ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಭೂಕುಸಿತ| ದ್ಯಾಮಣ್ಣ ಕುರಹಟ್ಟಿ ಎಂಬುವರ ಮನೆ ಪಡಸಾಲೆ ಸುಮಾರು 15 ಅಡಿಯಷ್ಟು ಕುಸಿತ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ|
ನರಗುಂದ(ಆ.17): ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ಕಸಬಾ ಓಣೆಯ ದ್ಯಾಮಣ್ಣ ಕುರಹಟ್ಟಿ ಎಂಬುವರ ಮನೆ ಪಡಸಾಲೆ ಸುಮಾರು 15 ಅಡಿಯಷ್ಟು ಕುಸಿತಗೊಂಡಿದೆ.
ಶನಿವಾರ ಮಳೆ ಸುರಿದ ಪರಿಣಾಮ ಮಣ್ಣಿನ ಮನೆ ಸೋರಿದ್ದರಿಂದ ದ್ಯಾಮಣ್ಣವರ ಮನೆಯ ಸದಸ್ಯರು ಪಕ್ಕದ ದೇವಸ್ಥಾನದಲ್ಲಿ ಮಲಗಿಕೊಂಡಿದ್ದರು. ಅಂದೇ ರಾತ್ರಿ ಈ ಮನೆಯಲ್ಲಿ ಭೂ ಕುಸಿತಗೊಂಡಿದೆ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆ ಭೂಕುಸಿತವಾಗಿದ್ದರಿಂದ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಿಲ್ಲ.
undefined
ನರಗುಂದದಲ್ಲಿ ಮತ್ತೆ ಭೂಕುಸಿತ, ಗುಂಡಿಯಲ್ಲಿ ಸಿಲುಕಿದ ಮಹಿಳೆ
ಕಳೆದ ಒಂದು ವರ್ಷದಿಂದ ಪಟ್ಟಣದ ದಂಡಾಪೂರ, ಲೋದಿಗಲ್ಲಿ, ದೇಸಾಯಿ ಭಾಯಿ ಓಣೆ, ಹಗದಕಟ್ಟಿ, ಕಸಬಾ, ಡಾ. ಅಂಬೇಡ್ಕರ ಬಡಾವಣೆಗಳಲ್ಲಿ ನಿರಂತರ ಅಂತರ್ಜಲ ಹೆಚ್ಚಾಗಿ ಮನೆಗಳಲ್ಲಿ ಭೂಕುಸಿತಗೊಳ್ಳತ್ತಿರುವುದರಿಂದ ಈ ಬಡಾವಣೆ ನಿವಾಸಿಗಳು ನಿತ್ಯ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ.
ಪಟ್ಟಣದ ಕಸಬಾ ಓಣಿಯಲ್ಲಿ ಭೂಕುಸಿತಗೊಂಡ ಮನೆಗೆ ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಭಾನುವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು. ಭೂಕುಸಿತಗೊಂಡಿರುವ ತಗ್ಗಿನ ಮಣ್ಣಿನಿಂದ ಮುಚ್ಚಲು ಪುರಸಭೆ ಸಿಬ್ಬಂದಿಗೆ ತಿಳಿಸಿ ಮನೆಯ ಕುಟುಂಬಸ್ಥರಗೆ ಸಾಂತ್ವನ ಹೇಳಿದ್ದಾರೆ.