'ಸಂಸದ ತೇಜಸ್ವಿ ಸೂರ್ಯ ಪಂಚರ್ ಹಾಕೋ ವ್ಯಕ್ತಿ, ಇಂಥವರೇ ಈ ದೇಶಕ್ಕೆ ಬೇಕು'

By Suvarna News  |  First Published Jan 9, 2020, 10:41 AM IST

ಅನರ್ಹರನ್ನು ಗೆಲ್ಲಿಸಿದ್ದು ನಿಜವಾಗಿ ಕಾನೂನಿಗೆ ಅಗೌರವ ತರುವ ಕೆಲಸ| 15 ರಲ್ಲಿ 12 ಜನರು ಗೆದಿದ್ದು ಸಂವಿಧಾನಕ್ಕೆ ಅಗೌರವ ತರುವ ಕೆಲಸ| ಸರ್ಕಾರ ನಡೆಸೋರಿಗೆ ಕಾನೂನು ಗೊತ್ತೆ ಎಲ್ಲ|


ಕೊಪ್ಪಳ(ಜ.09): ಅನರ್ಹ ಶಾಸಕರು ಗೆದ್ದಿದ್ದು, ಜನರಿಂದಲ್ಲ,  EVM ಮಶಿನ್‌ನಿಂದ ಗೆದ್ದಿದ್ದು ಎಂದು ಜಿಲ್ಲೆಯ ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅವರು ಹೇಳಿದ್ದಾರೆ. 

ಗುರುವಾರ ಕುಷ್ಟಗಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, EVM ಮಶಿನ್ ಮೇಲೆ ನನಗೆನೋ ಅನುಮಾನ ಇದೆ, ಯಾರೇ ಏನ್ ಅಂದುಕೊಳ್ಳಲಿ, ನನಗೆ ಅನುಮಾನ ಇದ್ದೇ ಇದೆ. ಇದು ನನ್ನ ಮನಸ್ಸಿನ ಅನಸಿಕೆಯಾಗಿದೆ ಎಂದು ಹೇಳಿದ್ದಾರೆ.  

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನರ್ಹರೆಂದು ನ್ಯಾಯಾಲಯ ತೀರ್ಮಾನ ಮಾಡಿತ್ತು, ಅಂತವರನ್ನ ಚುನಾಯಿತರಾಗಿ ಮಾಡಲು ಸಾಧ್ಯವಿಲ್ಲ. ಅನರ್ಹರನ್ನು ಗೆಲ್ಲಿಸಿದ್ದು ನಿಜವಾಗಿ ಕಾನೂನಿಗೆ ಅಗೌರವ ತರುವ ಕೆಲಸವಾಗಿದೆ. 15 ರಲ್ಲಿ 12 ಜನರು ಗೆದಿದ್ದು ಸಂವಿಧಾನಕ್ಕೆ ಅಗೌರವ ತರುವ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.  

ಬಿಜೆಪಿಯವರು ಇತಿಹಾಸವನ್ನ ಓದಬೇಕು. ಸಂಸದ ತೇಜಸ್ವಿ ಸೂರ್ಯ ಅವರನ್ನ ಪಂಚರ್ ಹಾಕೋ ವ್ಯಕ್ತಿ ಎಂದು ಜರಿದಿರುವ ಬಯ್ಯಾಪುರ ಅವರು, ಪಂಚರ್ ಹಾಕೋರು ಈ ದೇಶಕ್ಕೆ ಬೇಕು. ಸರ್ಕಾರ ನಡೆಸೋರಿಗೆ ಕಾನೂನು ಗೊತ್ತೆ ಎಲ್ಲ, ಕಾಗೆ ಕೈಗೆ ಹಿರೇತನ ಕೊಟ್ರೇ ಏನೋ ಮಾಡಿತ್ತು ಅಂತಾರೆಲ್ಲ ಎಂದು ಅಮರೇಗೌಡ ಬಯ್ಯಾಪುರ ವ್ಯಂಗ್ಯವಾಡಿದ್ದಾರೆ. 
 

click me!