ಮೇಯರ್ ಈರೇಶ ಅಂಚಟಗೇರಿ ಧಾರವಾಡದ ಅಮಿತ್ ಷಾ ಆಗಲಿಕ್ಕೆ ಹೊರಟಿದ್ದಾರೆ!

Published : Sep 29, 2022, 01:16 PM IST
ಮೇಯರ್ ಈರೇಶ ಅಂಚಟಗೇರಿ ಧಾರವಾಡದ ಅಮಿತ್ ಷಾ ಆಗಲಿಕ್ಕೆ ಹೊರಟಿದ್ದಾರೆ!

ಸಾರಾಂಶ

ಮೇಯರ್ ಅವರು ಒಂದೂವರೆ ಕೋಟಿ ರೂ. ಖರ್ಚಿನ ಲೆಕ್ಕ‌ ಕೋಡಬೇಕು.  ಮೇಯರ್ ಈರೇಶ ಅಂಚಟಗೇರಿ ಧಾರವಾಡದ ಅಮಿತ್ ಷಾ ಆಗಲಿಕ್ಕೆ ಹೊರಟಿದ್ದಾರೆ.  ಲೋಕಾಯುಕ್ತಕ್ಕೆ ದೂರು ಕೊಡಲಾಗುವುದು ಎಂದ‌ ರಜತ್‌ ಉಳ್ಳಾಗಡ್ಡಿಮಠ.

 ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್  ಸುವರ್ಣ ನ್ಯೂಸ್ ಧಾರವಾಡ

 ಧಾರವಾಡ (ಸೆ.29) : ಮಹಾಪೌರರು ಜನರಿಗೆ ಅಗೌರವವನ್ನ ತೋರಿಸಿದ್ದಾರೆ. ಮೊದಲು ಮೇಯರ್‌ಗೆ ಗೌನ್ ಇರುತ್ತಿತ್ತು. ಈಗ ಅದನ್ನ ತೆಗೆಸಿದ್ದಾರೆ., 40% ಪೇ ಮೇಯರ್ ಎಂದು ವೈರಲ್ ಮಾಡಿದಕ್ಕೆ ಪೊಲೀಸ್ ಕಮಿಷನರ್ ಗೆ ದೂರು ಕೊಟ್ಟಿದ್ದಾರೆ. 

Dharawada: ಕೈ ಅಭ್ಯರ್ಥಿ ನಾನೇ ನಾನೇ ಅಂತ ತಿರುಗಾಡ್ತಿದ್ದ ದೀಪಕ್ ಚಿಂಚೋರೆಗೆ ಕಾಂಗ್ರೆಸ್ ನೋಟಿಸ್

ಮೇಯರ್(Mayor) ಆದ ತಕ್ಷಣ ಅವರು ನೆಲದ ಮೆಲೆ‌ ನಿಲ್ತಾ ಇಲ್ಲ. ಅವರು ಸರ್ವಾಧಿಕಾರ ಆಡಳಿತವನ್ನ ನಡೆಸುತ್ತಿದ್ದಾರೆ. ಅವರು ಜೋಶಿ ಶಿಷ್ಯ ಆಗಿರಬಹುದು. ರಾಷ್ಟ್ರಪತಿ ಅವರಿಗೆ ತರಾತುರಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನ ಆಯೋಜನೆ ಮಾಡೋದು ಯಾಕೆ ಎಂದು ಕಾಂಗ್ರೆಸ್(Congress) ಮುಖಂಡ ದೀಪಕ್ ಚಿಂಚೋರೆ(Deepak Chinchore) ಆಕ್ರೋಶ ವ್ಯಕ್ತಪಡಿಸಿದರು.

ಮೇಯರ್(Mayor) ಅವರು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್(Viral) ಮಾಡಿಕ್ಕೆ ದೂರು ಕೊಟ್ಟಿದ್ದಾರೆ. ಒಂದೂವರೆ ಕೋಟಿ ವೆಚ್ಚ ಆಗಿದೆ ರಾಷ್ಟ್ರ ಪತಿ(President) ಕಾರ್ಯಕ್ರಮಕ್ಕೆ ಅಷ್ಟು ಅದ್ದೂರಿಯಾಗಿ ಖರ್ಚು ಮಾಡಿದ್ದು ಯಾಕೆ..? ರಾಷ್ಟ್ರ ಪತಿ ಕಾರ್ಯಕ್ರಮಕ್ಕೆ‌ ಮಾಡಿರುವ ಸೌಲಭ್ಯಗಳನ್ನ ಹಣ ಲೂಟಿ ಮಾಡಲಿಕ್ಕೆ ಈ ರೀತಿ ಮಾಡಿದ್ದಾರೆ. ನಾವು RSS ಸ್ವಯಂ ಸೇವಕರು ಅಲ್ಲ, ಮೇಯರ್ ಅವರು ಅಮಿತ್ ಷಾ(Amit Shah) ಆಗಲಿಕ್ಕೆ ಹೋಗ್ತಾ ಇದಾರೆ. ಪಾಲಿಕೆಯಲ್ಲಿ ಅವರು ತಮಗೆ ಏನು ಬೇಕು ಅದನ್ನ ಮಾಡ್ತಾ ಇದ್ದಾರೆ ಎಂದು ಮೇಯರ್ ಈರೇಶ ಅಂಚಟಗೇರಿ ಅವರು  ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ಪೇ ಮೇಯರ್(Pay Mayor) ಮಾಡಿದ್ದು ಜನ ಸಾಮಾನ್ಯರ ಅಭಿಯಾನವಾಗಿದೆ. ನಿರ್ಮಿತಿ ಕೇಂದ್ರ ಭ್ರಷ್ಟಾಚಾರ(Currupt) ಆಗಲ್ಲ ಎಂದು ಹೇಳಿ ನೋಡೋಣ. ಮೇಯರ್ ಅವರು ನಿರ್ಮಿತಿ ಕೇಂದ್ರದಿಂದ ಹಣ ಲೂಟಿ ಮಾಡುತ್ತಿದ್ದಾರೆ. ಪಾಲಿಕೆಯಲ್ಲಿ ವಾಟರ್ ಮನ್(Waterman) ಗಳಿಗೆ ಕಳೆದ 5 ತಿಂಗಳ ವೇತನವನ್ನ ನೀಡಿಲ್ಲ. ಮೇಯರ್ ಅವರು ಸಾಮಾನ್ಯ ಪ್ರಜೆಗಳ ಬಗ್ಗೆ ಕನಿಕರವೇ ಇಲ್ಲ. ಮೇಯರ್ ಅವರು ಶಾಸಕ ಆಗುವ ಉದ್ದೇಶದಿಂದ ನನ್ನ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೀಪಕ್ ಚಿಂಚೋರೆಗೆ ನೇರವಾಗಿ ಟಾರ್ಗೆಟ್ ಮಾಡಿದ್ದಾರೆ.

ಪೆಂಡಾಲ್ ಹಾಕಿದ ನಂತರ ಕೊಟೇಶನ್ ಕೇಳಿದ್ದಾರಂದರೆ ಏನರ್ಥ? ಈ ಮೇಯರ್ ಅವಳಿ ನಗರದ ಮರ್ಯಾದೆ ಹಾಳು ಮಾಡಿದ್ದಾರೆ. ರಾಷ್ಟ್ರಪತಿ ಅವರ ಕಚೇರಿಯಿಂದ ಹಣ ದುಂದುವೆಚ್ಚ ಮಾಡುವಂತೆ ಹೇಳಿದ್ರಾ?  ಜನಸಾಮಾನ್ಯರ ಕೋಟಿ ಕೋಟಿ ಹಣವನ್ನ ಗೋಲ್‌ಮಾಲ್ ಮಾಡಿದ್ದಾರೆ. 

ದೀಪಕ್ ಚಿಂಚೋರೆ, ರಜತ್ ಉಳ್ಳಾಗಡ್ಡಿ ಮಠ, ಮಂಜುನಾಥ್ ನಡಟ್ಟಿ ಅವರ ಮೇಲೆ‌ ದೂರು ಕೊಟ್ಟಿದ್ದೀರಿ; ನಮ್ಮ ಮೆಲೆ‌ ಎಪ್ಐಆರ್ ದಾಖಲು ಮಾಡಿದ್ರೆ ನಮ್ಮ‌ ಕಾರ್ಯಕರ್ತರು ನಿಮ್ಮ‌ ಕಾರಿಗೂ 40% ಪೇ‌ ಮೇಯರ್ ಅಂತ ಸ್ಟಿಕರ್ ಅಂಟಿಸಬೇಕಾಗುತ್ತೆ. ನಾವು ಲೋಕಾಯುಕ್ತಕ್ಕೆ‌ ದೂರು ಸಲ್ಲಿಸುತ್ತೇವೆ. ಮಹಾನಗರ ಪಾಲಿಕೆಯಿಂದ ರಾಷ್ಟ್ರ ಪತಿ ಕಾರ್ಯಕ್ರಮಕ್ಕೆ‌ ಖರ್ಚು ಮಾಡಿದ ಎಲ್ಲ‌ ದಾಖಲಾತಿಗಳನ್ನ ನಿರ್ಮಿತಿ‌ ಕೇಂದ್ರದಿಂದ ಮಾಹಿತಿಯನ್ಮ‌ ಬಹಿರಂಗ ಪಡಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಧಾರವಾಡ: 4 ವರ್ಷದಿಂದ‌ ಕರ್ತವ್ಯಕ್ಕೆ ಹಾಜರಾಗದ 3 ಪೋಲಿಸರು ವಜಾ: ಎಸ್ಪಿ ಜಗಲಾಸರ್

ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಪಾಲಿಕೆಯ ಹಣದ ಬಗ್ಗೆ ಮಾಹಿತಿಯನ್ನ‌ ನೀಡಬೇಕು. ಒಂದು ವೇಳೆ ನೀಡದಿದ್ದರೆ..ನಾವು ಮುಂದಿನ ದಿನಗಳಲ್ಲಿ ಹೋರಾಟವನ್ನ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಡ ಪಡಿಸಿದ್ದಾರೆ.

PREV
Read more Articles on
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!