ಕೊಡಚಾದ್ರಿ ಬೆಟ್ಟವೇರಿದ ಕುಂದಾಪುರ ಪೊಲೀಸರು!

By Kannadaprabha News  |  First Published Nov 24, 2019, 9:47 AM IST

ಪ್ರತಿ ದಿನ ಕೇಸು, ಫೈಲು, ಬಂದೋಬಸ್ತ್, ಗಸ್ತು ತಿರುಗುವ ಜಂಜಾಟಗಳಿಂದ ಬಸವಳಿದು ಹೋಗಿದ್ದ, ಕುಂದಾಪುರ ಪೊಲೀಸರು ಪಿಕ್ನಿಕ್‌ಗೆ ತೆರಳಿ ಮನಸ್ಸನ್ನು ಕೊಂಚ ರಿಲ್ಯಾಕ್ಸ್‌ ಆಗಿದ್ದಾರೆ. ಈ ರೀತಿ ಪೊಲೀಸರು ಸಾಮೂಹಿಕವಾಗಿ ಪಿಕ್ನಿಕ್‌ಗೆ ತೆರಳಿದ್ದು ರಾಜ್ಯ​ವ್ಯಾಪಿ ಗಮನ ಸೆಳೆ​ದಿ​ದೆ.


ಉಡುಪಿ(ನ.24): ಪ್ರತಿ ದಿನ ಕೇಸು, ಫೈಲು, ಬಂದೋಬಸ್ತ್, ಗಸ್ತು ತಿರುಗುವ ಜಂಜಾಟಗಳಿಂದ ಬಸವಳಿದು ಹೋಗಿದ್ದ, ಕುಂದಾಪುರ ಪೊಲೀಸರು ಪಿಕ್ನಿಕ್‌ಗೆ ತೆರಳಿ ಮನಸ್ಸನ್ನು ಕೊಂಚ ರಿಲ್ಯಾಕ್ಸ್‌ ಆಗಿದ್ದಾರೆ. ಈ ರೀತಿ ಪೊಲೀಸರು ಸಾಮೂಹಿಕವಾಗಿ ಪಿಕ್ನಿಕ್‌ಗೆ ತೆರಳಿದ್ದು ರಾಜ್ಯ​ವ್ಯಾಪಿ ಗಮನ ಸೆಳೆ​ದಿ​ದೆ.

ಕುಂದಾಪುರ ಪೊಲೀಸ್‌ ಠಾಣೆ ಪಿಎಸ್‌ಐ ಹರೀಶ್‌ ಆರ್‌. ನಾಯ್‌್ಕ ನೇತೃತ್ವದಲ್ಲಿ ಪ್ರೊಬೆಶನರಿ ಪಿಎಸ್‌ಐ ಗಡ್ಡೇಕರ್‌, ಎಎಸ್‌ಐ ಸುಧಾಕರ್‌, ಹೆಡ್‌ಕಾನ್ಸ್‌ಟೆಬಲ್‌ಗಳು ಹಾಗೂ ಕಾನ್ಸ್‌ಟೆಬಲ್‌ಗಳು ಸೇರಿದಂತೆ ಒಟ್ಟು 23 ಮಂದಿ ಕೊಲ್ಲೂರಿನ ಕೊಡಚಾದ್ರಿ ಬೆಟ್ಟವನ್ನು ಹತ್ತಿ ಸೂರ್ಯೋದಯ ಸೇರಿದಂತೆ ಅಲ್ಲಿನ ರಮಿಣೀಯವಾದ ಪೃಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.

Latest Videos

undefined

ಕೊಲ್ಲೂರು ಕ್ಷೇತ್ರದ ಹೆಸರಲ್ಲಿ ನಕಲಿ ವೆಬ್‌ಸೈಟ್‌ ತೆರೆದು ವಂಚನೆ

ಕುಂದಾಪುರ ಪಿಎಸ್‌ಐ ಹರೀಶ್‌ ಆರ್‌. ನಾಯ್‌್ಕ, ಮನೋರಂಜನೆಗಾಗಿ ಠಾಣೆಯಲ್ಲಿರುವ ಸಿಬ್ಬಂದಿಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಲ್ಲಿ ಪತ್ರದ ಮೂಲಕ ವಿನಂತಿಸಿಕೊಂಡಿದ್ದರು. ಆದರೆ ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಪ್ರವಾಸ ಮೊಟಕುಗೊಳಿಸಲಾಗಿತ್ತು. ತೀರ್ಪಿನ ಬಳಿಕ ಮತ್ತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನು ಮನವಿ ಮಾಡಿಕೊಂಡು ಅವರಿಂದ ಅನುಮತಿ ಬಳಿಕ ಪ್ರವಾಸಕ್ಕೆ ತಯಾರಿ ನಡೆಸಲಾಗಿದೆ.

ಸಮಸ್ಯೆಯಾಗದಂತೆ ತಯಾರಿ:

ಕುಂದಾಪುರ ಪೊಲೀಸ್‌ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ 23 ಮಂದಿ ಪುರುಷ ಸಿಬ್ಬಂದಿ ಪ್ರವಾಸದಲ್ಲಿ ಭಾಗಿಯಾಗಿದ್ದು, ಉಳಿದ ಆರು ಸಿಬ್ಬಂದಿ ಠಾಣೆಯಲ್ಲೇ ಇದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕೊಡಚಾದ್ರಿ ಬೆಟ್ಟದಲ್ಲಿ ಜಾಗರಣೆ:

ಗುರುವಾರ ಸಂಜೆ ತಮ್ಮ ಖಾಸಗಿ ವಾಹನಗಳಲ್ಲಿ ತೆರಳಿದ ಪೊಲೀಸರ ತಂಡ ಕೊಲ್ಲೂರಿಗೆ ತೆರಳಿ ಅಲ್ಲಿಂದ ಕೊಡಚಾದ್ರಿಯಲ್ಲಿ ರಾತ್ರಿ ತಂಗಲು ಕೊಲ್ಲೂರಿನ ಅರಣ್ಯಾಧಿಕಾರಿಗಳ ಅನುಮತಿ ಪಡೆದು, ಜೀಪ್‌ ಮೂಲಕ ಕೊಡಚಾದ್ರಿ ಬೆಟ್ಟವೇರಿದ್ದಾರೆ. ರಾತ್ರಿ ಅಲ್ಲಿಯೇ ಊಟ ತಯಾರಿಸಿ ರಾತ್ರಿಯಿಡೀ ಜಾಗರಣೆ ನಡೆಸಿ, ಅಪರೂಪಕ್ಕೆ ತಮಗೆ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂಡರು.

18ನೇ ಪ್ರಕರಣದಲ್ಲೂ ಸೈನೈಡ್‌ ಮೋಹನ್‌ ಅಪರಾಧ ಸಾಬೀತು

ಬೆಳಗ್ಗೆ ಸೂರ್ಯೋದಯ ವೀಕ್ಷಿಸಿ, 3 ಕಿ.ಮೀ. ದೂರದ ಸರ್ವಜ್ಞ ಪೀಠಕ್ಕೆ ಟ್ರಕ್ಕಿಂಗ್‌ ಮೂಲಕ ಸಾಗಿ, ಕೊಡಚಾದ್ರಿ ಬೆಟ್ಟದ ತುತ್ತತುದಿಯನ್ನೇರಿ ಅಲ್ಲಿನ ಪ್ರಕೃತಿ ರಮಣೀಯ ಸೌಂದರ್ಯವನ್ನು ಆಸ್ವಾದಿಸಿದರು. ಶುಕ್ರವಾರ ಸಂಜೆ ಕುಂದಾಪುರಕ್ಕೆ ವಾಪಾಸಾದ ಪೊಲೀಸರು ಮತ್ತೆ ಕರ್ತವ್ಯಕ್ಕೆ ಹಾಜರಾದರು.

ಸಾರ್ವಜನಿಕರಿಂದ ಪ್ರಶಂಸೆ:

ಕಾನೂನು ಸುವ್ಯವಸ್ಥೆ ಕಾಪಾಡಲು ಕುಟುಂಬದಿಂದ ದೂರ ಉಳಿಯುವ ಪೊಲೀಸರು ಪ್ರವಾಸ ಕೈಗೊಂಡಿರುವುದು ಉತ್ತಮ ಬೆಳವಣಿಗೆ. ಪ್ರವಾಸ ಕೈಗೊಂಡಿದ್ದರಿಂದ ಸದಾ ಕರ್ತವ್ಯದ ಒತ್ತಡದಲ್ಲೇ ಇರುತ್ತಿದ್ದ ಪೊಲೀಸರು ಒಂದಷ್ಟುಮಾತು, ಹರಟೆ, ತಮಾಷೆ ಮೂಲಕ ಮನಸ್ಸಿನ ಭಾರ ಕಡಿಮೆ ಮಾಡಿಕೊಂಡಿದ್ದಾರೆ. ಕುಂದಾಪುರ ಪೊಲೀಸರು ಕೈಗೊಂಡಿರುವ ಪ್ರವಾಸದ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ಪ್ರವಾಸಕ್ಕೆ ಸಾರ್ವಜನಿಕರು ಭೇಷ್‌ ಎಂದಿದ್ದಾರೆ.

ಇದೊಂದು ವಿಶೇಷ ಅನುಭವ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಠಾಣಾ ಸಿಬ್ಬಂದಿಗೆ ಒಂದಷ್ಟುಮನೋರಂಜನೆ ನೀಡಲು ಕೊಡಚಾದ್ರಿ ಪ್ರವಾಸ ಕೈಗೊಂಡೆವು. ಮನೋರಂಜನೆಯಿಂದ ಸ್ವಲ್ಪ ರಿಲ್ಯಾಕ್ಸ್‌ ಆಗಿದ್ದರಿಂದ, ಸಿಬ್ಬಂದಿ ಠಾಣೆಯಲ್ಲಿ ಇನ್ನೂ ಉತ್ತಮವಾಗಿ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಕಾನೂನು ಕಾಪಾಡಿಕೊಳ್ಳುವ ಜತೆಯಲ್ಲಿ ಮನೋರಂಜನೆಗೂ ಅವಕಾಶ ಕಲ್ಪಿಸಿದ್ದೇವೆ. ಒಂದು ದಿನದ ಪ್ರವಾಸ ಮನಸ್ಸಿಗೆ ಮುದ ನೀಡಿದೆ ಎಂದು ಪಿಎಸ್‌ಐ ಹರೀಶ್‌ ಆರ್‌. ನಾಯ್ಕ್ ಹೇಳಿದ್ದಾರೆ.

ಹೊಸಪೇಟೆ: ಇದೇ ನನ್ನ ಕೊನೆಯ ಎಲೆಕ್ಷನ್ ಎಂದ ಅನರ್ಹ ಶಾಸಕ

ಪೊಲೀಸ್‌ ಹಾಗೂ ಬೆರಳೆಣಿಕೆಯ ಇನ್ನಿತರ ಇಲಾಖೆಗಳನ್ನು ಹೊರತುಡಿಸಿ ಸರ್ಕಾರಿ ಸಂಬಳ ಪಡೆಯುವ ಎಲ್ಲ ಇಲಾಖೆಯ ನೌಕರರಿಗೂ ಬದುಕನ್ನು ಅನುಭವಿಸಲು ಸಮಯ ಸಿಗುತ್ತದೆ. ಆದರೆ ಪೊಲೀಸರು ಒತ್ತಡದಲ್ಲೇ ಕೆಲಸ ನಿರ್ವಹಿಸುತ್ತಾರೆ. ಕುಂದಾಪುರ ಪೊಲೀಸರು ಪ್ರವಾಸ ಕೈಗೊಂಡಿರುವುದು ಒಂದು ಒಳ್ಳೆಯ ಬೆಳವಣಿಗೆ. ಸದಾ ಒತ್ತಡದಲ್ಲಿರುವವರಿಗೆ ಇಂತಹ ಮನರಂಜನೆ ಅತ್ಯಗತ್ಯ. ನಿಜವಾಗಿಯೂ ಇಲಾಖೆಯೇ ಮುತುವರ್ಜಿ ವಹಿಸಿ ಇಂತಹ ಅವಕಾಶಗಳನ್ನು ಮತ್ತೆ ಮತ್ತೆ ಕಲ್ಪಿಸಿಕೊಡಬೇಕು ಎಂದು ಬರಹಗಾರ ಉದಯ್‌ ಶೆಟ್ಟಿಪಡುಕೆರೆ ಹೇಳಿದ್ದಾರೆ.

ಮಂಗಳೂರು ಬಂದರಿಗೆ ಬಂತು ಐಷಾರಾಮಿ ಪ್ರವಾಸಿ ನೌಕೆ..!

-ಶ್ರೀಕಾಂತ ಹೆಮ್ಮಾಡಿ

click me!