ರಷ್ಯಾದಲ್ಲಿ ಸಿಲುಕಿದ ಕಲಬುರಗಿ ಯುವಕರಿಗೆ ಇನ್ನೂ ಇಲ್ಲ ಬಿಡುಗಡೆಯ ಭಾಗ್ಯ..!

Published : Feb 27, 2024, 12:48 PM IST
ರಷ್ಯಾದಲ್ಲಿ ಸಿಲುಕಿದ ಕಲಬುರಗಿ ಯುವಕರಿಗೆ ಇನ್ನೂ ಇಲ್ಲ ಬಿಡುಗಡೆಯ ಭಾಗ್ಯ..!

ಸಾರಾಂಶ

ಹಲವು ಭಾರತೀಯ ಯುವಕರು ಬಿಡುಗಡೆ ಕಂಡರೂ ಕಲಬುರಗಿ ಯುವಕರಿಗೆ ಮಾತ್ರ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. 

ಕಲಬುರಗಿ(ಫೆ.27): ರಷ್ಯಾದಲ್ಲಿ ಸಿಲುಕಿರುವ ಮೂವರು ಕಲಬುರಗಿ ಯುವಕರಿಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಹೌದು, ಹಲವು ಭಾರತೀಯ ಯುವಕರು ಬಿಡುಗಡೆ ಕಂಡರೂ ಕಲಬುರಗಿ ಯುವಕರಿಗೆ ಮಾತ್ರ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. 

ರಷ್ಯಾ ಸೇನೆಯ ಸಹಾಯಕರಾಗಿ ಕೆಲಸ ಮಾಡುತ್ತಿರುವ ಭಾರತೀಯ ಯುವಕರಿಗೆ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಭಾರತ ವಿದೇಶಾಂಗ ಇಲಾಖೆ ರಷ್ಯಾ ಜೊತೆ ಸಂಪರ್ಕಿಸಿದ ನಂತರ ಹಲವು ಯುವಕರನ್ನ ಬಿಡುಗಡೆ ಮಾಡಲಾಗಿದೆ. 

ಮೋಸದ ಜಾಲಕ್ಕೆ ಸಿಲುಕಿ ರಷ್ಯಾ ಸೇನೆ ಸೇರಿದ್ದ ಹಲವು ಭಾರತೀಯರ ಬಿಡುಗಡೆ: ಕೇಂದ್ರ

ಹಲವು ಭಾರತೀಯ ಯುವಕರ ಬಿಡುಗಡೆಯಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತ್ತು. ಆದ್ರೆ ಕಲಬುರಗಿಯ ಮೂವರು ಯುವಕರಿಗೆ ಸಿಕ್ಕಿಲ್ಲ ಇನ್ನೂ ಬಿಡುಗಡೆಯ ಭಾಗ್ಯ. ಬಿಡುಗಡೆಗೆ ಸಂಬಂಧಿಸಿದಂತೆ ಎರಡು ದಿನಗಳಿಂದ ಪ್ರಕ್ರಿಯೆಗಳು ನಡೆಯುತ್ತಿವೆ.  ನಾಳೆಯೊಳಗೆ ನಮ್ಮ ಮಕ್ಕಳ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕಲಬುರಗಿ ಯುವಕನ ತಂದೆ ನವಾಜ್ ಅಲಿ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!