ಅಧಿಕಾರಿಗಳ ವಿರುದ್ಧ ಹೋರಾಡಿ ಬೆಳೆ ವಿಮೆ ಪಡೆದ ಕುಷ್ಟಗಿ ಮಹಿಳೆ..!

By Kannadaprabha NewsFirst Published Feb 27, 2024, 1:12 PM IST
Highlights

ಈಕೆ ದೂರನ್ನು ಪರಿಶೀಲಿಸಿದ ಕೃಷಿ ಇಲಾಖೆಯ ಆಯುಕ್ತರು, ಕುಷ್ಟಗಿ ತಾಲೂಕು ಕೃಷಿ ತಾಂತ್ರಿಕ ಸಮಿತಿ ತಪ್ಪು ಮಾಡಿದ್ದು, ಕೃಷಿ ತಾಂತ್ರಿಕ ಸಮಿತಿಯೇ ₹93,708 ಬೆಳೆ ವಿಮೆ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.

ಸೋಮರಡ್ಡಿ ಅಳವಂಡಿ 

ಕೊಪ್ಪಳ(ಫೆ.27): ಬೆಳೆಯನ್ನು ಬೆಳೆಯನು ತಪ್ಪಾಗಿ ನಮೂದಿಸಿ, ಬೆಳೆ ವಿಮಾ ಪರಿಹಾರ ಕೈತಪ್ಪಲು ಕಾರಣವಾದ ಅಧಿಕಾರಿಗಳ ವಿರುದ್ಧ ಸೆಡ್ಡು ಹೊಡೆದ ಮಹಿಳೆ ಕೃಷಿ ಇಲಾಖೆ ಯಿಂದ ಬೆಳೆ ವಿಮಾ ಪರಿಹಾರ ಪಡೆಯುವ ಆದೇಶ ಪಡೆಯುವಲ್ಲಿ ಯಶಸ್ವಿ ಯಾಗಿದ್ದಾರೆ. ಕುಷ್ಟಗಿ ತಾಲೂಕಿನ ಬೊಮ್ಮ ನಾಳ ಗ್ರಾಮದ ಯಲ್ಲಮ್ಮ ಪಡುಚಿಂತಿ ಎನ್ನುವವರೇ ಗೆದ್ದ ಮಹಿಳೆ.

ಏನಿದು ಪ್ರಕರಣ?: 

2018ರ ಮುಂಗಾರು ಹಂಗಾಮಿನಲ್ಲಿ ಯಲ್ಲಮ್ಮ ಪಡುಚಿಂತಿ ತಮ್ಮ ಐದು ಎಕರೆ ಹೊಲಕ್ಕೆ ಮೆಕ್ಕೆ ಜೋಳ ಬೆಳೆ ಹಾಕಿದ್ದರು. ಮಳೆ ಅಭಾವದಿಂದ ಮೆಕ್ಕೆಜೋಳ ಬೆಳೆ ಕೇವಲ 2 ತಿಂಗಳಲ್ಲೇ ಒಣ ಗಿದ್ದು, ಫಸಲ್ ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ಕಂತು ಪಾವತಿ ಮಾಡಿದ್ದರು. ಮೆಕ್ಕೆಜೋಳ ಒಣಗಿದ್ದರಿಂದ ಅದನ್ನು ನೆಲಸಮ ಮಾಡಿ ಶೇಂಗಾ ಬೆಳೆ ಬಿತ್ತನೆ ಮಾಡಿದ್ದಾರೆ. ಬೆಳೆ ದರ್ಶಕ ಆ್ಯಪ್‌ನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಶೇಂಗಾ ಬೆಳೆ ತುಂಬಿದ್ದು, ಅದಕ್ಕೆ ಮಹಿಳೆ ನಿಯಮಾನುಸಾರ ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಈ ಆಕ್ಷೇಪಣೆ ಪರಿಶೀಲಿಸಿಯೇ ಇಲ್ಲ.

ಮಗು ಸತ್ತಿದೆ ಎಂದು ಹೇಳಿ ಮಕ್ಕಳ ಮಾರಾಟ ಮಾಡುತ್ತಿದ್ದ ನರ್ಸ್! ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದ ಪ್ರಕರಣ ಬಯಲಿಗೆ!

2018ರ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆ ಬಹುತೇಕ ಹಾನಿಯಾಗಿದೆ ಎಂದು ಬೆಳೆ ವಿಮೆ ಪರಿಹಾರ ನೀಡಲು ಆದೇಶ ವಾಯಿತು. ಆದರೆ, ಯಲ್ಲಮ್ಮಗೆ ಬೆಳೆ ವಿಮೆ ಪರಿಹಾರ ಬರಲೇ ಇಲ್ಲ. ಇದನ್ನು ಪ್ರಶ್ನಿಸಿದಾಗ ವಿಮಾ ಕಂಪನಿಯು ಬೆಳೆ ಬೇರೆಯಾಗಿದ್ದರಿಂದ ನಾವು ವಿಮೆ ಕಂತು ವಾಪಸ್ ನೀಡಿದ್ದೇವೆ, ಹೀಗಾಗಿ ಇದನ್ನು ನೀಡಲು ಸಾಧ್ಯವಿಲ್ಲ ಎಂದಿತು. ಇಷ್ಟಕ್ಕೆ ಯಲ್ಲಮ್ಮ ಸುಮ್ಮನಾಗಲಿಲ್ಲ. ಇದು ಅಧಿಕಾರಿಗಳು ಮಾಡಿರುವ ತಪ್ಪು. ನನಗೆ ವಿಮೆ ಪರಿಹಾರ ನೀಡಲೇಬೇಕೆಂದು ಆಗ್ರಹಿಸಿದ್ದರು.

ಈಕೆ ದೂರನ್ನು ಪರಿಶೀಲಿಸಿದ ಕೃಷಿ ಇಲಾಖೆಯ ಆಯುಕ್ತರು, ಕುಷ್ಟಗಿ ತಾಲೂಕು ಕೃಷಿ ತಾಂತ್ರಿಕ ಸಮಿತಿ ತಪ್ಪು ಮಾಡಿದ್ದು, ಕೃಷಿ ತಾಂತ್ರಿಕ ಸಮಿತಿಯೇ ₹93,708 ಬೆಳೆ ವಿಮೆ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ.

click me!