ಮಹದಾಯಿಗೆ 500 ಕೋಟಿ: ಹುಬ್ಬಳ್ಳಿ, ನವಲಗುಂದದಲ್ಲಿ ಸಂಭ್ರಮಾಚರಣೆ

By Kannadaprabha NewsFirst Published Mar 6, 2020, 8:55 AM IST
Highlights

ಮಹದಾಯಿ, ಕಳಸಾ-ಬಂಡೂರಿ 500 ಕೋಟಿ ಮೀಸಲು| ನವಲಗುಂದ ಹಾಗೂ ಹುಬ್ಬಳ್ಳಿಯಲ್ಲಿ ಹೋರಾಟಗಾರರು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ| ಹೋರಾಟಗಾರರಿಂದ ಮುಖ್ಯಮಂತ್ರಿಗೆ ಅಭಿನಂದನೆಗಳು| 

ಹುಬ್ಬಳ್ಳಿ(ಮಾ.06): ಮಹದಾಯಿ, ಕಳಸಾ-ಬಂಡೂರಿ 500 ಕೋಟಿ ಮೀಸಲಿಟ್ಟಿರುವುದಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿಯಲ್ಲಿ ಹೋರಾಟಗಾರರು ಹಾಗೂ ಬಿಜೆಪಿ ಕಾರ್ಯಕರ್ತರು ಗುರುವಾರ ಸಂಭ್ರಮಾಚರಣೆ ಮಾಡಿದ್ದಾರೆ. 

ನವಲಗುಂದದ ಸರ್ಕಲ್‌ನಲ್ಲಿ ಜಮೆಯಾದ ಬಿಜೆಪಿ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಸಿಹಿ ಹಂಚಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಯಡಿಯೂರಪ್ಪ 500 ಕೋಟಿ ಮೀಸಲಿಡುವ ಮೂಲಕ ಉತ್ತರ ಕರ್ನಾಟಕದ ಕನಸನ್ನು ನನಸು ಮಾಡಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಕೂಡಲೇ ಅರ್ಧ ಕಾಮಗಾರಿ ಮುಗಿದಿರುವ ಕಳಸಾ ನಾಲೆ ಜೋಡಣೆ ಕಾರ್ಯವನ್ನು ಮತ್ತೆ ಚಾಲನೆ ನೀಡಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಸ್.ಬಿ. ದಾನಪ್ಪಗೌಡರ, ನವಲಗುಂದ ನಗರ ಅಧ್ಯಕ್ಷ ಎನ್.ಪಿ. ಕುಲಕರ್ಣಿ, ಷಣ್ಮುಖ ಗುರಿಕಾರ, ಅಡಿವೆಪ್ಪ ಮನಮಿ, ಸಿದ್ದಣ್ಣ ಕಿಟಗೇರಿ, ಎಪಿಎಂಸಿ ಅಧ್ಯಕ್ಷ ಗುರುನಾಥ ಉಳ್ಳಾಗಡ್ಡಿ, ಬಸಣ್ಣ ಬೆಳವಣಕಿ, ಮಲ್ಲನಗೌಡ ರಾಟಿಮನಿ, ಮಲ್ಲನಗೌಡ ಹಿರೇಗೌಡರ, ಗುರಪ್ಪ ಅವರಾದಿ, ಜಯಪ್ರಕಾಶ ಬದಾಮಿ, ಈರಣ್ಣ ಚವಡಿ, ಶಂಕರಗೌಡ ರಾಯನಗೌಡರ, ಪ್ರಭು ಇಬ್ರಾಹಿಂಪೂರ, ಶಾಂತಾದೇವಿ ನಿಡವಣಿ, ಪೂರ್ಣಿಮಾ ಜೋಶಿ, ಈರನಗೌಡ ಹಿರೇಗೌಡರ, ಮಂಜುನಾಥ ಇಮ್ಮಡಿ, ಈರಣ್ಣ ಹಸಬಿ ಮುಂತಾದವರು ಉಪಸ್ಥಿತರಿದ್ದರು. 

ಹುಬ್ಬಳ್ಳಿಯಲ್ಲಿ ಸಂತಸ: 

ಮಹದಾಯಿ ಯೋಜನೆಗೆ ರಾಜ್ಯದ ಬಜೆಟ್‌ನಲ್ಲಿ 500 ಕೋಟಿ ಹಣ ಮೀಸಲಿಟ್ಟ ಹಿನ್ನೆಲೆ ಕಳಸಾ ಬಂಡೂರಿ ಹೋರಾಟ ಸಮಿತಿ ಪದಾಧಿಕಾರಿಗಳು ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ವಿಜಯ ಕುಲಕರ್ಣಿ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮಹದಾಯಿಗೆ 500 ಕೋಟಿ ಮೀಸಲಿಟ್ಟಿದ್ದು ಖುಷಿಯ ವಿಚಾರ. ಆದರೆ 2000 ಕೋಟಿ ಮೀಸಲಿಡಬೇಕೆಂಬುದು ಕಳಸಾ ಬಂಡೂರಿ ಹೋರಾಟಗಾರರ ಬೇಡಿಕೆ ಆಗಿತ್ತು. ಆದರೆ ಎತ್ತಿನಹೊಳೆ ಯೋಜನೆಗೆ 1500 ಕೋಟಿ ಇಟ್ಟು ಮಹದಾಯಿಗೆ ಕೇವಲ 500 ಕೋಟಿ ಕೊಟ್ಟಿದ್ದು ಖಂಡನೀಯ ಎಂದರು. ಈ ವೇಳೆ ಅಮೃತ ಇಜಾರೆ ಸೇರಿದಂತೆ ಹಲವರು ಇದ್ದರು.
 

click me!