ಕುವೆಂಪು ವಿವಿ : ಕುಲಸಚಿವರ ಕೊಠಡಿ ಬೀಗ ಒಡೆದ ಮಾಜಿ ಕುಲಸಚಿವರು!!

By Suvarna News  |  First Published May 13, 2021, 11:11 AM IST
  • ಕುವೆಂಪು ವಿವಿ ಇದೀಗ ಹೊಸದೊಂದು ಹೈ ಡ್ರಾಮಾ
  • ಕಚೇರಿಯ ಬೀಗ ಒಡೆದು ಒಳ ಪ್ರವೇಶಿಸಿದ ವರ್ಗಾವಣೆಗೊಂಡಿದ್ದ ಆಡಳಿತಾಂಗ ಕುಲಸಚಿವ
  •  ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ದೂರು ದಾಖಲು

ಶಿವಮೊಗ್ಗ (ಮೇ.13):  ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿರುವ ಕುವೆಂಪು ವಿವಿ ಇದೀಗ ಹೊಸದೊಂದು ಡ್ರಾಮಾಕ್ಕೆ ಸಾಕ್ಷಿಯಾಗಿದೆ. ಮಂಗಳವಾರವಷ್ಟೇ ವರ್ಗಾವಣೆಗೊಂಡಿದ್ದ ಆಡಳಿತಾಂಗ ಕುಲಸಚಿವ ಎಸ್.ಎಸ್. ಪಾಟೀಲ್ ಇಂದು ಪುನಃ ವಿವಿ ಕಚೇರಿಗೆ ಆಗಮಿಸಿ  ಕಚೇರಿಯ ಬೀಗ ಒಡೆದು ಒಳ ಪ್ರವೇಶಿಸಿದ ಘಟನೆ ಬುಧವಾರ ನಡೆದಿದೆ.

ಇದರ ಬೆನ್ನಲ್ಲೇ ಕುವೆಂಪು ವಿವಿ ಕುಲಪತಿ ಪ್ರೊ. ವೀರಭದ್ರಪ್ಪ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Tap to resize

Latest Videos

ಇದರ ನಡುವೆ ಮಂಗಳವಾರ ಕುವೆಂಪು ವಿವಿಯ ಕುಲಸಚಿವರಾಗಿ ನೇಮಕಗೊಂಡಿದ್ದ  ಕೆಎಎಸ್ ಅಽಕಾರಿ ಸಿ. ಎನ್. ಶ್ರೀಧರ್ ಅವರನ್ನು ಬುಧವಾರ  ಜಿ.ಪಂ. ಕೌಶಲ್ಯ ಅಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಕುಲಸಚಿವ ಸ್ಥಾನಕ್ಕೆ ಬೇರೆ ಯಾರನ್ನೂ ಇದುವರೆಗೆ ನೇಮಿಸಿಲ್ಲ ಎಂಬುದು ಕೂಡ ಗಮನಾರ್ಹ.

ಕುವೆಂಪು ವಿವಿ ಉಪ ಕುಲ ಸಚಿವರ ವಜಾಗೊಳಿಸಿ ಆದೇಶ ..

ಶ್ರೀಧರ್ ನೇಮಕ: ಮಂಗಳವಾರ ಸರ್ಕಾರ ವಿವಿ ಕುಲಪತಿ ಎಸ್. ಎಸ್.ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಶ್ರೀಧರ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಇದರಂತೆ ಕುಲಪತಿ ಪ್ರೊ. ವೀರಭದ್ರಪ್ಪ ಅವರು ಎಸ್. ಎಸ್. ಪಾಟೀಲ್ ಅವರನ್ನು ಕುಲಸಚಿವ ಸ್ಥಾನದಿಂದ ಬಿಡುಗಡೆಗೊಳಿಸಿದ್ದರು. ಈ ಸ್ಥಾನಕ್ಕೆ ಸರ್ಕಾರದ ಆದೇಶದ ಪ್ರಕಾರ ಕೆಎಎಸ್ ಅಽಕಾರಿ ಸಿ. ಎನ್. ಶ್ರೀಧರ್ ಅಧಿಕಾರ ಸ್ವೀಕರಿಸಿದ್ದರು.

ಆದರೆ ಬುಧವಾರ ಸರ್ಕಾರ ಪುನಃ ಆದೇಶ ಹೊರಡಿಸಿ ಶ್ರೀಧರ್ ನೇಮಕ ಹಿಂಪಡೆದಿತ್ತು. ಆದರೆ ಆ ಸ್ಥಾನಕ್ಕೆ ಪುನಃ ಎಸ್. ಎಸ್.ಪಾಟೀಲ್ ಅವರನ್ನು ನೇಮಕ ಮಾಡಿರಲಿಲ್ಲ. ಶ್ರೀಧರ್ ಅವರ ನೇಮಕ ರದ್ದುಗೊಂಡ ಬಳಿಕ ಕುಲಪತಿಗಳು ಕುಲಸಚಿವರ ಕೊಠಡಿಗೆ ಬೀಗ ಹಾಕಿಸಿದ್ದರು. ಆದರೆ ಈ ನಡುವೆ ಬುಧವಾರ ಬೆಳಗ್ಗೆ 8. 30 ರ ಸುಮಾರಿಗೆ ವಿವಿ ಕಚೇರಿಗೆ ಆಗಮಿಸಿದ ಎಸ್. ಎಸ್. ಪಾಟೀಲ್ ಅವರು ನೇರವಾಗಿ ತಮ್ಮ ಕಚೇರಿಯತ್ತ ತೆರಳಿದ್ದಾರೆ. ಅಲ್ಲಿ ಬೀಗ ಹಾಕಿದ್ದನ್ನು ಕಂಡು ಬೀಗ ಒಡೆಸಿದ್ದಾರೆ.ಬಾಗಿಲನ್ನು ಕೂಡ ಜಖಂಗೊಳಿಸಿ ಕೊಠಡಿ ಪ್ರವೇಶಿಸಿ ಅಲ್ಲಿನ ಸ್ಥಾನವನ್ನು ಅಲಂಕರಿಸಿದ್ದಾರೆ. ಸಂಜೆಯವರೆಗೂ ತಮ್ಮ ಕೊಠಡಿಯಲ್ಲಿಯೇ ಇದ್ದ ಅವರು ಕುಲಪತಿಗಳನ್ನು ಭೇಟಿ ಮಾಡಲಿಲ್ಲ. 

ಕುವೆಂಪು ವಿವಿ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವೇ? ಚಾನ್ಸಲರ್ ಸ್ಪಷ್ಟನೆ ...

ಪೊಲೀಸ್‌ಗೆ ದೂರು:ಕುಲಸಚಿವರ ಕೊಠಡಿ ಬೀಗ ಒಡೆದ ಹಿನ್ನೆಲೆಯಲ್ಲಿ ಕುಲಪತಿ ಪ್ರೊ.ವೀರಭದ್ರಪ್ಪ ಅವರು ಜಿಲ್ಲಾ ರಕ್ಷಣಾಽಕಾರಿ ಮತ್ತು ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿ ತಮ್ಮ ಅನುಮತಿ ಇಲ್ಲದೆ ಕೊಠಡಿ ಬೀಗ ಒಡೆದು ಬಾಗಿಲನ್ನು ಜಖಂಗೊಳಿಸಿ ಎಸ್.ಎಸ್.ಪಾಟೀಲರು ಒಳಪ್ರವೇಶಿಸಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.ಬೆನ್ನಲ್ಲೇ ಸರ್ಕಾರಕ್ಕೂ ಈ ಸಂಬಂಧ ಪತ್ರ ಬರೆದಿದ್ದಾರೆ.

click me!