ಯುಗಾದಿ ದಿನ ಚಾಮುಂಡೇಶ್ವರಿಗೆ ಭಕ್ತೆಯ ವಿಶೇಷ ಪ್ರಾರ್ಥನೆ, ವೈರಲ್ ಆಯ್ತು ವಿಡಿಯೋ

By Suvarna News  |  First Published Mar 26, 2020, 8:06 AM IST

ಈ ಬಾರಿ ಎಲ್ಲರೂ ಸರಳವಾಗಿ ಮನೆಯಲ್ಲೇ ಯುಗಾದಿ ಆಚರಿಸಿ ಎಂದು ಮುಂಚೆಯೇ ಸೂಚನೆ ನೀಡಲಾಗಿದ್ದು, ಮನೆಯಲ್ಲಿಯೇ ದೇವರಿಗೆ ಪೂಜೆ ಮಾಡಿ ಹಬ್ಬ ಆಚರಿಸಿದ ಮೈಸೂರಿನ ಮಹಿಳೆಯೊಬ್ಬರು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಒಂದಷ್ಟು ಪ್ರಶ್ನಗಳನ್ನೂ ಕೇಳಿದ್ದಾರೆ. ಸದ್ಯ ಪೂಜೆ ವಿಡಿಯೋ ವೈರಲ್ ಆಗ್ತಿದೆ. ಏನಿದು..? ನೀವೂ ನೋಡಿ


ಮೈಸೂರು(ಮಾ.26): ಈ ಬಾರಿ ಎಲ್ಲರೂ ಸರಳವಾಗಿ ಮನೆಯಲ್ಲೇ ಯುಗಾದಿ ಆಚರಿಸಿ ಎಂದು ಮುಂಚೆಯೇ ಸೂಚನೆ ನೀಡಲಾಗಿದ್ದು, ಮನೆಯಲ್ಲಿಯೇ ದೇವರಿಗೆ ಪೂಜೆ ಮಾಡಿ ಹಬ್ಬ ಆಚರಿಸಿದ ಮೈಸೂರಿನ ಮಹಿಳೆಯೊಬ್ಬರು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಒಂದಷ್ಟು ಪ್ರಶ್ನಗಳನ್ನೂ ಕೇಳಿದ್ದಾರೆ.

"

Tap to resize

Latest Videos

undefined

ಪೂಜಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಯುಗಾದಿ ಪೂಜೆಯಲ್ಲಿ ಮಹಿಳೆಯೊಬ್ಬರು ಅಧಿದೇವತೆಗೆ ಪ್ರಶ್ನಿಸಿದ್ದಾರೆ. ಕೊರೋನ ಮಹಾ ಮಾರಿಯನ್ನ ನಮ್ಮ ದೇಶದಿಂದ ಆಚೆಗೆ  ಓಡಿಸವ್ವ. ನಮ್ಮ ದೇಶದಲ್ಲಿ ಇರೋರೆಲ್ಲಾ ಚೆನ್ನಾಗಿರಬೇಕು. ವರ್ಷಕ್ಕೆ ಒಂದು ಹಬ್ಬ. ನಿವೆಲ್ಲಾ ಇದ್ದೂ ಹಬ್ಬ ಮಾಡದ ಹಾಗೆ ಮಾಡಿದ್ರಲ್ಲಾ? ಎಂದು ಪ್ರಶ್ನಿಸಿದ್ದಾರೆ.

ಜೀವಕ್ಕಿಂತ ಹೆಚ್ಚಾಯ್ತಾ ಮಾಂಸದ ಅಡುಗೆ..? ಮಟನ್ ಕೊಳ್ಳೋಕೆ ಮುಗಿಬಿದ್ದ ಜನ

ಯಾವ್ ಮೂಲೆ ಸೇರಿಕೊಂಡಿದ್ದಿರಾ ನೀವೆಲ್ಲಾ ? ನಿಮಗೂ ಕೋರೋನ ಬರುತ್ತೆ ಅಂತಾ ಮಾಸ್ಕ್ ಹಾಕಿ ಮರೆಯಾದ್ರಾ? ನೀವೆ ಮಾಸ್ಕ್ ಹಾಕಿ ಮರೆಯಾದ್ರೆ ನಾವೇನು ಮಾಡೋದು? ತಾಯಿ ಚಾಮುಂಡವ್ವ ಎಲ್ಲವ್ವ ಇದ್ದಿಯಾ? ಎಂದು ಬೇಡಿದ್ದಾರೆ.

ಯುಗಾದಿ ವರ್ಷದ ತೊಡಕಿಗೂ ಕುತ್ತು ತಂದ ಕೊರೋನಾ: ಮಾಂಸದೂಟದ ಭಾಗ್ಯವೂ ಇಲ್ಲ!

ಅಂತಾ ಮಹಿಷಾಸುರನನ್ನೆ ಸಂಹಾರ ಮಾಡಿದ ನೀನು ಈ ಕೋರೋನ ಮುಂಡೆದಾ ಸಂಹಾರ ಮಾಡೋಕೆ ಆಗ್ತಿಲ್ವೆ ಎಂದು ಮೈಸೂರಿನ ಮಹಿಳಾ ಭಕ್ತೆಯೊಬ್ಬರು ಕೋರಿದ್ದಾರೆ. ಹಬ್ಬದ ಪೂಜೆ ವೇಳೆ ವಿಶಿಷ್ಟವಾಗಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಜೊತೆ ಬೇಡಿಕೆ ಇಟ್ಟ ಭಕ್ತೆ ಮನೆಯಲ್ಲಿದ್ದು ಪೂಜೆ ಮಾಡುವಾಗಲು ಕೊರೋನ ವೈರಸ್‌ ಚಿಂತೆಗೆ ಬಿದ್ದಿದ್ದಾರೆ.

click me!