ಮಂಗಳೂರು - ಬಳ್ಳಾರಿ ಮತ್ತೊಂದು ಬಸ್ ಸೇವೆ : ಶಿವಮೊಗ್ಗ ಮೂಲಕ ಸಂಚಾರ

Kannadaprabha News   | Asianet News
Published : Jan 30, 2020, 12:24 PM IST
ಮಂಗಳೂರು - ಬಳ್ಳಾರಿ ಮತ್ತೊಂದು ಬಸ್ ಸೇವೆ : ಶಿವಮೊಗ್ಗ ಮೂಲಕ ಸಂಚಾರ

ಸಾರಾಂಶ

ಮಂಗಳೂರು ಹಾಗೂ ಬಳ್ಳಾರಿ ನಡುವೆ ಮತ್ತೊಂದು ಬಸ್ ಸೇವೆ ಆರಂಭವಾಗಿದೆ. ಶಿವಮೊಗ್ಗ ಮಾರ್ಗವಾಗಿ ಈ ಬಸ್ ಸಂಚಾರ ಮಾಡಲಿದೆ. 

ಶಿವಮೊಗ್ಗ [ಜ.30]: ಕರಾರಸಾ ನಿಗಮವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ವಿಭಾಗದಿಂದ  ಗಳೂರು-ಬಳ್ಳಾರಿ-ಮಂಗಳೂರು ಮಾರ್ಗದಲ್ಲಿ ರಾಜಹಂಸ ಸಾರಿಗೆಯನ್ನು ಜ. 23ರಿಂದ ಕಾರಾರ‍ಯರಂಭ ಮಾಡಿದೆ.

ಮಂಗಳೂರು ಬಸ್‌ ನಿಲ್ದಾಣದಿಂದ ಸಂಜೆ 7 ಗಂಟೆಗೆ ಹೊರಡುವ ಬಸ್ಸು ಉಡುಪಿ-ಕುಂದಾಪುರ-ತೀರ್ಥಹಳ್ಳಿ-ಶಿವಮೊಗ್ಗ-ಚನ್ನಗಿರಿ-ಹೊಳಲ್ಕೆರೆ-ಚಳ್ಳೆಕೆರೆ - ಚಿತ್ರದುರ್ಗ ಮಾರ್ಗವಾಗಿ ಬಳ್ಳಾರಿಗೆ ಬೆಳಗ್ಗೆ 6.30ಕ್ಕೆ ತಲುಪುವುದು. 

ಬಳ್ಳಾರಿಯಿಂದ ಸಂಜೆ 5.35ಕ್ಕೆ ಹೊರಟು ಶಿವಮೊಗ್ಗದಿಂದ ರಾತ್ರಿ 11.30ಕ್ಕೆ ನಿರ್ಗಮಿಸಿ ಹಿಂದಕ್ಕೆ ಕಾರಾರ‍ಯಚರಣೆಗೊಂಡು ಮಂಗಳೂರಿಗೆ ಬೆಳಗ್ಗೆ 5 ಗಂಟೆಗೆ ತಲುಪುವುದು. 

30ರಂದು ಸಾರಿಗೆ ನೌಕರರ ಪ್ರತಿಭಟನೆ...

ಈ ಸಾರಿಗೆಗೆ ಅವತಾರ್‌ ಮೂಲಕ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಕರಾರಸಾಸಂ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್: ಭೂಸ್ವಾಧೀನಕ್ಕೆ ವೇಗ; ಎಕರೆಗೆ ₹15.60 ಕೋಟಿವರೆಗೂ ಸಿಗಲಿದೆ ಪರಿಹಾರ!
ಬೆಂಗಳೂರಲ್ಲಿ ಅಖಾಡಕ್ಕಿಳಿದ 'ಬ್ಲೂ ಫೋರ್ಸ್': ಜಲಮಂಡಳಿ ನೀರುಗಳ್ಳರಿಗೆ ಕರ್ಮ ರಿಟರ್ನ್ಸ್ ಫಿಕ್ಸ್!