KSRTC ಯಿಂದ ಹೆಚ್ಚುವರಿ ಬಸ್ ಸೇವೆ

By Kannadaprabha NewsFirst Published Sep 17, 2019, 12:33 PM IST
Highlights

ಹೆಚ್ಚುವರಿ ಬಸ್ ಸೆವೆ ಒದಗಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಅಂಕಿತ ನೀಡಿದ್ದಾರೆ. ಇದರಿಂದ ಇಲ್ಲಿನ ನಾಗರಿಕರು ಪರದಾಟ ಇನ್ನಾದರು ತಪ್ಪಬಹುದಾದ ಭರವಸೆಯಲ್ಲಿದ್ದಾರೆ. 

ಹುಬ್ಬಳ್ಳಿ [ಸೆ.17]:  ಪಟ್ಟಣದಿಂದ ಹುಬ್ಬಳ್ಳಿ ಹಾಗೂ ಲಕ್ಷ್ಮೇಶ್ವರ ಭಾಗಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸುಮಾರು 5 ಗಂಟೆಗೂ ಹೆಚ್ಚು ಕಾಲ ನಾಗರಿಕರು ಪ್ರತಿಭಟನೆ ನಡೆಸಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾರಿಗೆ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು, ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಹಲವಾರು ಬಾರಿ ಆಗ್ರಹಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದರು.

ಹುಬ್ಬಳ್ಳಿ ಹಾಗೂ ಲಕ್ಷ್ಮೇಶ್ವರಗಳಿಗೆ ಪ್ರತಿನಿತ್ಯ ನೂರಾರು ಜನರು ಸಂಚರಿಸುತ್ತಾರೆ. ಆದರೆ ಬೆಳಗಿನ ವೇಳೆಯಲ್ಲಿ ಈ ಎರಡು ಊರುಗಳಿಗೆ ಬಸ್ ಸೌಲಭ್ಯಗಳೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ನಾಗರಿಕರು, ವಿವಿಧೆಡೆ ಕೆಲಸ ಮಾಡುವ ನೌಕರರಿಗೆ ತೊಂದರೆಯಾಗುತ್ತಿದೆ. ಕಳೆದ ವಾರವಷ್ಟೇ ಸಂಶಿ ಹಾಗೂ ಕುಂದಗೋಳದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಗ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಬಸ್ ಸೌಲಭ್ಯ ಸಿಕ್ಕಿಲ್ಲ. ಇದರಿಂದ ಭೇಸತ್ತು ಇದೀಗ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು. 5 ಗಂಟೆಗಳ ಕಾಲ ಕುಂದಗೋಳದಿಂದ ಯಾವ ಬಸ್ ಸಂಚರಿಸಲಿಲ್ಲ.ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಸಾರಿಗೆ ಇಲಾಖೆ ಅಧಿಕಾರ ಎ.ಎಫ್. ನರಗುಂದಮಠ ಹಾಗೂ ಹುಬ್ಬಳ್ಳಿಯ ಸಾರಿಗೆ ಇಲಾಖೆ ಅಧಿಕಾರಿ ಐ.ಜಿ. ನಾಗಾಮಿ ಆಗಮಿಸಿ ಬೆಳಗ್ಗೆ ಹಾಗೂ ಸಂಜೆ ಹುಬ್ಬಳ್ಳಿ-ಲಕ್ಷ್ಮೇಶ್ವರ ಮಾರ್ಗಗಳಿಗೆ ನಿತ್ಯವು ತಲಾ 2 ಬಸ್ ಬಿಡಲಾಗುವುದು ಎಂದು ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆ ಹಿಂಪಡೆದರು. 

click me!