ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ವಿಜಯ್.ಬಿ ಎಂಬುವವರು 26-05-2021 ರಂದು ನಗರದ ಇ.ಟಿ.ಸಿ.ಎಂ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ದಾಖಲಾಗಿದ್ದರು.
ಕೋಲಾರ (ಆ.19): ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ವಿಜಯ್.ಬಿ ಎಂಬುವವರು 26-05-2021 ರಂದು ನಗರದ ಇ.ಟಿ.ಸಿ.ಎಂ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ದಾಖಲಾಗಿದ್ದರು. 26 ಮತ್ತು 27ನೇ ತಾರೀಖು ಚಿಕಿತ್ಸೆ ಪಡೆದಿದ್ದು, 28-05-2021 ರಂದು ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಆಯ್ಕೆಯಾಗಿರುತ್ತಾರೆ. ಆದ್ರೆ 26-05-2021 ಮತ್ತು 27-05-2021 ರಂದು ಆಸ್ಪತ್ರೆಯವರು 35,680 ರುಪಾಯಿ ಮೊತ್ತವನ್ನು ರೋಗಿಯಿಂದ ಪಡೆದಿರುತ್ತಾರೆ.
ಸರ್ಕಾರದ ವತಿಯಿಂದ ಚಿಕಿತ್ಸೆಗಾಗಿ ಹಣ ಅನುಮೋದನೆಯಾದರೂ ಸಹ ಹೆಚ್ಚುವರಿಯಾಗಿ ಹಣವನ್ನು ಪಡೆದಿರುವ ಕುರಿತು ವಿಜಯ್.ಬಿ. ರವರು ದೂರು ನೀಡಿದ್ದು,ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 6-12-2022 ರಂದು ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಮಟ್ಟದ ಕುಂದು ಕೊರತೆ ಪರಿಹಾರ ಸಮಿತಿಯ ಸಭೆಯನ್ನು ಹಮ್ಮಿಕೊಂಡಿದ್ದು, ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಹಿಂತಿರುಗಿಸುವಂತೆ ತಿಳಿಸಿರುತ್ತಾರೆ.
undefined
ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಒಳಗೊಂಡ ವಿಚಾರಣಾ ಸಮಿತಿಯು 28-07-2023 ರಂದು ಇ.ಟಿ.ಸಿ.ಎಂ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ದೂರುದಾರರಾದ ವಿಜಯ್.ಬಿ ರವರೊಂದಿಗೆ ಸಭೆಯನ್ನು ನಡೆಸಿ ಇ.ಟಿ.ಸಿ.ಎಂ ಆಸ್ಪತ್ರೆಯವರು ಹೆಚ್ಚುವರಿ ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದರಿಂದಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು.
ಪಕ್ಷ ಬಿಟ್ಟವರು ಮೋದಿಗಾಗಿ ವಾಪಸ್ ಬನ್ನಿ: ಶೆಟ್ಟರ್, ಸವದಿಗೆ ಪರೋಕ್ಷ ಆಹ್ವಾನ ನೀಡಿದ ಶೋಭಾ ಕರಂದ್ಲಾಜೆ
ಅದರಂತೆ ರೋಗಿಯಿಂದ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು 17-08-2023 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್.ಎಂ ಮತ್ತು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿಗಳಾದ ಡಾ|| ಎನ್.ಸಿ.ನಾರಾಯಣಸ್ವಾಮಿ ರವರ ಸಮ್ಮುಖದಲ್ಲಿ ವಿಜಯ್.ಬಿ ರವರಿಗೆ ರೂ.35,253 ರೂಗಳನ್ನು ಇ.ಟಿ.ಸಿ.ಎಂ ಆಡಳಿತ ಮಂಡಳಿಯ ಮುಖ್ಯಸ್ಥರು ಚೆಕ್ ಮುಖಾಂತರ ವಾಪಸ್ಸು ನೀಡಿದ್ದಾರೆ. ಇನ್ನು ಮುಂದೆ ಆಯುಷ್ಮಾನ್ ಭಾರತ್-ಪ್ರದಾನ ಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯ ನೋಂದಾಯಿತ ಯಾವುದೇ ಆಸ್ಪತ್ರೆಗಳು ರೋಗಿಗಳಿಂದ ಹಣವನ್ನು ಪಡೆಯದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.