ಯಲ್ಲಾಪುರ ಯುವತಿಗೆ ಕೊರೋನಾ ಪಾಸಿಟಿವ್‌

By Kannadaprabha News  |  First Published May 20, 2020, 9:44 AM IST

ಯಲ್ಲಾಪುರ ತಾಲೂಕಿನ ಉಪಳೇಶ್ವರದ ಯುವತಿಯಲ್ಲಿ ಕೊರೋನಾ ಪಾಸಿಟಿವ್‌ ಇರುವುದು ವರದಿಯಲ್ಲಿ ಪತ್ತೆಯಾಗಿದೆ. ಸೋಂಕು ಬೇರೆಲ್ಲಿಯೂ ಹರಡಿಲ್ಲ. ಆ ಕುರಿತು ಜನತೆ ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.


ಉತ್ತರ ಕನ್ನಡ(ಮೇ 20): ಯಲ್ಲಾಪುರ ತಾಲೂಕಿನ ಉಪಳೇಶ್ವರದ ಯುವತಿಯಲ್ಲಿ ಕೊರೋನಾ ಪಾಸಿಟಿವ್‌ ಇರುವುದು ವರದಿಯಲ್ಲಿ ಪತ್ತೆಯಾಗಿದೆ. ಸೋಂಕು ಬೇರೆಲ್ಲಿಯೂ ಹರಡಿಲ್ಲ. ಆ ಕುರಿತು ಜನತೆ ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ಅವರು ಮಂಗಳವಾರ ಮಾಧ್ಯಮದವರಿಗೆ ಮಾಹಿತಿ ನೀಡಿ, ಯುವತಿ ಪಿ-1314 ಮಹಾರಾಷ್ಟ್ರದ ಸೊಲ್ಲಾಪುರದಿಂದ ತನ್ನ ಕುಟುಂಬದ ಮೂವರ ಜತೆ ಮೇ 14ರಂದು ಬಂದಿದ್ದು, ಕಿರವತ್ತಿಯ ಚೆಕ್‌ಪೋಸ್ಟ್‌ನಲ್ಲಿ ಅವರನ್ನು ತಡೆದು ತಾಲೂಕು ಆಸ್ಪತ್ರೆಯ ಕೊರೋನಾ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರ ಮಾದರಿ ಸಂಗ್ರಹಿಸಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಇದೀಗ ಯುವತಿಗೆ ಮಾತ್ರ ಪಾಸಿಟಿವ್‌ ಬಂದಿದ್ದು, ಉಳಿದ ಮೂವರ ವರದಿ ನೆಗೆಟಿವ್‌ ಬಂದಿದೆ. ತಾಲೂಕಿನ ಬೇರೆಡೆಗಳಲ್ಲಿ ಇವರಿಂದ ಸೋಂಕು ಹರಡಿಲ್ಲ ಎಂದರು.

Latest Videos

undefined

ವೈದ್ಯ ವಿದ್ಯಾರ್ಥಿಗಳ ಫೆಲೋಶಿಪ್‌ ಹೆಚ್ಚಳ

ಡಿವೈಎಸ್‌ಪಿ ಜಿ.ಟಿ. ನಾಯಕ ಮಾತನಾಡಿ, ಹೊರರಾಜ್ಯಗಳಿಂದ ಕಳ್ಳಮಾರ್ಗದಲ್ಲಿ ಬಂದರೂ ಮನೆಗೆ ಹೋಗದೇ ನೇರವಾಗಿ ಬಂದು ಮಾಹಿತಿ ನೀಡಿದರೆ ಶಿಕ್ಷೆ ನೀಡುವುದಿಲ್ಲ. ಕಳ್ಳಮಾರ್ಗದಲ್ಲಿ ಬಂದು 2-3 ದಿನಗಳ ನಂತರ ಮಾಹಿತಿ ನೀಡಿದರೆ ಅಂಥವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಮುಂಡಗೋಡಿನಲ್ಲಿ ಈಗಾಗಲೇ ಅಂಥವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದರು. ತಹಸೀಲ್ದಾರ್‌ ಡಿ.ಜಿ. ಹೆಗಡೆ, ಸಿಪಿಐ ಸುರೇಶ ಯಳ್ಳೂರು, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಇದ್ದರು.

click me!