ಹೈಕೋರ್ಟ್ ಹಾಗೂ ಇತರೆ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ವಕೀಲ ಕೆ.ಟಿ. ಡಾಕಪ್ಪ ಅವರು ಬೆಂಗಳೂರಿನ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.
ಬೆಂಗಳೂರು (ಫೆ.27): ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಹೈಕೋರ್ಟ್ ಹಾಗೂ ಇತರೆ ನ್ಯಾಯಾಲಯಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ವಕೀಲ ಕೆ.ಟಿ. ಡಾಕಪ್ಪ ಅವರು ಗಾಂಧಿ ಬಜಾರ್‌ನಲ್ಲಿ ನಿನ್ನೆ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಬೈಕ್ ಡಿಕ್ಕಿ ಹಿರಿಯ ವಕೀಲರು ಸಾವನ್ನಪ್ಪಿದ್ದಾರೆ. ಮೃತರನ್ನು ಶಿವಮೊಗ್ಗ ಮೂಲದ ಹಿರಿಯ ವಕೀಲ ಕೆ.ಟಿ.ಡಾಕಪ್ಪ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ಅಪಘಾತವಾಗಿದೆ. ವಕೀಲರು ತಮ್ಮ ಕಾರನ್ನು ನಿಲ್ಲಿಸಿ ಪಕ್ಕದ ಡಿವಿಜೆ ರಸ್ತೆಯ ಕಚೇರಿಗೆ ಹೋಗಿದ್ದರು. ನಂತರ, ರಾತ್ರಿ ವೇಳೆ ಮನೆಗೆ ವಾಪಸ್ ಹೋಗಲು ಕಾರಿನತ್ತ ಬರುವಾಗ ಕೆಟಿಎಂ ಬೈಕ್ ಸವಾರನೊಬ್ಬ ವಕೀಲರಿಗೆ ಬಂದು ಗುದ್ದಿದ್ದಾನೆ. ಇದರಿಂದ ತೀವ್ರ ಗಾಯಕ್ಕೊಳಗಾಗಿದ್ದ ವಕೀಲರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಬೆಳಗ್ಗಿನ ಜಾವ 3 ಗಂಟೆಗೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
undefined
ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ; ಪ್ರತಿವರ್ಷ 148 ಮಹಿಳೆಯರ ಮೇಲೆ ಅತ್ಯಾಚಾರ, 2,630 ಮಂದಿಗೆ ಕಿರುಕುಳ
ಇನ್ನು ಡಾಕಪ್ಪ ಅವರು ಶಿವಮೊಗ್ಗ ಮೂಲದ ತೀರ್ಥಹಳ್ಳಿಯ ಕೌರಿ ಮೂಲದವರಾಗಿದ್ದಾರೆ. ಹೈಕೋರ್ಟ್ ಹಾಗೂ ಇತರ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದರು. ಆದರೆ, ಈಗ ನಡೆದುಕೊಂಡು ಹೋಗುವಾಗ ಬೈಕ್ ಬಂದು ಗುದ್ದಿ ದಾರುಣ ಸಾವನ್ನಪ್ಪಿದ್ದಾರೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಕೆಟಿಎಂ ಬೈಕ್ ನಲ್ಲಿ ಅತೀ ವೇಗವಾಗಿ ಬಂದು ವಕೀಲ ಡಾಕಪ್ಪ ಅವರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನನ್ನು ಆದಿತ್ಯ ಎಂದು ಗುರುತಿಸಲಾಗಿದೆ. ಕಾಲೇಜು ವಿದ್ಯಾರ್ಥಿಯಾದ ಈತನಿಗೆ ಕಳೆದ 20 ದಿನದ ಹಿಂದಷ್ಟೇ ಲೆಸೆನ್ಸ್ ನೀಡಲಾಗಿತ್ತು. ಇನ್ನು ಅಪಫಾತದಲ್ಲಿ ವಕೀಲ ಡಾಕಪ್ಪ ಅವರಿಗೆ ಗುದ್ದಿದ ನಂತರವೂ ನಿಯಂತ್ರಣಕ್ಕೆ ಬೈಕ್ ನಿಯಂತ್ರಣಕ್ಕೆ ಸಿಗದೇ ಅಲ್ಲಿಯೇ ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ವಿದ್ಯಾರ್ಥಿ ಆದಿತ್ಯಾಗೂ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಆಗಿದ್ದಾನೆ. ಬಸವನಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತಂತೆ ಬಸವನಗುಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ತಾಯಿ-ಮಗಳಿಗೆ ಸಾಮಾಜಿಕ ಬಹಿಷ್ಕಾರ!
ಶಿವಮೊಗ್ಗ (ಫೆ.27): ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರತಿನಿಧಿಸುವ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ಕುಳವಳ್ಳಿಯಲ್ಲಿ ಈಡಿಗ ಸಮುದಾಯದ ತಾಯಿ ಮತ್ತು ಮಗಳು ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿದ್ದಾರೆ. ಮಹಿಳೆಯ ಮಗ, ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ನಂತರ ಆತನ ತಾಯಿ ಮತ್ತು ಸಹೋದರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಈ ಸಂಬಂಧ ತಾಯಿ ಸರೋಜಮ್ಮ ಮತ್ತು ಮಗಳು ಪವಿತ್ರಾ ಅವರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಸಂಪರ್ಕಿಸಿ ನ್ಯಾಯ ಕೇಳಿದ್ದಾರೆ. ನನ್ನ ಮಗ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಮಗ ಅಪರಾಧ ಎಸಗಿದ ಪರಿಣಾಮವಾಗಿ, ಅದೇ ಸಮುದಾಯದ ಸುಮಾರು 60 ಕುಟುಂಬಗಳು ಸರೋಜಮ್ಮ ಮತ್ತು ಪವಿತ್ರಾ ಅವರಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ವರದಿಯಾಗಿದೆ.
ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!
ಯಾರಾದರೂ ತಮ್ಮೊಂದಿಗೆ ಮಾತನಾಡಿದರೆ 1,000 ರೂಪಾಯಿ ದಂಡ ವಿಧಿಸುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ. ಅಲ್ಲದೆ ತಮ್ಮ ಮನೆಗೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ತಾಯಿ ಮತ್ತು ಮಗಳು ಆರೋಪಿಸಿದ್ದಾರೆ. ಇದಲ್ಲದೆ, ಅವರು ಗ್ರಾಮಕ್ಕೆ ಮರಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಮನೆ ಕಳ್ಳತನವಾಗಿದೆ. ಗ್ರಾಮದೊಳಗೆ ಯಾರ ಬೆಂಬಲವೂ ಇಲ್ಲ ಎಂದ ಸರೋಜಮ್ಮ, ಕಾನೂನು ಬಾಹಿರವಾಗಿ ಬಹಿಷ್ಕಾರ ಹಾಕಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಬಹಿಷ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.