ಸಿಗಂದೂರು ಸೇತುವೆ : ಪ್ರವಾಸಿತಾಣದ ಮೆರಗು

By Kannadaprabha News  |  First Published Sep 17, 2019, 12:16 PM IST

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಸಿಗಂದೂರಿಗೆ ತೆರಳುವ ಶರಾವತಿ ನದಿಗೆ ಸೇತುವೆ ನಿರ್ಮಾಣ ಮಾಡಲಿದ್ದು ಇದೊಂದು ಪ್ರವಾಸಿ ತಾಣವಾಗುವ ಸಾಧ್ಯತೆ ಇದೆ. 


ಸಾಗರ [ಸೆ.17]:  ಸಾಗರ ತಾಲೂಕಿನ ಸಿಗಂಧೂರು ಸೇತುವೆಯು ಒಟ್ಟು 2.4 ಕಿ. ಮೀ. ನಷ್ಟು ಉದ್ದ ಇರಲಿದ್ದು, ಇದೇ ಕಾರಣಕ್ಕೆ ಈ ಸೇತುವೆ ಪ್ರವಾಸಿ ತಾಣವಾಗುವ ಸಾಧ್ಯತೆ ಇದೆ.

ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ಸೇತುವೆಯ ನಿರ್ಮಾಣ ಕೂಡ ಪ್ರವಾಸಿ ತಾಣವಾಗುವ ದೃಷ್ಟಿಯಿಂದಲೇ ಇರಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸೇತುವೆ ಕಾಮಗಾರಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಆದಷ್ಟು ಬೇಗನೆ ಕೆಲಸ ಆರಂಭಿಸಲು ಗುತ್ತಿಗೆದಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಲೆನಾಡು ಭಾಗದಲ್ಲಿ ಉಂಟಾಗಿರುವ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ  ಹಿರಿಯ ಅಧಿಕಾರಿಗಳ ಜೊತೆ ಆಯೋಜಿಸಲಾದ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಗೋವಿದಂದ ಕಾರಜೋಳ, ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್‌. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಭಾಗಿಯಾಗಿದ್ದರು.

click me!