ಒತ್ತುವರಿ ತೆರವು ಮತ್ತೆ ಆರಂಭ, ಲೇಕ್‌ವ್ಯೂ ಅಪಾರ್ಚ್‌ಮೆಂಟಿಂದ ಒತ್ತುವರಿ ಆಗಿದ್ದ ಜಾಗ ತೆರವು

By Suvarna NewsFirst Published Sep 29, 2022, 4:33 PM IST
Highlights

 ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಬಿಬಿಎಂಪಿಯು ವಿವಿಧ ನೆಪ ಹೇಳಿಕೊಂಡು ಕಳೆದ ಮೂರ್ನಾಲ್ಕು ದಿನ ಕಾರ್ಯಾಗೆ ವಿರಾಮ ನೀಡಿತ್ತು. ಇದೀಗ ಮತ್ತೆ ಆರಂಭಿಸಿದ್ದು,  ಲೇಕ್‌ವ್ಯೂ ಅಪಾರ್ಚ್‌ಮೆಂಟಿಂದ ಒತ್ತುವರಿ ಆಗಿದ್ದ ಜಾಗ ತೆರವು. ಮುಂದುವರೆದ ತೆರವು ಕಾರ್ಯ. 11 ಅಡಿ ಅಗಲ, 100 ಅಡಿ ಉದ್ದದ ಜಾಗ ತೆರವು. 

ಬೆಂಗಳೂರು (ಸೆ.29): ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಮತ್ತೆ ಆರಂಭಿಸಲಾಗಿದ್ದು, ಬುಧವಾರ ಬೊಮ್ಮನಹಳ್ಳಿ ವಲಯದ ಕೋಡಿಚಿಕ್ಕನಹಳ್ಳಿಯ ಜನಪ್ರಿಯ ಲೇಕ್‌ ವ್ಯೂ ಅಪಾರ್ಟ್‌ಮೆಂಟ್ ಬಳಿ 11 ಅಡಿ ಅಗಲ ಹಾಗೂ 100 ಅಡಿ ಉದ್ದದ ರಾಜಕಾಲುವೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ. ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಬಿಬಿಎಂಪಿಯು ವಿವಿಧ ನೆಪ ಹೇಳಿಕೊಂಡು ಕಳೆದ ಮೂರ್ನಾಲ್ಕು ದಿನ ಕಾರ್ಯಾಗೆ ವಿರಾಮ ನೀಡಿತ್ತು. ಈ ಬಗ್ಗೆ ಸಾಕಷ್ಟುಆಕ್ಷೇಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ನಾಮ್‌ಕೇವಾಸ್ಥೆ ಬೊಮ್ಮನಹಳ್ಳಿಯಲ್ಲಿ ತೆರವು ಕಾರ್ಯಚರಣೆ ನಡೆಸಿದೆ. ಒಟ್ಟು 11 ಅಡಿ ಅಗಲ ಹಾಗೂ 100 ಅಡಿ ಉದ್ದದ ರಾಜಕಾಲುವೆಯ ಒತ್ತುವರಿ ತೆರವು ಮಾಡಲಾಗಿದೆ. ಗುರುವಾರವೂ ಈ ಭಾಗದಲ್ಲಿ ಕಾರ್ಯಾಚರಣೆ ಮುಂದುವರೆಸುವುದಾಗಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಹದೇವಪುರ ವಲಯದ ಪಣತ್ತೂರು, ಹೂಡಿ, ದೊಡ್ಡಾನೆಕುಂದಿ, ವರ್ತೂರು, ಕುಂದನಹಳ್ಳಿ, ಮುನ್ನೇನಕೊಳಲು, ಕಸವಹಳ್ಳಿಯ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿಯನ್ನು ಭೂಮಾಪಕರು ಮಾರ್ಕಿಂಗ್‌ ಮಾಡಿದ್ದಾರೆ. ಕಾರ್ಯಾಚರಣೆ ಶೀಘ್ರವಾಗಿ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಎಂಜಿನಿಯರ್‌ ಬಸವರಾಜ್‌ ಕಬಾಡೆ ಮಾಹಿತಿ ನೀಡಿದ್ದಾರೆ.

ಕ್ರಿಯಾ ಯೋಜನೆಗೆ ಅನುಮೋದನೆ: ಒತ್ತುವರಿ ತೆರವು ಮಾಡಲಾದ ಕಡೆಗಳಲ್ಲಿ ಹಾಗೂ ರಾಜಕಾಲುವೆ ದುರಸ್ತಿಗಾಗಿ ಬಿಬಿಎಂಪಿ .350 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದೆ. ತುರ್ತು ಕಾಮಗಾರಿ ಅಡಿಯಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಸಂಬಂಧಿಸಿದ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಹಾಗೂ ಬೆಂಗಳೂರು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಮರುನಿರ್ಮಾಣ, ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾಹಿತಿ ನೀಡಿದ್ದಾರೆ.

ವರದಿ ನೀಡಿದ್ದರೂ ನ್ಯಾಯಾಂಗ ತನಿಖೆಗೆ ಒಪ್ಪಿಸಿರುವುದು ಸರಿಯಲ್ಲ
ರಾಣಿಬೆನ್ನೂರು: ಬೆಂಗಳೂರಿನ ಹಿತದೃಷ್ಟಿಯಿಂದ ಅಲ್ಲಿನ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ವಿಚಾರ ಕುರಿತು ಸಮಗ್ರ ವರದಿಯನ್ನು ನನ್ನ ಅಧ್ಯಕ್ಷತೆಯಲ್ಲಿ ರಚಿಸಿಲಾಗಿದ್ದ ಸಮಿತಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ದೆ. ಹೀಗಿದ್ದರೂ ಈಗಿನ ಬಿಜೆಪಿ ಸರ್ಕಾರ ಪುನಃ ಅದನ್ನು ನ್ಯಾಯಾಂಗ ತನಿಖೆ ಒಪ್ಪಿಸಿರುವುದು ಸಮಂಜಸವಲ್ಲ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.

ಬೆಂಗಳೂರು: ರಾಜಕಾಲುವೆ ಮೇಲಿದ್ದ 4 ಅಂತಸ್ತಿನ ಕಟ್ಟಡ ಧ್ವಂಸ

ನಗರದಲ್ಲಿ ಬುಧವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಾವು ವರದಿ ನೀಡುವ ಪೂರ್ವದಲ್ಲಿ ಪ್ರತಿಯೊಂದು ಜಾಗೆಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿ ಒತ್ತುವರಿಯಾಗಿರುವ ಪ್ರದೇಶ, ಯಾರು ಮಾಡಿದ್ದಾರೆ, ಯಾವುದಕ್ಕಾಗಿ ಅದನ್ನು ಮಾಡಲಾಗಿದೆ, ಮುಂದೇನು ಮಾಡಬೇಕು ಎಂಬುದರ ಕುರಿತು ಎಲ್ಲ ವಿವರ ಹಾಗೂ ನಿಖರ ಅಂಕಿ ಅಂಶಗಳ ಸಮೇತ 10 ಸಾವಿರ ಪುಟಗಳ ವರದಿಯನ್ನು ಸಲ್ಲಿಸಿದ್ದೆ. ನನ್ನ ನೇತೃತ್ವದ ಸದನ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ಶಾಸಕ, ಮಾಜಿ ಸಚಿವ ಎಸ್‌. ಸುರೇಶಕುಮಾರ ಸೇರಿದಂತೆ ಸರ್ವ ಪಕ್ಷಗಳ ಸದಸ್ಯರಿದ್ದರು. ಯಾವ ಪುರುಷಾರ್ಥಕ್ಕಾಗಿ ರಾಜ್ಯ ಸರ್ಕಾರ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಈ ಹಿಂದೆ ಕೂಡ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇದರ ಬಗ್ಗೆ ಆಯೋಗ ನೇಮಿಸಿ ವರದಿ ಪಡೆಯಲಾಗಿದ್ದರೂ ಅದನ್ನು ಜಾರಿಗೆ ತಂದಿರಲಿಲ್ಲ. ಕೆರೆ ಮತ್ತು ರಾಜಕಾಲುವೆ ಒತ್ತುವರಿಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಎಲ್ಲ ಪಕ್ಷಗಳ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಆದರೂ ಸಹಿತ ತಾವು ಯಾವುದಕ್ಕೂ ಬೆದರದೆ ಅಂದಿನ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆವು ಎಂದರು.

ಸದ್ದಿಲ್ಲದೆ ಜೆಸಿಬಿಗಳ ಘರ್ಜನೆ ಸ್ತಬ್ಧ; ಅಧಿವೇಶನ ಮುಗಿಯುತ್ತಿದ್ದಂತೆ ತೆರವು ಕಾರ್ಯಕ್ಕೆ ಬ್ರೇಕ್ ಹಾಕಿದ ಬಿಬಿಎಂಪಿ!

ದೇಶದಲ್ಲಿ ಪಿಎಫ್‌ಐ ಸಂಘಟನೆ ನಿಷೇಧ ಮಾಡಿರುವುದನ್ನು ವೈಯಕ್ತಿಕವಾಗಿ ನಾನು ಕೂಡಾ ಸ್ವಾಗತಿಸುತ್ತೇನೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸದನಲ್ಲಿಯೇ ಇದರ ಬಗ್ಗೆ ಆಗ್ರಹಿಸಿದ್ದರು. ದೇಶ ವಿರೋಧಿ ಕೃತ್ಯ ನಡೆಸುವ ಯಾವುದೇ ಸಂಘಟನೆಗಳಿದ್ದರೂ ಅವುಗಳನ್ನು ನಿಷೇಧಿಸುವುದು ಸೂಕ್ತ ನಿರ್ಧಾರ. ರಾಜ್ಯ ಸರ್ಕಾರ ಜಿಪಂ, ತಾಪಂ ಚುನಾವಣೆ ನಡೆಸುವ ಬದಲು ಕುಂಟು ನೆಪವೊಡ್ಡಿ ಅದನ್ನು ಮುಂದೂಡಲು ಪ್ರಯತ್ನಿಸುತ್ತಿದೆ. ಬಿಬಿಎಂಪಿ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಅದರ ಫಲಿತಾಂಶ ನಗರ ಪ್ರದೇಶದ ಜನರು ಒಲವು ಯಾರ ಪರವಾಗಿದೆ ಎಂಬುದನ್ನು ಸೂಚಿಸಲಿದೆ ಎಂದರು.

 

click me!