ಮಣಿಪಾಲ- ಬೆಂಗಳೂರು ಮಲ್ಟಿಆಕ್ಸ್‌ಲ್‌ ವೋಲ್ವೊ ಬಸ್‌ ಆರಂಭ

Kannadaprabha News   | Asianet News
Published : Mar 06, 2020, 09:05 AM IST
ಮಣಿಪಾಲ- ಬೆಂಗಳೂರು ಮಲ್ಟಿಆಕ್ಸ್‌ಲ್‌ ವೋಲ್ವೊ ಬಸ್‌ ಆರಂಭ

ಸಾರಾಂಶ

ಕೆಎಸ್‌ಆರ್‌ಟಿಸಿ ನಿಗಮವು ಬೆಂಗಳೂರಿನಿಂದ ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ಹಾಗೂ ಮಣಿಪಾಲದಿಂದ ಅದೇ ಮಾರ್ಗವಾಗಿ ಬೆಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಕ್ಲಬ್‌ ಕ್ಲಾಸ್‌ ಮಲ್ಟಿಆಕ್ಸ್‌ಲ್‌ ವೋಲ್ವೋ ಬಸ್‌ ಸಾರಿಗೆಯನ್ನು ಮಾಚ್‌ರ್‍ 6ರಿಂದ ಬೆಂಗಳೂರಿನಿಂದ ಪ್ರಾರಂಭಿಸಲು ಯೋಜಿಸಲಾಗಿದೆ.  

ಮಂಗಳೂರು(ಮಾ.06): ಕೆಎಸ್‌ಆರ್‌ಟಿಸಿ ನಿಗಮವು ಬೆಂಗಳೂರಿನಿಂದ ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ಹಾಗೂ ಮಣಿಪಾಲದಿಂದ ಅದೇ ಮಾರ್ಗವಾಗಿ ಬೆಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಕ್ಲಬ್‌ ಕ್ಲಾಸ್‌ ಮಲ್ಟಿಆಕ್ಸ್‌ಲ್‌ ವೋಲ್ವೋ ಬಸ್‌ ಸಾರಿಗೆಯನ್ನು ಮಾಚ್‌ರ್‍ 6ರಿಂದ ಬೆಂಗಳೂರಿನಿಂದ ಪ್ರಾರಂಭಿಸಲು ಯೋಜಿಸಲಾಗಿದೆ.

ಈ ಬಸ್‌ ಬೆಂಗಳೂರು ಬಸ್‌ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟು ಮಂಗಳೂರಿಗೆ ಬೆಳಗ್ಗೆ 4.15 ಗಂಟೆ, ಉಡುಪಿ 5.15 ಗಂಟೆಗೆ ತಲುಪಿ ಮಣಿಪಾಲಕ್ಕೆ ಬೆಳಗ್ಗೆ 5.30ಕ್ಕೆ ತಲುಪಲಿದೆ.

ದಟ್ಟ ಟ್ರಾಫಿಕ್‌ನಲ್ಲೂ ಕುಕ್ಕೆಯಿಂದ 4.5 ತಾಸಲ್ಲಿ ಬೆಂಗ್ಳೂರು ತಲುಪಿದ ಆ್ಯಂಬುಲೆನ್ಸ್‌!

ಮರು ಪ್ರಯಾಣದಲ್ಲಿ ಮಣಿಪಾಲದಿಂದ ಮಧ್ಯಾಹ್ನ 3.30 ಗಂಟೆಗೆ ಹೊರಟು ಮಂಗಳೂರಿಗೆ ಸಂಜೆ 5 ಗಂಟೆಗೆ ಬಂದು ಬೆಂಗಳೂರಿಗೆ ರಾತ್ರಿ 1 ಗಂಟೆಗೆ ತಲುಪಲಿದೆ. ಈ ಸಾರಿಗೆಗೆ ಅವತಾರ್‌ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

PREV
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?