ಸುರಪುರ: ಅನೈತಿಕ ಚಟುವಟಿಕೆಗಳ ತಾಣಗಳಾದ ಬಿಇಒ ಕಟ್ಟಡ..!

By Kannadaprabha News  |  First Published Nov 15, 2022, 10:00 PM IST

ಬಿಇಒ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಕುಡುಕರ, ಜೂಜುಕೋರರ ಅಡ್ಡೆಯಾಗಿ ಪರಿವರ್ತನೆ, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕಟ್ಟಡದ ಗುಣಮಟ್ಟ


ನಾಗರಾಜ್‌ ನ್ಯಾಮತಿ

ಸುರಪುರ(ನ.15):  ಸುಜ್ಜಿತ ಕಟ್ಟಡ ನಿರ್ಮಾಣಗೊಂಡು ಶಿಕ್ಷಣ ಇಲಾಖೆಯ ಆಡಳಿತ ಯಂತ್ರ ಸುಗಮವಾಗಿ ಸಾಗಬೇಕಾದ ಸುರಪುರ ಮತ್ತು ಶಹಾಪುರ ತಾಲೂಕಿನ ನೂತನ ಬಿಇಒ ಕಚೇರಿಗಳು ಕುಡುಕರ, ಜೂಜುಕೋರರ, ಬಾಣಸಿಗರ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. 2014-15ರಿಂದಲೇ ಯಾದಗಿರಿ ಜಿಲ್ಲೆಯ ಸುರಪುರ ಮತ್ತು ಶಹಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳು ತಲಾ 40 ಲಕ್ಷ ರು.ಗಳ ವೆಚ್ಚದಲ್ಲಿ ಕಾಮಗಾರಿ ಆರಂಭವಾದರೂ ಇನ್ನು ಮುಗಿಯದಿರುವುದು ಎರಡು ತಾಲೂಕುಗಳ ದುದೈರ್‍ವದ ಸಂಗತಿಯಾಗಿದೆ.

Latest Videos

undefined

ಸುರಪುರ ಬಿಇಒ ಕಚೇರಿಯೂ ಸುಂದರ ನಿಸರ್ಗದ ಮಧ್ಯೆಯಿದೆ. ಹೀಗಾಗಿ ಕುಡುಕರ ದಂಡು ಅಲ್ಲಿಗೆ ಆಗಮಿಸಿ ಕಚೇರಿಯ ಮೊದಲನೇ ಅಂತಸ್ತಿನಲ್ಲಿ ಅಡುಗೆ ತಯಾರಿಸುತ್ತಿದ್ದಾರೆಕೆಲ್ಲೆಂದರಲ್ಲಿ ಬಾಟಲ್‌ಗಳು, ಊಟದ ತಟ್ಟೆಗಳು, ಬಟ್ಟೆಗಳು, ಕಟ್ಟೆಗೆಗಳು, ಒಲೆ ಹಚ್ಚಲು ಇಟ್ಟಿಗೆ, ಅಡುಗೆ ಮಾಡಲು ಕಟ್ಟಿಗೆ ಸೇರಿದಂತೆ ಇನ್ನಿತರೆ ಸರಂಜಾಮುಗಳು ಸ್ಥಳದಲ್ಲಿವೆ. ಅದರಂತೆ ಶಹಾಪುರದ ಬಿಇಒ ಕಚೇರಿ ಜೂಜುಕೋರರ ಅಡ್ಡೆಯಾಗಿದೆ. ಆ ಕಟ್ಟಡದಲ್ಲಿ ಬಿದ್ದಿರುವ ಇಸ್ಪೀಟ್‌ ಎಲೆಗಳು, ಕುಡಿದು ಬಿಸಾಕಿದ ಮದ್ಯದ ಬಾಟಲಿ, ಪ್ಯಾಕೇಟ್‌, ಸಿಗರೇಟು ತುಂಡುಗಳಿವೆ. ಇದ್ಯಾವುದು ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಜೆಡಿಎಸ್‌ನದ್ದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ರವಿಕುಮಾರ್‌

ಮೋಜು ಮಸ್ತಿ:

ಬಿಇಒ ಕಚೇರಿಗಳ ಸುತ್ತಮುತ್ತ ಗಿಡಗಂಟಿಗಳು ಹುಲುಸಾಗಿ ಬೆಳೆದು ನಿಂತಿವೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಕಸದ ರಾಶಿಗಳು ರಾರಾಜಿಸುತ್ತಿವೆ. ಅಪ್ಪಿತಪ್ಪಿಯೂ ಅಲ್ಲಿಗೆ ಹೋಗುವಾಗ ಎಚ್ಚರ ಅಗತ್ಯ. ಅಂತಹ ಸ್ಥಳಗಳೇ ಪುಢಾರಿಗಳ ಮೆಚ್ಚಿನ ತಾಣವಾಗಿವೆ. ವಾರದ ಕೊನೆ ಅಥವಾ ರಾತ್ರಿ ಹೊತ್ತಿನ ಮೋಜು ಮಸ್ತಿನ ನೆಚ್ಚಿನ ಜಾಗವಾಗಿವೆ. ಆದರೂ ಈ ಬಗ್ಗೆ ಗಮನ ಹರಿಸದಿರುವುದು ಸ್ವಚ್ಛ ಸಮಾಜದ ದುಸ್ಥಿತಿಯಾಗಿದೆ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಸಿಯುತ್ತಿರುವ ಗುಣಮಟ್ಟ:

ಭಾರತೀಯ ಗುಣಮಟ್ಟದ ಸಂಹಿತೆ (ಐಎಸ್‌ ಕೋಡ್‌) ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನು ಜಾರಿಯಲ್ಲಿದೆ. ಸರ್ಕಾರದಿಂದ ಮಾನ್ಯತೆ ಪಡೆದ ನಿರ್ಮಾಣ ಅಭಿಯಂತರರು ಕಟ್ಟಡಗಳನ್ನು ನಿರ್ಮಿಸುವಾಗ ಐಎಸ್‌ ಕೋಡ್‌ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಕಾಂಕ್ರೀಟ್‌ ಹಾಗೂ ಕಬ್ಬಿಣದ ಗುಣಮಟ್ಟದ ಆಧಾರದಲ್ಲಿ ಕಟ್ಟಡದ ಆಯಸ್ಸು ನಿರ್ಧಾರವಾಗುತ್ತದೆ. ಇದ್ಯಾವುದು ಇಲ್ಲಿ ಕಾಣಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.

ಆಡಳಿತ ವ್ಯವಸ್ಥೆಯ ನಿರ್ಲಕ್ಷ ್ಯದಿಂದಾಗಿ ಕಳೆದ 8 ವರ್ಷದಿಂದ ಪಾಳು ಬಿದ್ದು, ಪುಂಡ ಪೋಕರಿಗಳ ಅಡ್ಡೆಗಳಾಗಿ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ. ನಗರದ ಹತ್ತಿರವಿರುವ ಸ್ಥಳಗಳನ್ನು ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ತಮ್ಮ ಮಸ್ತಕದಿಂದ ತೆಗೆದು ಹಾಕಿದ್ದಾರೆ. ದೇಗುಲದಷ್ಟೇ ಪವಿತ್ರವಾದ ಬಿಇಒ ಕಟ್ಟಡಗಳನ್ನು ಸಂರಕ್ಷಿಸಬೇಕು ಎಂದು ಹೋರಾಟಗಾರ, ಶಿಕ್ಷಣ ಪ್ರೇಮಿಗಳಾದ ವೆಂಕೋಬ ದೊರೆ, ವೆಂಕಟೇಶ ಹೊಸ್ಮನಿ ಇತರರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. 

ಯಾದಗಿರಿಗೆ ತಲುಪಿದ ಶ್ರೀಶೈಲ ಜಗದ್ಗುರು ಪಾದಯಾತ್ರೆ, ಸಾವಿರಾರು ಭಕ್ತರು ಭಾಗಿ

ಕಬ್ಬಿಣ ಹಾಗೂ ಸಿಮೆಂಟ್‌ ಸೇರಿದಂತೆ ಗುಣಮಟ್ಟದ ಪರಿಕರ ಬಳಸಿ ನಿರ್ಮಿಸುವ ಕಟ್ಟಡ 99 ವರ್ಷ ಕಾಲ ಬಾಳಿಕೆ ಬರಬೇಕು. ಸ್ಟೀಲ್‌, ಇಟ್ಟಿಗೆ, ಸಿಮೆಂಟ್‌ಗೆ ತೇವಾಂಶ ಹಿಡಿದು ತನ್ನ ಗುಣಮಟ್ಟಕಳೆದುಕೊಳ್ಳತ್ತದೆ. ಪ್ಲಾಸ್ಟರ್‌ ಮಾಡದ ಕಾರಣ ಬಿಸಿಲು, ಮಳೆ, ಚಳಿಗೆ ಕಟ್ಟಡದ ಆಯುಷ್ಯ ಸುಮಾರು 5 ವರ್ಷ ಕ್ಷೀಣಿಸುತ್ತದೆ. ಸಮರ್ಪಕ ನಿರ್ವಹಣೆಯಾಗದಿದ್ದರೆ 20 ವರ್ಷಕ್ಕೆ ಕಟ್ಟಡ ಶಿಥಿಲಗೊಳ್ಳಬಹುದು ಅಂತ ಹೆಸರೇಳಲಿಚ್ಛಸದ ಕಾರ್ಯನಿರ್ವಾಹಕ ಅಭಿಯಂತರ ಹೇಳಿದ್ದಾರೆ. 

ನವೆಂಬರ್‌ ಮುಗಿಯುವುದೊರಳಗೆ ಬಿಇಒ ಕಚೇರಿ ಕಾಮಗಾರಿ ಪುನರಾಂಭಿಸಿದಿದ್ದರೆ, ಬಿಇಒ ಕಚೇರಿ, ಡಿಡಿಪಿಐ ಕಚೇರಿ, ಶಿಕ್ಷಣ ಸಚಿವರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಸರಕಾರದ ಹಣ ಸದ್ವಿನಿಯೋಗ ಆಗುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಅಂತ ಸುರಪುರದ ದಲಿತ ಮುಖಂಡ ಭೀಮಣ್ಣ ಸಿಂಧಗೇರಿ ತಿಳಿಸಿದ್ದಾರೆ. 
 

click me!