ್ದಾರೆ. ಅವರ ಸರಳ ನಡೆಯೇ ಅವರನ್ನ ಈ ಬಾರಿ ಶಾಸಕನಾಗಿ ಮಾಡುತ್ತೆ ಎಂದರು.

ಈ ವೇಳೆ ಪಟ್ರೇನಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ಮುನೇಗೌಡ, ಹಿರಿಯ ಮುಖಂಡರಾದ ಮುಕ್ತ ಮುನಿಯಪ್ಪ, ವೀಣಾ ರಾಮು, ಮಂಜುನಾಥ…, ಸ್ವರೂಪ್‌ ಬಚ್ಚೇಗೌಡ, ನಳಿನಾ ವೆಂಕಟೇಶ್‌ ಇತರರು ಹಾಜರಿದ್ದರು.

 HDK ಮುಖ್ಯಮಂತ್ರಿಯಾಗುದು ನಿಶ್ಚಿತ

 ಮಂಡ್ಯ:  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಹೆಚ್ಚಿನ ಸ್ಥಾನ ಪಡೆದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಶತಸಿದ್ಧ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಭೂತನ ಹೊಸೂರಿನಲ್ಲಿ ಆಯೋಜಿಸಿದ್ದ ಕೊತ್ತತ್ತಿ ಹೋಬಳಿ 2ನೇ ವೃತ್ತದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜೆಡಿಎಸ್‌ ಹಮ್ಮಿಕೊಂಡಿದ್ದ  ರಥಯಾತ್ರೆಗೆ ರಾಜ್ಯದ ಜನಸಾಮಾನ್ಯರಲ್ಲಿ ಪಕ್ಷದ ಬಗ್ಗೆ ಒಲವು ಮೂಡಿದೆ. ಇದರಿಂದ ಪಕ್ಷ ಮುಂದಿನ ಚುನಾವಣೆಯಲ್ಲಿ 80 ರಿಂದ 90 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದರು.

ರೈತರು, ಬಡವರು ಹಾಗೂ ಗಳಿಗೆ ಅನುಕೂಲವಾಗಲು ಪಂಚರತ್ನ ಯೋಜನೆ ಜಾರಿಗೊಳಿಸಲು ಪಕ್ಷ ಬದ್ಧವಾಗಿದೆ. ಮಂಡ್ಯದ ರೈತಾಪಿ ಜನರು ಸ್ವಾಭಿಮಾನಿಗಳಾಗಿದ್ದು, ಎಚ್‌.ಡಿ.ದೇವೇಗೌಡರ ಗರಡಿಯಲ್ಲಿ ಪಳಗಿರುವ ನಮ್ಮನ್ನು ಜನ ಎಂದಿಗೂ ಕೈಬಿಡುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಆಶಯವನ್ನು ಮನಗಾಣಬೇಕು ಎಂದರು.

ಕಾಂಗ್ರೆಸ್‌ ಪಕ್ಷ ಪ್ರತಿ ಮನೆಗೆ ಎರಡು ಸಾವಿರ ರು ಹಣ ನೀಡುವ ನಕಲಿ ಬಾಂಡ್‌ಗಳನ್ನು ವಿತರಿಸುತ್ತಿರುವುದು ಸರಿಯಲ್ಲ. ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬರದಿದ್ದರೆ ಕ್ಷೇತ್ರದ ಮಾಜಿ ಶಾಸಕರು ಪ್ರತಿ ಕುಟುಂಬಕ್ಕೆ 2 ಸಾವಿರ ರು ಹಣ ಕೊಡಲು ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ಯಾವ ಸಮುದಾಯದ ಜನರು ನೆಮ್ಮದಿಯಾಗಿಲ್ಲ. ಹಿಜಾಬ್… ಸಂಘರ್ಷ, ಕೋಮುವಾದ, ಗಲಭೆ ಸೃಷ್ಟಿಸುವ ಪ್ರವೃತ್ತಿಯಿಂದ ಜನ ರೋಸಿ ಹೋಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ 1421 ಕೋಟಿ ರುಗಳ ಯೋಜನೆ ಮಂಜೂರು ಮಾಡಿಸಲಾಗಿತ್ತು. ಅದನ್ನು ಬಿಜೆಪಿ ಮುಖ್ಯಮಂತ್ರಿಗಳು ತಡೆಹಿಡಿದರು ಎಂದು ಆರೋಪಿಸಿದರು.

ಜೆಡಿಎಸ್‌ನಿಂದ ಸರ್ವಾಂಗೀಣ ಅಭಿವೃದ್ಧಿ

  ತಿಪಟೂರು :  ಮುಸ್ಲಿಂ ಬಂಧುಗಳೇ ಯಾವತ್ತೂ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ನಂಬಬೇಡಿ, ಅವರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‌ನ್ನು ಬೆಂಬಲಿಸಿ, ಅಧಿಕಾರಕ್ಕೆ ತರುವ ಮೂಲಕ ನಿಮ್ಮ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

click me!