ಹಿಂದೂಗಳಿಂದ ಅಕಾಲಿಕ ಮರಣ ಹೊಂದಿದ ಮುಸ್ಲಿಂ ಯುವಕನ ಅಂತ್ಯಸಂಸ್ಕಾರ

By Kannadaprabha NewsFirst Published Sep 2, 2020, 12:44 PM IST
Highlights

ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ ಮುಸ್ಲಿಂ ಯುವಕನ ಅಂತ್ಯ ಸಂಸ್ಕಾರವನ್ನು ಹಿಂದೂ ಜನಾಂಗದವರು ಸೇರಿ ನೆರವೇರಿಸಿ ಭಾವೈಕ್ಯತೆ ಮೆರೆದಿದ್ದಾರೆ. 

ಬೇಲೂರು (ಸೆ.01): ಪಟ್ಟಣದ ಮುಸ್ಲಿಂ ಜನಾಂಗದ ಯುವಕ ಅಕಾಲಿಕ ಮರಣ ಹೊಂದಿದ್ದು, ಅವರ ಅಂತ್ಯ ಸಂಸ್ಕಾರವನ್ನು ಮುಸ್ಲಿಮರ ಖಬರಸ್ತಾನ್‌ದಲ್ಲಿ ಹಿಂದೂ ಮತ್ತು ಮುಸ್ಲಿಂ ಜನಾಂಗದವರು ಸೇರಿ ಒಟ್ಟಿಗೆ ಅಂತ್ಯ ಸಂಸ್ಕಾರ ನೆರವೇರಿಸಿದರು.

ಸುಮಾರು 25 ವರ್ಷಗಳ ಹಿಂದೆ ಅನಾಥ ಮಗುವೊಂದು ಸಿಕ್ಕಿದ್ದು ತಂದೆ ತಾಯಿ ಇಲ್ಲದ ಮಗುವನ್ನು ಬಿಕ್ಕೋಡು ರಸ್ತೆಯ ನಿವಾಸಿ ಮಹೇಶ್‌ ಎಂಬುವವರು ಮುಸ್ಲಿಂ ಯುವಕನಾಗಿದ್ದರೂ ಸಹ ಅವನನ್ನು ಕರೆತಂದು ಸಾಕಿ ಬೆಳೆಸಿದರು.ನಂತರ ವರ್ಷ ಕಳೆದಂತೆ ಸಲ್ಮಾನ್‌ ಕುಟುಂಬದ ಸದಸ್ಯನಾಗಿ ಮುಸ್ಲಿಂ ಯುವಕನಾಗಿದ್ದರೂ ಸಹ ಹಿಂದೂ ಸಂಪ್ರದಾಯದಂತೆ ಬೆಳೆದಿದ್ದರು.

ಬಸ್‌ ನಿಲ್ದಾಣ ಸಮೀಪದ ಹಣ್ಣಿನ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಈ ಯುವಕ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಇವರು ತೀವ್ರ ಅನಾರೋಗ್ಯದಿಂದಾಗಿ ನಿಧನ ಹೊಂದಿದ ಅವರನ್ನು ಸೋಮವಾರ ಸಂಜೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಬೇಲೂರು ಪಟ್ಟಣದ ಹೊಳೇಬೀದಿಯಲ್ಲಿರುವ ಖಬರಸ್ಥಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ಮಾಂಸಕ್ಕಾಗಿ ನಾಯಿಗಳ ಸಾಮೂಹಿಕ ಮಾರಣ ಹೋಮ : ನೂರಾರು ತಲೆಬುರುಡೆ ಪತ್ತೆ..

ಪಟ್ಟಣದ ಇತಿಹಾಸದಲ್ಲಿಯೇ ಇದು ಮೊದಲ ಬಾರಿ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಅಂತ್ಯ ಸಂಸ್ಕಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಾಮೀಯ ಮಸೀದಿಯ ಅಧ್ಯಕ್ಷ ಪೈರೋಜ್‌, ಕಾರ್ಯದರ್ಶಿ ನಹಿಂ, ಶರತ್‌, ಭರತ್‌, ಗಣೇಶ್‌, ತಾಹೇರ, ನೂರ್‌ ಅಹಮದ್‌, ಸಂಪತ್‌, ಪರಮೇಶ್‌ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

click me!