2 ವರ್ಷದಿಂದ ದೋಟಿಹಾಳ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಬೀಗ, ಧೂಳುಮಯವಾದ ನೇಯುವ ಮಗ್ಗಗಳು!

By Suvarna News  |  First Published Nov 15, 2022, 10:32 PM IST

 ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳದ ‘ಖಾದಿ ಗ್ರಾಮದ್ಯೋಗ ಕೇಂದ್ರ’ಕ್ಕೆ ಎರಡು ವರ್ಷದಿಂದ ಬೀಗ ಹಾಕಲಾಗಿದ್ದು, ಸಹಕಾರ ಇಲಾಖೆ ಹಾಗೂ ಖಾದಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 


ವರದಿ: ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ (ನ.15): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳದ ‘ಖಾದಿ ಗ್ರಾಮದ್ಯೋಗ ಕೇಂದ್ರ’ಕ್ಕೆ ಎರಡು ವರ್ಷದಿಂದ ಬೀಗ ಹಾಕಲಾಗಿದ್ದು, ಸಹಕಾರ ಇಲಾಖೆ ಹಾಗೂ ಖಾದಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕೇಂದ್ರದ ಕಾರ್ಯದರ್ಶಿಯಾಗಿದ್ದ ನಾರಾಯಣಪ್ಪ ಪತ್ತಾರ ಅವರು ನಿಧನರಾಗಿ ಸುಮಾರು ಒಂದೂವರೆ ವರ್ಷವಾದರೂ ಸಂಬಂಧಪಟ್ಟಅಧಿಕಾರಿಗಳು ನೂತನ ಕಾರ್ಯದರ್ಶಿಯನ್ನು ನೇಮಕ ಮಾಡಿಲ್ಲ. ಅಲ್ಲದೇ ಸಂಘದ ಅಧ್ಯಕ್ಷ ಮುಸಂಗಪ್ಪ ಜನಿವಾರದ ಅವರು ನಿಧನರಾಗಿ ವರ್ಷವಾದರೂ ಆ ಸ್ಥಾನಕ್ಕೆ ಉಪಚುನಾವಣೆ ಮಾಡಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ. ಈ ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ನೇಯುವ ಮಗ್ಗಗಳು, ನೂಲು ಸೇರಿದಂತೆ ಲಕ್ಷಾಂತರ ರುಪಾಯಿ ಮೊತ್ತದ ಸಂಬಂಧಪಟ್ಟಸಾಮಗ್ರಿಗಳಿವೆ. ಅವೆಲ್ಲ ಧೂಳು ತಿನ್ನುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆಯ ಕೊರತೆಯಿಂದ ಸಂಪೂರ್ಣವಾಗಿ ಕೆಲಸ ನಿಲ್ಲಿಸಿವೆ. ಇದನ್ನೇ ಅವಲಂಬಿಸಿದ್ದ ಕೆಲವು ನೇಕಾರ ಕುಟುಂಬಗಳು ಬದುಕು ಸಾಗಿಸಲು ಚರಕ ಕೈಬಿಟ್ಟು ಪರ್ಯಾಯ ಮಾರ್ಗದಲ್ಲಿ ಸಾಗುವಂತಾಗಿದೆ.

Tap to resize

Latest Videos

undefined

ಬಟ್ಟೆತಯಾರಿಕೆ: ಖಾದಿ ಗ್ರಾಮದ್ಯೋಗ ಕೇಂದ್ರದಲ್ಲಿ ಹಲವು ವರ್ಷಗಳ ಹಿಂದೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಕೇಂದ್ರದಲ್ಲಿ ಲುಂಗಿ, ಟವೆಲ್‌, ಧೋತಿ ಸೇರಿದಂತೆ ವಿವಿಧ ಬಟ್ಟೆಗಳು ತಯಾರಾಗುತ್ತಿದ್ದವು. ಕಾರ್ಯದರ್ಶಿಯಾಗಿದ್ದ ನಾರಾಯಣಪ್ಪ ಅವರು ತಮ್ಮ ಅಧಿಕಾರವಧಿಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಬಟ್ಟೆಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಆದರೆ ಈಗ ಉತ್ಪಾದನಾ ಕೇಂದ್ರ ಬಂದಾಗಿದ್ದು, ಬಟ್ಟೆತಯಾರಿಕೆ ಹಾಗೂ ಮಾರಾಟ ಸ್ಥಗಿತಗೊಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿಯ ಗರಿ

 ದೋಟಿಹಾಳ ಖಾದಿ ಗ್ರಾಮದ್ಯೋಗ ಕೇಂದ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದು ಕೇಂದ್ರದ ಆಡಳಿತ ಮಂಡಳಿಯ ಕಾರ್ಯ ಸ್ಥಗಿತಗೊಂಡಿದ್ದು, ಅದರ ಪರಿಣಾಮವಾಗಿ ಖಾದಿ ಕೇಂದ್ರವು ಸ್ಥಗಿತಗೊಂಡಿದೆ. ಈ ಆಡಳಿತ ಮಂಡಳಿಯನ್ನು ಪುನಶ್ಚೇತನಗೊಳಿಸಿ ಖಾದಿ ಕೇಂದ್ರವನ್ನು ಪ್ರಾರಂಭ ಮಾಡಲಾಗುವುದು. ಕಾರ್ಯದರ್ಶಿಯ ನೇಮಕಾತಿ ಜವಾಬ್ದಾರಿ ಆಡಳಿತ ಮಂಡಳಿಗೆ ನೀಡಲಾಗಿದೆ.
-ಬಸಪ್ಪ ಗಾಳಿ, ಸಹಕಾರ ಅಭಿವೃದ್ಧಿ ಅಧಿಕಾರಿ, ಕುಷ್ಟಗಿ

Rozgar Mela: ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಮೋದಿ, 75 ಸಾವಿರ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ! 

ನಮ್ಮ ಕೇಂದ್ರದ ಕಾರ್ಯದರ್ಶಿಯಾಗಿದ್ದ ನಾರಾಯಣಪ್ಪ ಪತ್ತಾರ ಅವರ ನಿಧನದ ನಂತರ ನೂತನ ಕಾರ್ಯದರ್ಶಿ ನೇಮಕಕ್ಕಾಗಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ನೀವೇ ಯಾರನ್ನಾದರೂ ತಾತ್ಕಾಲಿಕವಾಗಿ ನೇಮಿಸಿ, ಇಲ್ಲವೇ ಎಲ್ಲರೂ ರಾಜೀನಾಮೆ ಕೊಡಿ ಎಂದಿದ್ದಾರೆ. ನಮ್ಮ ಆಡಳಿತ ಮಂಡಳಿಯಲ್ಲಿ ಬಹಳಷ್ಟುಜನ ವಿದ್ಯಾವಂತರಿಲ್ಲ. ಕಾರ್ಯದರ್ಶಿಯ ನೇಮಕ ಮಾಡಿ ನಡೆಸಲು ಸಾಧ್ಯವಾಗಿಲ್ಲ.
-ಶರಣಪ್ಪ ಗೌಂಡಿ, ಖಾದಿ ಗ್ರಾಮೋದ್ಯೋಗ ಕೇಂದ್ರದ ಉಪಾಧ್ಯಕ್ಷರು

click me!