'ಕುಮಾರಸ್ವಾಮಿ ನನ್ನನ್ನು ಶತ್ರುವಿನಂತೆ ಕಂಡರು': ಸಿದ್ದು ಸಿಡಿಮಿಡಿ..!

By Kannadaprabha NewsFirst Published Aug 28, 2019, 10:21 AM IST
Highlights

ಎಚ್‌. ಡಿ. ಕುಮಾರಸ್ವಾಮಿ ನನ್ನನ್ನು ಶತ್ರುವಿನಂತೆ ಕಂಡರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಾಗವಾಡ ತಾಲೂಕಿನ ಕೃಷ್ಣಾ-ಕಿತ್ತೂರ, ಜುಗೂಳ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶ ಪರಶೀಲನೆಗೆ ಬಂದ ಸಂದರ್ಭ ಮಾತನಾಡಿ, ಪ್ರೀತಿಯಿಂದ ನೋಡಿ ಸ್ನೇಹಿತರಂತೆ ಕಂಡಿದ್ದರೆ ಏನೂ ಆಗುತ್ತಿರಲಿಲ್ಲ ಎಂದಿದ್ದಾರೆ.

ಬೆಳಗಾವಿ(ಆ.28): ಕುಮಾರಸ್ವಾಮಿ ನನ್ನನ್ನು ಶತ್ರುವಿನಂತೆ ನೋಡಿದ್ದೇ ಸಮಸ್ಯೆಯಾಗಿದ್ದು. ಮಿತ್ರರಂತೆ ನೋಡಿದ್ದರೆ ಸಮಸ್ಯೆಯೇ ಆಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂ ತ್ರಿ ಸಿದ್ದರಾಮಯ್ಯ ಹೇಳಿದರು.

ಕಾಗವಾಡ ತಾಲೂಕಿನ ಕೃಷ್ಣಾ-ಕಿತ್ತೂರ, ಜುಗೂಳ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಮಂಗಳವಾರ ಆಗಮಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮೈತ್ರಿ ಸರ್ಕಾರವನ್ನು ನಾನು ಕೆಡವಿದೆ ಎಂದು ಕುಮಾರಸ್ವಾಮಿ, ದೇವೇ ಗೌಡರು ಹೇಳುತ್ತಿರುವುದು ಹಸಿ ಸುಳ್ಳು. ಕುಮಾರಸ್ವಾಮಿ ಅವರು ನನ್ನನ್ನು ಶತ್ರುವಿನಂತೆ ನೋಡಿಕೊಂಡು ದ್ವೇಷ ಸಾಧಿ ಸುತ್ತಲೇ ಬಂದರು. ಪ್ರೀತಿಯಿಂದ ನೋಡಿ ಸ್ನೇಹಿತರಂತೆ ಕಂಡಿದ್ದರೆ ಏನೂ ಆಗುತ್ತಿರಲಿಲ್ಲ ಎಂದರು.

BSY ಸರ್ಕಾರದ ಭವಿಷ್ಯದ ಜತೆಗೆ ಮಧ್ಯಂತರ ಬಾಂಬ್‌ ಸಿಡಿಸಿದ ಸಿದ್ದು

ಕನಿಷ್ಠ ಪಕ್ಷ ಮೈತ್ರಿ ಪಕ್ಷ ನಾಯಕರಂತೆಯೂ ನನ್ನನ್ನು ಕಾಣಲಿಲ್ಲ. ಹಾಗಾಗಿ ಇಷ್ಟೆಲ್ಲ ಸಮಸ್ಯೆ ಆದವು ಎಂದರು.ಕುಮಾರಸ್ವಾಮಿ ಅವರಿಗೆ ಅಧಿಕಾರವನ್ನು ನಡೆಸಲು ಬರಲಿಲ್ಲ. ಸಮ್ಮಿಶ್ರ ಸರ್ಕಾರ ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವ ಣ್ಣನವರಿಂದ ಬಿದ್ದಿದೆಯೇ ಹೊರತು ನನ್ನಿಂದಲ್ಲ ಎಂದು ಪುನರುಚ್ಚರಿಸಿದರು.

ಬ್ಲ್ಯೂ ಫಿಲ್ಮಂ ನೋಡಿದವರಿಗೆ ಡಿಸಿಎಂ ಹುದ್ದೆ : ಸಿದ್ದರಾಮಯ್ಯ

ಕಾಗವಾಡದ ಶ್ರೀಮಂತ ಪಾಟೀಲ ಹಾಗೂ ಅಥಣಿಯ ಮಹೇಶ ಕುಮಟಳ್ಳಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು ಆರಿಸಿ ತಂದರೆ ಪಕ್ಷಕ್ಕೆ ಮೋಸಮಾಡಿ ಹೋದರು. ಅವರು ಒಳಗೊಂಡಂತೆ ಅನರ್ಹರು ಈಗ ಎಲ್ಲರೂ ಅತಂತ್ರರಾಗಿದ್ದಾರೆ ಎಂದರು  

click me!