ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಎರಡು ಉತ್ತಮ : ಸುಧಾಕರ್

By Kannadaprabha News  |  First Published May 13, 2021, 10:34 AM IST
  • ಕೊರೋನಾ ಲಸಿಕೆಗಳಾದ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ಗಳೆರಡೂ ಉತ್ತಮ
  • ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸ್ಪಷ್ಟ ಮಾಹಿತಿ
  • ಲಸಿಕೆಗಳ ಬಗ್ಗೆ ಜನರಲ್ಲಿ  ತಪ್ಪು ಕಲ್ಪನೆ ಬೇಡ

ಚಿಕ್ಕಬಳ್ಳಾಪುರ (ಮೇ.13): ಕೊರೋನಾ ಲಸಿಕೆಗಳಾದ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ಗಳೆರಡೂ ಉತ್ತಮ ಗುಣಮಟ್ಟದ್ದಾಗಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ.

 ಚಿಂತಾಮಣಿಯಲ್ಲಿ ಬುಧವಾರ ಮಾತನಾಡಿದ ಅವರು, ಲಸಿಕೆಗಳ ಬಗ್ಗೆ ಜನರಲ್ಲಿ ಯಾವುದೇ ರೀತಿ ತಪ್ಪು ಕಲ್ಪನೆ ಬೇಡ. ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವ ಪ್ರತಿಯೊಂದು ಲಸಿಕೆಯೂ ಯೋಗ್ಯವಾಗಿದ್ದು, ಸುರಕ್ಷಿತವಾಗಿದೆ. 

Tap to resize

Latest Videos

ಲಸಿಕೆ ಕೊರತೆ : ಸೆಕೆಂಡ್ ಡೋಸ್ ಪಡೆಯುವವರಿಗೆ ಆದ್ಯತೆ ...

ಸಂದರ್ಭಕ್ಕೆ ಯಾವ ಲಸಿಕೆ ಸಿಗುತ್ತದೋ ಅದನ್ನು ಪಡೆಯಿರಿ. ಆದರೆ ಮೊದಲ ಡೋಸ್‌ ಯಾವ ಲಸಿಕೆ ಪಡೆದಿದ್ದೀರೋ 2ನೇ ಡೋಸ್‌ ವೇಳೆಯೂ ಅದೇ ಲಸಿಕೆ ಪಡೆಯಬೇಕೆಂದು ಅವರು ಸಲಹೆ ನೀಡಿದರು.

ಈಗಾಗಲೇ ದೇಶದಲ್ಲಿ ರಾಜ್ಯದಲ್ಲಿ ಲಸಿಕಾ ಪ್ರಕ್ರಿಯೆ ಆರಂಭವಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಪ್ರಕ್ರಿಯೆ ನಡೆಯುತ್ತಿದ್ದು, ಅವರಿಗೆ ಎರಡನೇ ಡೋಸ್ ಕೊಡಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ ಮೇ 10 ರಿಂದ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ಲಸಿಕೆ ನೀಡಲು ತೀರ್ಮಾನಿಸಿತ್ತು. ಆದರೆ ಇದೀಗ ಮತ್ತೆ 18 ವರ್ಷ ಮೇಲ್ಪಟ್ಟವರ ಲಸಿಕಾ ಪ್ರಕ್ರಿಯೆ ಮುಂದೂಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!