ಮೂಲಭೂತ ಸೌಲಭ್ಯವಿಲ್ಲದೆ ಮಂಕಾದ ಮಲೆನಾಡ ಕುಗ್ರಾಮ: ಮನನೊಂದ ಗ್ರಾಮಸ್ಥರಿಂದ ಪ್ರಧಾನಿ ಮೋದಿಗೆ ಪತ್ರ

By Govindaraj S  |  First Published Aug 19, 2023, 8:41 PM IST

ಜಿಲ್ಲೆಯ ಕಳಸ ತಾಲೂಕಿನ ಕುಗ್ರಾಮ ಕುಂಬಳಡಿಕೆ ಗ್ರಾಮ ಇಂದಿಗೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಈ ಗ್ರಾಮ ಕಾಡಂಚಿನ ಕುಗ್ರಾಮ. ಕುಡಿಯೋಕೆ ನೀರಿಲ್ಲ. ಓಡಾಡೋಕೆ ರಸ್ತೆ ಇಲ್ಲ. ಕರೆಂಟ್ ಕೇಳೋದೇ ಬೇಡ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.19): ಜಿಲ್ಲೆಯ ಕಳಸ ತಾಲೂಕಿನ ಕುಗ್ರಾಮ ಕುಂಬಳಡಿಕೆ ಗ್ರಾಮ ಇಂದಿಗೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಈ ಗ್ರಾಮ ಕಾಡಂಚಿನ ಕುಗ್ರಾಮ. ಕುಡಿಯೋಕೆ ನೀರಿಲ್ಲ. ಓಡಾಡೋಕೆ ರಸ್ತೆ ಇಲ್ಲ. ಕರೆಂಟ್ ಕೇಳೋದೇ ಬೇಡ. ಇನ್ನು ಮಕ್ಕಳಿಗೆ ವಿದ್ಯಾಭ್ಯಾಸ ಅನ್ನೋದು ಮರಿಚೀಕೆಯೇ ಸರಿ. ಈ ನತದೃಷ್ಟ ಕುಗ್ರಾಮದ ಈ ಬದುಕು, ನಿನ್ನೆ-ಮೊನ್ನೆಯದ್ದಲ್ಲ. ಕಳೆದ 10 ವರ್ಷಗಳದ್ದು. ಸ್ವತಂತ್ರ ಬಂದು ಏಳೂವರೆ ದಶಕಗಳೇ ಕಳೆದರೂ ಅವ್ರು ಇಂದಿಗೂ ನಿರ್ಗತಿಕರು-ನಿರಾಶ್ರಿತರಂತೆಯೇ ಬದುಕುತ್ತಿದ್ದಾರೆ.

Tap to resize

Latest Videos

undefined

ಮೋದಿಗೆ ಪತ್ರ ಬರೆದ ಗ್ರಾಮಸ್ಥರು: ಕುಂಬಳಡಿಕೆ ಗ್ರಾಮದಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಕುಟುಂಬಗಳಿವೆ. ಅವ್ರ ನೋವಿನ ಕೂಗೂ ಯಾರಿಗೂ ಕೇಳಿಸ್ತಿಲ್ಲ.ಟಾರ್ಪಲ್‍ನಲ್ಲಿ ತಾತ್ಕಾಲಿಕ  ಶೆಡ್ ಹಾಕ್ಕೊಂಡು ನಿತ್ಯದ ಜೀವನವನ್ನು ಸಾಗಿಸುತ್ತಿದ್ದಾರೆ. ಇಲ್ಲಿನ ಜನ ಹಲವು ದಶಕಗಳಿಂದ ಇದೇ ಟಾರ್ಪಲ್ ನಲ್ಲೇ ಬದುಕ್ತಿರೋದು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಗಳಿಗೆ ಮನವಿ ಮಾಡಿ...ಮಾಡಿ... ಸುಸ್ತಾದ ಈ ಗಿರಿಜನರು ಇದೀಗ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ. ಖುದ್ದು ಗ್ರಾಮಸ್ಥರೇ ಪ್ರಧಾನಿಗೆ ಪತ್ರ ಬರೆದು ತಮ್ಮ ಗ್ರಾಮದ ಸಮಸ್ಯೆ ಹೇಳಿಕೊಂಡಿದ್ದಾರೆ. ಹಳ್ಳಿಗರ ನೋವಿಗೆ ಎಚ್ಚೆತ್ತ ಪ್ರಧಾನಿ ಕಾರ್ಯಾಲಯ ಇದೀಗ ಸಂತ್ರಸ್ಥರ ನೆರವಿಗೆ ನಿಂತಿದೆ. ಮುಂದಿನ ಹತ್ತು ದಿನದಲ್ಲಿ ಖುದ್ದು ಪ್ರಧಾನಿ ಮೋದಿಯೇ ನಿಮಗೆ ಕರೆ ಮಾಡಿ ಸಮಸ್ಯೆ ಆಲಿಸುತ್ತಾರೆ ಎಂದು ಪ್ರಧಾನಿ ಕಾರ್ಯಾಲಯದಿಂದ ತಿಳಿಸಿರುವುದಕ್ಕೆ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಪಕ್ಷ ಬಿಟ್ಟವರು ಮೋದಿಗಾಗಿ ವಾಪಸ್ ಬನ್ನಿ: ಶೆಟ್ಟರ್, ಸವದಿಗೆ ಪರೋಕ್ಷ ಆಹ್ವಾನ ನೀಡಿದ ಶೋಭಾ ಕರಂದ್ಲಾಜೆ

ಸ್ಥಳೀಯ ಆಡಳಿತಕ್ಕೆ ಮಾಹಿತಿಯೇ ಇಲ್ಲ: ನಿಮಗೆ ಏನು ಬೇಕು ಅಂತ ಕಳೆದ 10 ವರ್ಷದಿಂದ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಬಂದಿಲ್ಲ. ಯಾರಾದ್ರು ಬಂದರೆ ಸಮಸ್ಯೆ ಹೇಳಿಕೊಳ್ಳಬಹುದು. ಯಾರೂ ಬರದಿದ್ರೆ ಹೇಗೆ ಹೇಳೋದು. ನಾವು ಹೇಳಿ...ಹೇಳಿ... ಸಾಕಾಗಿದೆ ಎಂದು ಹಳ್ಳಿಗರ ತಮ್ಮ ಅಸಹಾಯಕ ಸ್ಥಿತಿಯನ್ನ ಹೊರಹಾಕುತ್ತಿದ್ದಾರೆ. ಇಲ್ಲಿ ಟಾರ್ಪಲ್ ಕಟ್ಟಿಕೊಂಡು ಬದುಕ್ತಿರೋರೆ ಹೆಚ್ಚಿದ್ದಾರೆ. ಇದು ಯತೇಚ್ಛಚಾಗಿ ಮಳೆ ಬೀಳುವ ಪ್ರದೇಶ. ಜೋರು ಮಳೆ ಬಂದ್ರೆ ಮನೆಯೊಳಗೆ ನೀರು ನಿಲ್ಲುತ್ತೆ. ಆ ರೀತಿ ಬದುಕ್ತಿದ್ದಾರೆ ಇಲ್ಲಿನ ಜನ. ಕರೆಂಟ್ ಇಲ್ಲ. ಸೀಮೆಎಣ್ಣೆಯೂ ಸಿಗಲ್ಲ. ಇಲ್ಲಿನ ಜನ ಡಿಸೇಲ್‍ನಲ್ಲಿ ದೀಪ ಉರಿಸಿಕೊಂಡು ಬದುಕ್ತಿದ್ದಾರೆ. ಮಕ್ಕಳು ಓದೋದು ಕೂಡ ಅದೇ ಡಿಸೇಲ್ ಬೆಳಕಲ್ಲಿ. 

ಶಿವಾಜಿ ಮಹಾರಾಜ್ ಪ್ರತಿಮೆ ತೆರವು ವಿವಾದ: ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಬಾಗಲಕೋಟೆ ಬಂದ್​ ಯಶಸ್ವಿ

ಹಾಗಾಗಿ, ಹಲವು ವರ್ಷಗಳಿಂದ ತಮ್ಮ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ಸಂಕಷ್ಟ ಹೇಳಿ ರೋಸಿ ಹೋದ ಜನ ನಮ್ಮ ಪಾಲಿಗೆ ಪ್ರಧಾನಿಯಾದ್ರು ಇದ್ದಾರಾ ಎಂದು ಪತ್ರ ಬರೆದಿದ್ದಾರೆ. ಕೂಡಳೇ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದ್ದು, ಗಿರಿಜನರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲು ಮುಂದಾಗಿದ್ದಾರೆ. ಆದರೆ, ಆ ವಿಷಯ ಸ್ಥಳಿಯ ಆಡಳಿತಕ್ಕೆ ತಿಳಿಯದಿರುವುದು ಗ್ರಾಮಸ್ಥರ ನೋವಿಗೆ ಕಾರಣವಾಗಿದೆ. ಒಟ್ಟಾರೆ, ಗ್ರಾಮಸ್ವರಾಜ್ಯ, ಗ್ರಾಮ ನೈರ್ಮಲ್ಯ, ಗ್ರಾಮ ರಾಮರಾಜ್ಯ ಅಂತೆಲ್ಲಾ ವೇದಿಕೆ ಮೇಲೆ ಮಾರುದ್ಧ ಭಾಷಣ ಬಿಗಿಯೋ ಜನಪ್ರತಿನಿಧಿಗಳು ಜಾಗ ನೀಡಿದ ಮೇಲೆ ಕನಿಷ್ಟ ಮೂಲಭೂತ ಸೌಕರ್ಯ ನೀಡದಿರೋದು ನಿಜಕ್ಕೂ ದುರಂತ. ಈಗ ಪ್ರಧಾನಿ ಕಾರ್ಯಲಯದಿಂದ ಹಳ್ಳಿಗರ ಪತ್ರಕ್ಕೆ ಉತ್ತರವೇನೋ ಬಂದಿದೆ. ಆದ್ರೆ, ಕೆಲಸ ಆಗುತ್ತೋ ಇಲ್ವೋ ಗೊತ್ತಿಲ್ಲ.

click me!