Tumakuru: ಬೆಂಗಳೂರು ಮೂಲದವರಿಗೆ ಜಮೀನು ನೀಡಲ್ಲ: ಡಾ.ಜಿ.ಪರಮೇಶ್ವರ್‌

Published : Nov 26, 2022, 11:09 PM IST
Tumakuru: ಬೆಂಗಳೂರು ಮೂಲದವರಿಗೆ ಜಮೀನು ನೀಡಲ್ಲ: ಡಾ.ಜಿ.ಪರಮೇಶ್ವರ್‌

ಸಾರಾಂಶ

ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಾಜಿಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನುಸಿಳಿ ಬೇಲಿ ಹಾಕಿಕೊಂಡಿರುವ ಬೆಂಗಳೂರಿನ ಮೂಲದವರಿಗೆ ಯಾವುದೇ ಕಾರಣಕ್ಕೂ ಜಮೀನು ಮಂಜೂರು ಮಾಡುವುದಿಲ್ಲ, ಅದನ್ನುತಾಲೂಕಿನ ರೈತರಿಗೆ ಕೊಡಿಸುವುದು ಶತ ಸಿದ್ದ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೊರಟಗೆರೆ (ನ.26): ತಾಲೂಕಿನ ಹೊಳವನಹಳ್ಳಿ ಹೋಬಳಿ ಅಕ್ಕಾಜಿಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನುಸಿಳಿ ಬೇಲಿ ಹಾಕಿಕೊಂಡಿರುವ ಬೆಂಗಳೂರಿನ ಮೂಲದವರಿಗೆ ಯಾವುದೇ ಕಾರಣಕ್ಕೂ ಜಮೀನು ಮಂಜೂರು ಮಾಡುವುದಿಲ್ಲ, ಅದನ್ನು ತಾಲೂಕಿನ ರೈತರಿಗೆ ಕೊಡಿಸುವುದು ಶತ ಸಿದ್ದ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕಂದಾಯ ಇಲಾಖಾ ವತಿಯಿಂದ ನಡೆದ ಕೊರಟಗೆರೆ ತಾಲೂಕಿನ ಬಗರ್‌ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಪಹಣಿ, ಹಕ್ಕು ಪತ್ರ ದಾಖಲಾತಿಗಳು ಹಾಗೂ ಪಿಂಚಣಿ ಮಾಸಾಶನ ವಿತರಣೆ ಕಾರ್ಯಕ್ರದಲ್ಲಿ ಫಲಾನುಭವಿಗಳಿಗೆ ದಾಖಲಾತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಕಂದಾಯ ಇಲಾಖೆಯು 1951 ರಿಂದ ಉಳುವವನಿಗೆ ಭೂಮಿ ಎನ್ನುವ ಆದೇಶ ತಂದು ಜಮೀನಿಲ್ಲದ ರೈತರಿಗೆ ಜಮೀನನ್ನು ಮಂಜೂರು ಮಾಡಿಕೊಟ್ಟಿದೆ. ದೇವರಾಜು ಅರಸು ಅವರ ಕಾಲದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆ ಲಕ್ಷಾಂತರ ರೈತರು ಇದರ ಉಪಯೋಗ ಪಡೆದು ವ್ಯವಸಾಯ ಮಾಡುತ್ತಿದ್ದಾರೆ ಎಂದರು.

Tumakuru: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಜಿ.ಪರಮೇಶ್ವರ್‌

ಕೊರಟಗೆರೆ ತಾಲೂಕಿನಲ್ಲಿ ಇಂದು 121 ಸಾಗುವಳಿ ಹಕ್ಕುಪತ್ರ, 30 ಸಾಗುವಳಿ ಪತ್ರ, 162 ಪಿಂಚಣಿ ಮಾಸಾಶನಗಳ ಪತ್ರಗಳನ್ನು ವಿತರಿಸಲಾಗುತ್ತಿದೆ. ರೈತರಿಗೆ ಸಾಗುವಳಿಯೊಂದಿಗೆ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ರಾಜ್ಯದಲ್ಲೇ ಕೊರಟಗೆರೆ ತಾಲೂಕಿನಲ್ಲಿ ವಿನೂತನವಾಗಿ ಮಾಡುತ್ತಿದ್ದೇವೆ, ಇದರಿಂದ ಸಾಗುವಳಿ ಪಡೆದ ರೈತರು ಹಕ್ಕುಪತ್ರಕ್ಕಾಗಿ ಕಂದಾಯ ಇಲಾಖೆಗೆ ಅಲೆಯುವುದು ತಪ್ಪಿದಂತೆ ಆಗುತ್ತದೆ. ಆ ಕೆಲಸವನ್ನು ನನ್ನಅಧ್ಯಕ್ಷತೆಯಲ್ಲಿ ಬಗರ್‌ ಹುಕ್ಕುಂ ಸಮಿತಿ, ತಹಶೀಲ್ದಾರ್‌ ಹಾಗೂ ಕಂದಾಯ ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ, ಅದರೆ ರೈತರು ತಮಗೆ ಮಂಜೂರಾದ ಜಮೀನನ್ನು 25 ವರ್ಷಗಳ ಕಾಲ ಪರಭಾರೆ ಮಾಡುವಂತ್ತಿಲ್ಲ ಎಂದರು.

ರೈತರಿಗೆ ಜಮೀನು ನೀಡುವ ಜೊತೆಗೆ ಬೆಳೆದಂತ ಬೆಳೆಗೆ ಬೆಂಬಲ ಬೆಲೆ, ಅವರ ದವಸ ಧಾನ್ಯಗಳನ್ನು ಖರೀದಿಸಿದ ಸರ್ಕಾರದ ಸಂಸ್ಥೆಗಳು ಅವರಿಗೆ ಶೀಘ್ರ ಹಣಪಾವತಿ ಮಾಡುವ ಕೆಲಸ ಮಾಡಿದರೆ ರೈತರಿಗೆ ಅನುಕೂಲ ಮಾಡಿದಂತಾಗುತ್ತದೆ. ಇಲ್ಲದಿದ್ದಲ್ಲಿ ವ್ಯವಸಾಯ ಮಾಡಲು ಮುಂದೆ ಯಾರೊಬ್ಬರು ಬರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ನಾಹೀದಾಜಮ್‌ಜಮ್‌, ಗ್ರೇಡ್‌-2 ತಹಶೀಲ್ದಾರ್‌ ನರಸಿಂಹಮೂರ್ತಿ, ಅರಣ್ಯಾಧಿಕಾರಿ ಸುರೇಶ್‌, ಕೃಷಿ ಅಧಿಕಾರಿ ನಾಗರಾಜು, ಎಇಇ ರವಿಕುಮಾರ್‌, ಬಗರ್‌ಹುಕುಂ ಸಮಿತಿಯ ಸದಸ್ಯರಾದ ಹೇಮಲತಾ, ಸಿ.ಎಸ್‌.ಹನುಮಂತ ರಾಜು, ದೇವರಾಜು ಉಪತಹಶೀಲ್ದಾರ್‌ಗಳಾದ ಮಧುಚಂದ್ರ, ಎ.ಜಿ. ರಾಜು, ಮಹೇಶ್‌, ಕಂದಾಯ ಇಲಾಖಾಧಿಕಾರಿಗಳಾದ ಪ್ರತಾಪ್‌, ಅರುಣ್‌ಕುಮಾರ್‌, ಜಯಪ್ರಕಾಶ್‌, ಪವನ್‌ಕುಮಾರ್‌, ಬಸವರಾಜು, ರಾಖೇಶ್‌, ರಘು, ಮಾಜಿ ಜಿ.ಪಂ.ಸದಸ್ಯ ಪ್ರಸನ್ನಕುಮಾರ್‌, ಪ.ಪಂ ಸದಸ್ಯ ಎ ಡಿ ಬಲರಾಮಯ್ಯ, ಸೇರಿದಂತೆ ಇತರರು ಹಾಜರಿದ್ದರು.

ಜನವರಿಗೆ ಕಾಂಗ್ರೆಸ್‌ನಿಂದ ದಲಿತ ಸಮಾವೇಶ: ಪರಂಗೆ ಸಂಪೂರ್ಣ ಜವಾಬ್ದಾರಿ

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಾಜಿಹಳ್ಳಿ ಗ್ರಾಮ ಸರ್ಕಾರಿಜಮೀನಿನಲ್ಲಿ ಬೆಂಗಳೂರು ಮೂಲದವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರುಎಕರೆಜಮೀನನ್ನು ನಮ್ಮರೈತರಿಂದ ತಪ್ಪಿಸಿ ಅಕ್ರಮವಾಗಿಬೇಲಿ ಹಾಕಿಕೊಂಡಿದ್ದಾರೆ. ಅವರಿಗೆ ಸಾಗುವಳಿ ಪತ್ರ ಮಾಡಿಕೊಡುವಂತೆ ನನ್ನ ಮೇಲೆ ಮತ್ತು ಅಧಿಕಾರಿಗಳ ಮೇಲೆ ಹಲವು ಒತ್ತಡಗಳನ್ನು ಹಾಕಿದ್ದಾರೆ.ಆದರೆ ಅವುಗಳಿಗೆ ಜಗ್ಗುವ ಪ್ರಶ್ನೆಯೇಇಲ್ಲ. ಯಾವುದೇಕಾರಣಕ್ಕು ಬೆಂಗಳೂರು ಮೂಲದವರಿಗೆ ಸಾಗುವಳಿ ಜಮೀನನ್ನು ನೀಡುವುದಿಲ್ಲ.
-ಶಾಸಕ ಡಾ.ಜಿ.ಪರಮೇಶ್ವರ್‌

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ